ಪ್ರಜ್ವಲ್ ದೇವರಾಜ್‌ಗೆ ಅಮೂಲ್ಯ ನಾಯಕಿ- ಯಾವ ಸಿನಿಮಾ?

Public TV
1 Min Read
prajwal devaraj

‘ಚೆಲುವಿನ ಚಿತ್ತಾರ’ದ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ ಅಮೂಲ್ಯ, ಮದುವೆ ನಂತರ ಸಿನಿಮಾ ರಂಗದಿಂದ ದೂರ ಉಳಿದಿದ್ದರು. ಇತ್ತೀಚೆಗೆ ಮತ್ತೆ ಅವರು ಸಿನಿಮಾ ರಂಗಕ್ಕೆ ಬರುವ ಕುರಿತು ಸುಳಿವು ನೀಡಿದ್ದರು. ಯಾವ ಸಿನಿಮಾ ಏನು ಎಂಬುದರ ಬಗ್ಗೆ ಇದೀಗ ಅಪ್‌ಡೇಟ್ ಸಿಕ್ಕಿದೆ. ಪ್ರಜ್ವಲ್ ದೇವರಾಜ್ (Prajwal Devaraj) ನಟನೆಯ ಸಿನಿಮಾದಲ್ಲಿ ಗೋಲ್ಡನ್ ಕ್ವೀನ್ ನಟಿಸುತ್ತಿದ್ದಾರೆ.

AMULYA 2

ಸಿನಿಮಾ ರಂಗಕ್ಕೆ ಅಮೂಲ್ಯ ಮತ್ತೆ ಮರು ಪ್ರವೇಶ ಮಾಡುತ್ತಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಲೇ ಇತ್ತು. ಆದರೆ, ಅದಕ್ಕೆ ಅಧಿಕೃತ ಮಾಹಿತಿ ಇರಲಿಲ್ಲ. ಕೆಲ ದಿನಗಳ ಹಿಂದೆ ಸ್ವತಃ ಅಮೂಲ್ಯ (Amulya) ಅವರೇ ಸಿನಿಮಾ ರಂಗಕ್ಕೆ ಮತ್ತೆ ಬರುವ ಕುರಿತು ಮಾತನಾಡಿದ್ದರು. ಅಭಿಮಾನಿಗಳಿಗೆ ಈ ಮೂಲಕ ಖುಷಿ ಸುದ್ದಿ ಕೊಟ್ಟಿದ್ದರು.

Karavali 2ಗುರುದತ್ ಗಾಣಿಗ ನಿರ್ದೇಶನದ ‘ಕರಾವಳಿ’ (Karavali) ಸಿನಿಮಾದಲ್ಲಿ ಅಮೂಲ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್ ಹೀರೋಯಿನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ಪ್ರತಾಪ್ ಮತ್ತು ನನ್ನದು ಅಕ್ಕ ತಮ್ಮ ಸಂಬಂಧ: ಸಂದರ್ಶನದಲ್ಲಿ ಸಂಗೀತಾ ಮಾತು

ಪ್ರಜ್ವಲ್ ದೇವರಾಜ್ ನಟನೆಯ ಈ ಸಿನಿಮಾದಲ್ಲಿ ಅಮೂಲ್ಯಗೆ ವಿಭಿನ್ನವಾದ ಪಾತ್ರವಿದೆಯಂತೆ. ಶೀಘ್ರದಲ್ಲೇ ಅಮೂಲ್ಯ ಆಯ್ಕೆ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಳ್ಳಲಿದೆ. ಒಟ್ನಲ್ಲಿ ಅಭಿಮಾನಿಗಳ ಆಸೆಗೆ ನಿರಾಸೆ ಮಾಡದೇ ಉತ್ತಮ ಕಥೆಯ ಮೂಲಕ ನಟಿ ಸೆಕೆಂಡ್ ಇನ್ಸಿಂಗ್ಸ್ ಶುರು ಮಾಡ್ತಿದ್ದಾರೆ.

Share This Article