ಮಂಡ್ಯ: ಕೇವಲ 8 ತಿಂಗಳ ಬಂಡೂರು ತಳಿಯ ಟಗರು (Bandur Breed Ram) ಬರೋಬ್ಬರಿ 1.48 ಲಕ್ಷ ರೂ.ಗೆ ಮಾರಾಟವಾಗುವ ಮೂಲಕ ದಾಖಲೆಯ ಜೊತೆಗೆ ರೈತರಲ್ಲಿ (Farmers) ಅಚ್ಚರಿಯನ್ನು ಮೂಡಿಸಿದೆ.
ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ (Malavalli) ತಾಲೂಕಿನ ಕಿರುಗಾವಲು ಗ್ರಾಮದ ಉಲ್ಲಾಸ್‌ಗೌಡ ಎಂಬುವವರಿಗೆ ಸೇರಿದ ಬಂಡೂರು ತಳಿ ಟಗರು ಇದೀಗ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. 8 ತಿಂಗಳ ಹಿಂದೆ ಉಲ್ಲಾಸ್ ಮನೆಯಲ್ಲಿಯೇ ಈ ಬಂಡೂರು ಟಗರು ಜನಸಿತ್ತು. ಬಳಿಕ ಕೆಲ ದಿನದಲ್ಲೇ ಟಿ.ನರಸೀಪುರದ ಮೂಲದವರಿಗೆ 20 ಸಾವಿರ ರೂ.ಗೆ ಟಗರನ್ನು ಮಾರಾಟ ಮಾಡಲಾಗಿತ್ತು.
ಮಾರಾಟ ಮಾಡಿದ ಬಳಿಕ ಮತ್ತೆ ಆ ಟಗರನ್ನು50 ಸಾವಿರ ರೂ.ಗೆ ಉಲ್ಲಾಸ್ ಹಾಗೂ ಅವರ ತಂದೆ ಮನೋಹರ್ ಖರೀದಿ ಮಾಡಿದ್ದರು. ಇದೀಗ ಶಿವಮೊಗ್ಗ ಮೂಲದ ಉದ್ಯಮಿ ಜವಾದ್‌ಗೆ ಅದೇ ಬಂಡೂರು ಟಗರನ್ನು ಮಾರಾಟ ಮಾಡಲಾಗಿದೆ. 8 ತಿಂಗಳ ಬಂಡೂರು ಟಗರನ್ನು ಬರೋಬ್ಬರಿ 1.48 ಲಕ್ಷ ರೂ.ಗೆ ಖರೀದಿ ಮಾಡಲಾಗಿದೆ. ಇದನ್ನೂ ಓದಿ: ಬೆಂಗಳೂರು: ವಿಧವೆ ಮದುವೆಯಾಗಿದ್ದ ಪೊಲೀಸಪ್ಪನ ವಿರುದ್ಧವೇ ವರದಕ್ಷಿಣೆ ಕಿರುಕುಳ ಕೇಸ್
ಮಾರಾಟವಾದ ಈ ಬಂಡೂರು ಟಗರಿಗೆ ವಿಶೇಷ ಪೂಜೆ ಸಲ್ಲಿಸಿ ಹಸ್ತಾಂತರ ಮಾಡಲಾಯಿತು. ಇದೇ ವೇಳೆ ಉಲ್ಲಾಸ್ ತಂದೆ ಮನೋಹರ್‌ಗೆ ಸನ್ಮಾನ ಮಾಡಿ, 1.48 ಲಕ್ಷ ರೂ. ಹಣ ನೀಡಿ ಜವಾದ್ ಟಗರನ್ನು ಕೊಂಡೊಯ್ದುದಿದ್ದಾರೆ. ಮಾಂಸದ ದೃಷ್ಟಿಕ್ಕಿಂತ ಹೆಚ್ಚಾಗಿ ಬಂಡೂರು ತಳಿ ಅಭಿವೃದ್ದಿಗಾಗಿ ಈ ಟಗರು ದಾಖಲೆ ಬೆಲೆಗೆ ಖರೀದಿ ಮಾಡಲಾಗಿದೆ.