ಬೆಂಗಳೂರು: ಮದುವೆಯಾದ ನಂತರ ಅಮೂಲ್ಯ ಚಿತ್ರರಂಗದಿಂದ ದೂರ ನಿಂತಿದ್ದರೂ ನಾನಾ ಕಾರಣಗಳಿಂದ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚೆಗಷ್ಟೇ ಪತಿಯೊಂದಿಗೆ ವಿದೇಶ ಸಂಚಾರವನ್ನೂ ಮಾಡಿ ಆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಖುಷಿ ಹಂಚಿಕೊಂಡಿದ್ದವರು ಅಮೂಲ್ಯ. ಇದೀಗ ಮತ್ತೊಂದು ಖುಷಿ ಅವರ ಬೆನ್ನೇರಿಕೊಂಡಿದೆ!
ಅಮೂಲ್ಯ ಹೊಸಾದೊಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಬೆನ್ನಿನ ಮೇಲೆ ಇತ್ತೀಚೆಗಷ್ಟೇ ಹಾಕಿಸಿಕೊಂಡಿರೋ ಈ ಆಂಕರ್ ಟ್ಯಾಟೂ ಫೋಟೋವನ್ನು ಇನ್ ಸ್ಟಾಗ್ರಾಮ್ ಮೂಲಕ ಅಭಿಮಾನಿಗಳ ಮುಂದೆ ಪ್ರದರ್ಶಿಸಿ ಅಮೂಲ್ಯ ಸಂಭ್ರಮಿಸಿದ್ದಾರೆ.
ಇಂಥಾ ಖುಷಿಗಳ ಮೂಲಕವೇ ಅಮೂಲ್ಯ ಮತ್ತೆ ಚಿತ್ರರಂಗದತ್ತಲೂ ಮುಖ ಮಾಡಿದ್ದಾರೆ. ದರ್ಶನ್ ಅವರ ಚಿತ್ರದಲ್ಲಿ ತಂಗಿಯಾಗಿ ನಟಿಸೋ ಮೂಲಕ ಅಮಾಲ್ಯಾ ನಟನೆಗೆ ಮರಳೋ ಸೂಚನೆಗಳಿವೆ. ಮದುವೆಯಾದ ನಂತರ ಒಂದಷ್ಟು ಕಾಲದ ಬಳಿಕವಾದರೂ ಅಮೂಲ್ಯ ನಟಿಸಲು ಶುರು ಮಾಡುತ್ತಾರೆಂಬ ನಿರೀಕ್ಷೆ ಅಭಿಮಾನಿಗಳದ್ದಾಗಿತ್ತು. ಆದರೆ ಅದಾಗಲೇ ಚುನಾವಣೆ ಬಂದಿದ್ದರಿಂದ ಮಾವನ ರಾಜಕೀಯ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದ ಅವರು ಇದೀಗ ಪತಿಯೊಂದಿಗೆ ಜಾಲಿ ಟ್ರಿಪ್ಪನ್ನೂ ಮುಗಿಸಿಕೊಂಡು ನಟಿಸಲು ಮನಸು ಮಾಡಿದ್ದಾರೆ.
ಆದರೆ ಅಮೂಲ್ಯ ಅಭಿಮಾನಿಗಳದ್ದು ಅವರು ಮತ್ತೆ ನಾಯಕಿಯಾಗಿ ಮಿಂಚಬೇಕೆಂಬ ಆಸೆ. ಅಮೂಲ್ಯ ಇದನ್ನು ಮನಗಂಡು ಸಾಕಾರಗೊಳಿಸುತ್ತಾರಾ ಎಂಬುದು ಸದ್ಯದ ಪ್ರಶ್ನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.instagram.com/p/Bm0LZ3mAkql/?hl=en&taken-by=amulya_moulya