ಮಂಡ್ಯ: ನಟಿ ಅಮೂಲ್ಯ ಜಗದೀಶ್ ಮದುವೆಗೆ ಕ್ಷಣಗಣನೆ ಶುರುವಾಗಿದೆ. ಆದಿಚುಂಚನಗಿರಿಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಗಳ ಸಮ್ಮುಖದಲ್ಲಿ ಅಮೂಲ್ಯ ಜಗದೀಶ್ ಕೈ ಹಿಡಿಯಲಿದ್ದಾರೆ.
ಆದಿಚುಂಚನಗಿರಿಯ ನಾಗಲಿಂಗನ ಸನ್ನಿಧಿಯಲ್ಲಿ ಮದುವೆ ನಡೆಯಲಿದ್ದು, ಅದ್ಧೂರಿ ಮಂಟಪ ಸಜ್ಜಾಗಿದೆ. ನಾನಾ ಬಗೆಯ ಪುಷ್ಪಗಳಿಂದ ಮಂಟಪವನ್ನ ಅಲಂಕರಿಸಲಾಗಿದೆ.
Advertisement
12 ರಿಂದ 12.30 ರ ಅಭಿಜಿನ್ ಲಗ್ನದ ಶುಭ ಮುಹೂರ್ತದಲ್ಲಿ ವಿವಾಹ ನಡೆಯಲಿದೆ. ಮೊದಲಿಗೆ ಸೋದರಮಾವನಿಂದ ವಧು ವರರಿಗೆ ಕಂಕಣ ಕಟ್ಟಿಸಲಾಯ್ತು. ಮಠದ ಕಲ್ಯಾಣಿಯಲ್ಲಿ ವರ ಮತ್ತು ವಧು ಕಡೆಯವರಿಂದ ನೀರು ತುಂಬುವ ಶಾಸ್ತ್ರ ನಡೆಯಿತು.ರಾತ್ರಿ ನಡೆದ ವರಪೂಜೆಯಲ್ಲಿ ಮನೆದೇವರ ಪ್ರಾರ್ಥನೆ ಮಾಡಿದ್ರು. ನಂತರ ಕಾಲಭೈರವೇಶ್ವರ ಪಾರ್ಥನೆ, ಮಹಾಗಣಪತಿ ಪೂಜೆ ಹಾಗೂ ಬಳೆ ಶಾಸ್ತ್ರ ನಡೆಯಿತು.
Advertisement
Advertisement
ಅಮೂಲ್ಯ ಅಣ್ಣ ದೀಪಕ್ ಹಾಗೂ ಅತ್ತಿಗೆ ವರ ಜಗದೀಶ್ ಕಾಲು ತೊಳೆದು ಕನ್ಯಾಧಾನ ಮಾಡಲಿದ್ದಾರೆ. ನಂತರ ಇಬ್ಬರಿಗೂ ಸಮನ್ ಮಾಲೆ, ಜೀರಿಗೆ ಬೆಲ್ಲ ಶಾಸ್ತ್ರ ನಡೆಯಲಿದೆ. ಬಳಿಕ ಮಾಂಗಲ್ಯ ಧಾರಣೆ ಮಾಡಲಾಗುತ್ತೆ. ಕುಟುಂಬ ಸದಸ್ಯರು ಮತ್ತು ಹತ್ತಿರದ ಬಂಧುಗಳು ಮದುವೆಯಲ್ಲಿ ಭಾಗಿಯಾಗಲಿದ್ದಾರೆ. ಸಿನಿಮಾ ಗಣ್ಯರು ಕಡಿಮೆ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ ಮದುವೆಗೆ ಸಾಕ್ಷಿಯಾಗಲಿದ್ದಾರೆ.
Advertisement
ಅಮೂಲ್ಯ ಮದುವೆ ಊಟದ ಮೆನು:
ಬೆಳಗ್ಗೆ ಉಪಹಾರ: ಪೈನಾಪಲ್ ಕೇಸರಿ ಬಾತ್, ಖಾರಾಬಾತ್ , ಇಡ್ಲಿ ಚಟ್ನಿ, ಪೊಂಗಲ್, ಕಾಫಿ
ಮಧ್ಯಾಹ್ನದ ಊಟ: ಅನ್ನ ಸಾರು, ರಸಂ , ಖರ್ಜುರ ಪಾಯಸ, ಫೇಣಿ, ಬೂಂದಿ ಲಾಡು, ಬಾದಾಮ್ ಹಲ್ವ, ಕಾಜು ಬರ್ಫಿ, ಮೆಂತೆ ರೋಟಿ, ಟೊಮೆಟೋ ಹಾಗಲಕಾಯಿ ಮಸಾಲೆ ಪಲ್ಯ, ಅಕ್ಕಿ ರೊಟ್ಟಿ, ಕಾಯಿ ಚಟ್ನಿ, ವೆಜ್ ಬಿರಿಯಾನಿ, ರಾಯಿತಾ, ಆಲು ಬೆಂಡೆ ಪಲ್ಯ, ಬೇಬಿ ಕಾರ್ನ್ ಮಂಚೂರಿ.