ಕಾರವಾರ: ರಾಜ್ಯ ಸರ್ಕಾರ ಪಶುಗಳಿಗೆ ಸಹಾಯವಾಗಲಿ ಎಂದು ಅಂಬುಲೆನ್ಸ್ (Ambulance) ನೀಡಿದೆ. 44 ಕೋಟಿ ವೆಚ್ಚದಲ್ಲಿ ಪಶುಗಳಿರುವ ಸ್ಥಳಗಳಿಗೆ ಒಂದು ಅಂಬುಲೆನ್ಸ್ ನಂತೆ ಉತ್ತರ ಕನ್ನಡ ಜಿಲ್ಲೆಗೆ 13 ಅಂಬುಲೆನ್ಸ್ ನೀಡಿದೆ. ಆದರೆ ಅಂಬುಲೆನ್ಸ್ ಗೆ ಸಿಬ್ಬಂದಿ, ಚಾಲಕರಿಲ್ಲದೇ ಕಾರ್ಯಸ್ಥಗಿತ ಮಾಡಿದೆ.
Advertisement
ಒಂದೆಡೆ ಶೆಡ್‍ನಲ್ಲಿ ಅನಾಥವಾಗಿ ನಿಂತಿರುವ ಪಶು ಸಂಜೀವಿನಿ ಅಂಬುಲೆನ್ಸ್, ಮತ್ತೊಂದೆಡೆ ಸಿಬ್ಬಂದಿ ಇಲ್ಲದೇ ಖಾಲಿ ಹೊಡೆಯುತ್ತಿರುವ ಪಶು ವೈದ್ಯಕೀಯ ಆಸ್ಪತ್ರೆ (Veterinary Hospital). ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ಪಶು ಸಂಜೀವಿನಿ ಅಂಬುಲೆನ್ಸ್ ನನ್ನು ಉದ್ಘಾಟನೆ ಮಾಡಲಾಗಿತ್ತು. ಆದರೆ ಉದ್ಘಾಟನೆ ನಂತರ ತನ್ನ ಕಾರ್ಯವನ್ನೇ ಸ್ಥಗಿತ ಮಾಡಿದೆ. ಸಿಬ್ಬಂದಿ ಚಾಲಕರ ಕೊರತೆ ಜೊತೆಗೆ ವೈದ್ಯರ ಕೊರತೆಯಿಂದ ಜಿಲ್ಲೆಯಲ್ಲಿ ಪಶು ಸಂಚಾರಿ ಅಂಬುಲೆನ್ಸ್ ಆಸ್ಪತ್ರೆಯ ಆವರಣದಲ್ಲೇ ತುಕ್ಕು ಹಿಡಿಯುತ್ತಿದೆ.
Advertisement
Advertisement
ಪಶು ಇಲಾಖೆ ನೀಡಿದ ತುರ್ತು ಸೇವಾ ನಂಬರ್‍ಗೆ ಕರೆಮಾಡಿದರೆ ಅಂಬುಲೆನ್ಸ್ ಸೇವೆ ತಾತ್ಕಾಲಿಕವಾಗಿ ಇಲ್ಲ ಎಂಬ ಉತ್ತರ ದೊರೆಯುತ್ತದೆ. ಜಿಲ್ಲೆಯ ಹೆದ್ದಾರಿಯಲ್ಲಿ ಗೋವುಗಳ ಅಪಘಾತವಾದರೆ ತುರ್ತು ಸೇವೆ ಸಿಗುತ್ತಿಲ್ಲ. ಇನ್ನು ಪಶುಗಳಿಗೆ ರೋಗ ರುಜಿನಗಳು ಬಂದರೂ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲ ಅಂತ ಗೋಪಾಲಕರು ಸರ್ಕಾರದ ಕಾರ್ಯವೈಖರಿಯನ್ನು ಖಂಡಿಸಿದ್ದಾರೆ. ಇದನ್ನೂ ಓದಿ: ನನ್ನ ಜೊತೆ ಬಿಸಿನೆಸ್ ಮಾಡಲು ಯಾರೂ ಮುಂದೆ ಬರುತ್ತಿಲ್ಲ: ಡಿಕೆ ಶಿವಕುಮಾರ್ ಬೇಸರ
Advertisement
ಇನ್ನು ಜಿಲ್ಲೆಯಲ್ಲಿ 69% ನಷ್ಟು ವೈದ್ಯರು ಹಾಗೂ ಸಿಬ್ಬಂದಿಯ ಕೊರತೆ ಇದೆ. ಜಿಲ್ಲೆಯ ಕುಮಟಾ, ಹೊನ್ನಾವರ, ಶಿರಸಿ, ಯಲ್ಲಾಪುರ, ಮುಂಡಗೋಡು, ಹಳಿಯಾಳ, ಜೋಯಿಡಾ ಭಾಗದಲ್ಲಿ ಹೆಚ್ಚು ಗೋ ಸಾಕಾಣಿಕೆ ಇದ್ದು ವೈದ್ಯರು, ಸಿಬ್ಬಂದಿಯಿಲ್ಲದೆ ಖಾಸಗಿ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಕೊಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಈ ಕುರಿತು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದ್ದು ಇನ್ನೊಂದು ತಿಂಗಳಲ್ಲಿ ಈ ಸಮಸ್ಯೆ ನೀಗಿಸುವ ಭರವಸೆ ನೀಡಿದ್ದಾರೆ.
ಸರ್ಕಾರ ಪಶುಗಳ ಪಾಲನೆಗೆ ಹಲವು ಯೋಜನೆಯನ್ನೇನೋ ಜಾರಿಗೆ ತಂದಿದೆ. ಆದದರೆ ಪೂರಕ ವ್ಯವಸ್ಥೆಯನ್ನು ನೀಡದೇ ನಿರ್ಲಕ್ಷ್ಯ ಮಾಡಿದ್ದು, ಜನರು ಕೋಟಿಗಟ್ಟಲೇ ತೆರಿಗೆ ಹಣ ಸದುಪಯೋಗವಾಗದೇ ವ್ಯರ್ಥ ಮಾಡ್ತಿದೆ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.