ಬೆಂಗಳೂರು: ಮುಜರಾಯಿ ಇಲಾಖೆ (Muzrai Department) ವ್ಯಾಪ್ತಿಯಲ್ಲಿರುವ ಬೆಂಗಳೂರಿನ ಸುಪ್ರಸಿದ್ಧ ಪುರಾತನ ದೇವಾಲಯ ಪಾಳು ಬಿದ್ದಿದೆ. ದೇವಾಲಯದ ಕಟ್ಟಡ, ಗೋಪುರ ಬಿರುಕು ಬಿಟ್ಟಿದೆ ಅದರ ಮಧ್ಯೆ ಪೂಜೆ ಪುನಸ್ಕಾರ ನಡೆಯುತ್ತಾ ಇದೆ. ಮುಜರಾಯಿ ಇಲಾಖೆ ದೇವಾಲಯವನ್ನ ಸರಿಪಡಿಸುವ ಕೆಲಸ ಆಗಿಲ್ಲ. ದೇವಾಲಯದ (Temple) ಉಳಿವಿಗಾಗಿ ಭಕ್ತರು ಮನವಿ ಮಾಡ್ತಾ ಇದ್ದಾರೆ.

ಬೆಂಗಳೂರಿನ (Bengaluru) ಅವೆನ್ಯೂ ರಸ್ತೆಯಲ್ಲಿ 140 ಕ್ಕೂ ಹೆಚ್ಚು ವರ್ಷಗಳಿಂದ ಬಸವೇಶ್ವರ ದೇವಾಲಯ ಇದೆ. ಪುರಾತನ ಕಾಲದ ದೇವಸ್ಥಾನ (Ancient Temple) ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ದೇವಾಲಯ ಇದ್ದು ನಿರ್ವಹಣೆ ಆಗದೆ ಪಾಳು ಬಿದ್ದಿದೆ. ಗೋಪುರ, ಗೋಡೆ ಎಲ್ಲಾ ಬಿರುಕು ಬಿಟ್ಟಿದೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಶಿವರಾತ್ರಿ ಸಂಭ್ರಮ – ಸುಬುಧೇಂದ್ರ ತೀರ್ಥ ಶ್ರೀಗಳಿಂದ ಮಹಾರುದ್ರಾಭಿಷೇಕ

ಪ್ರತಿದಿನ ಕೂಡ ದೇವಸ್ಥಾನದಲ್ಲಿ ಪೂಜೆ ಪುರಸ್ಕಾರ ಆಗುತ್ತೆ. ಭಕ್ತಾದಿಗಳು ಬರ್ತಾರೆ ಆದರೆ ಯಾವಾಗ ಏನಾಗುತ್ತೋ ಗೊತ್ತಿಲ್ಲ. ದೇವಸ್ಥಾನದ ಕಟ್ಟಡ ಬಿರುಕು ಬಿಟ್ಟಿದೆ. ಗೋಪುರದ ಕಲ್ಲುಗಳು ಬೇರ್ಪಟ್ಟಿವೆ. ಪುರಾತನ ಕಾಲದ ದೇವಾಲಯವನ್ನ ಯಾರು ಸರಿಪಡಿಸುತ್ತಿಲ್ಲ. ಆದಷ್ಟು ಬೇಗ ಮುಜರಾಯಿ ಇಲಾಖೆ ಪಾಳು ಬಿದ್ದ ದೇವಾಲಯ ಸರಿಪಡಿಸುವ ಕಾರ್ಯ ಮಾಡುವಂತೆ ಭಕ್ತರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮಹಾಶಿವರಾತ್ರಿಯ ಮಹತ್ವ ಏನೆಂಬುದು ಗೊತ್ತೆ?

