ಬ್ರಿಟಿಷ್ ನಟಿ ಆ್ಯಮಿ ಜಾಕ್ಸನ್ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಕಲಾವಿದೆ. ಅದರಲ್ಲೂ ಸುದೀಪ್ ಜೊತೆ `ದಿ ವಿಲನ್’ ಚಿತ್ರದಲ್ಲಿ ನಟಿಸಿ ಕನ್ನಡಿಗರಿಗೂ ಪರಿಚಿತರಾಗಿದ್ದರು. ಈಗ ಸಿನಿಮಾಗಿಂತ ತಮ್ಮ ವಯಕ್ತಿಕ ವಿಚಾರಗಳಿಂದ ಹೆಚ್ಚೆಚ್ಚು ಸುದ್ದಿಯಾಗುತ್ತಿದ್ದಾರೆ. ಮಾಜಿ ಬಾಯ್‌ಫ್ರೆಂಡ್‌ನಿಂದ ಮಗು ಪಡೆದು, ಬ್ರೇಕಪ್ ನಂತರ ಬ್ರಿಟನ್ ನಟನ ಜತೆ ಏಂಗೇಜ್ ಆಗಿದ್ದಾರೆ.
ಆ್ಯಮಿ ಜಾಕ್ಸನ್ ದಕ್ಷಿಣ ಭಾರತದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿವ ನಾಯಕಿ, ಸತತ ೮ ವರ್ಷಗಳಿಂದ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದರು. ಇತ್ತೀಚಿನ ದಿನಗಳಲ್ಲಿ ಸಿನಿಮಾ ವಿಚಾರಕ್ಕಿಂತ ತಮ್ಮ ವಯಕ್ತಿಕ ವಿಚರವಾಗಿ ಹೆಚ್ಚೆಚ್ಚು ಸುದ್ದಿಯಾಗುತ್ತಿದ್ದಾರೆ. ಬ್ರಿಟಿಷ್ ಉದ್ಯಮಿ ಜಾರ್ಜ್ ಜತೆ ಆ್ಯಮಿ ರಿಲೇಷನ್‌ಶಿಪ್‌ನಲ್ಲಿದ್ದರು. ಜಾರ್ಜ್ ಪ್ರೀತಿಗೆ ಬ್ರೇಕ್ ಹಾಕಿ, ಇದೀಗ ಬ್ರಿಟನ್ ನಟ ಎಡ್ ವೆಸ್ಟ್‌ವಿಕ್ ಜತೆ ಎಂಗೇಜ್ ಆಗಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಖಾನ್ ಜೊತೆ ತಂದೆಯನ್ನೂ ಕೊಲ್ಲುವ ಬೆದರಿಕೆ : ಎಫ್.ಐ.ಆರ್ ದಾಖಲು, ಹೆಚ್ಚಿದ ಭದ್ರತೆ
ಬ್ರಿಟಿಷ್ ಉದ್ಯಮಿ ಜತೆ ಪ್ರೀತಿಯಲ್ಲಿದ್ದ ಆ್ಯಮಿಗೆ ನಂತರ ಗರ್ಭಿಣಿಯಾದರು. ಬಳಿಕ ಆಪ್ತರ ಸಮ್ಮುಖದಲ್ಲಿ ಏಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಬಳಿಕ 2019ರಲ್ಲಿ ಗಂಡು ಮಗುವಿಗೆ ತಾಯಿಯಾದ ಆ್ಯಮಿ ನಂತರ 2021ರಲ್ಲಿ ಜಾರ್ಜ್ ಬ್ರೇಕಪ್ ಮಾಡಿಕೊಂಡರು. ಈಗ ಬ್ರಿಟನ್ ನಟ ಎಡ್ ವೆಸ್ಟ್ವಿಕ್ ಜೊತೆ ಸುತ್ತಾಟ ನಡೆಸುತ್ತಿದ್ದಾರೆ. ಈ ಕುರಿತು ಇನ್ಸಾ÷್ಟಗ್ರಾಂ ಖಾತೆಯಲ್ಲೂ ಆ್ಯಮಿ ಖಚಿತಪಡಿಸಿದ್ದರು. ಆಗಾಗ ರೊಮ್ಯಾಂಟಿಕ್ ಫೋಟೋ ಹಾಕುವ ಮೂಲಕ ಆ್ಯಮಿ ಸಖತ್ ಸುದ್ದಿಯಲ್ಲಿರುತ್ತಾರೆ.
View this post on Instagram
ಪ್ರೇಮ್ ನಿರ್ದೇಶನದ `ದಿ ವಿಲನ್’ ಚಿತ್ರದ ನಂತರ 2.0 ಚಿತ್ರದಲ್ಲಿ ಕಡೆಯದಾಗಿ ಕಾಣಿಸಿಕೊಂಡಿದ್ದರು. ಈಗ ವಯಕ್ತಿಕ ಜೀವನದಲ್ಲಿ ಬ್ಯುಸಿಯಾದ ಮೇಲೆ ಬ್ರಿಟನ್‌ನಲ್ಲೇ ನೆಲೆಸಿದ್ದಾರೆ. ಮತ್ತೆ ಸಿನಿಮಾಗಳತ್ತ ಕಾಣಿಸಿಕೊಳ್ಳತ್ತಾರಾ ಅಂತಾ ಅಭಿಮಾನಿಗಳು ಕಾಯುತ್ತಿದ್ದಾರೆ.