ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿ ಜೈಲು ಸೇರಿರುವ ಅಮೂಲ್ಯಳ ತಾಯಿ ಮಗಳ ಕೃತ್ಯವನ್ನು ತೀವ್ರವಾಗಿ ಖಂಡಿಸಿ ಕಣ್ಣೀರು ಹಾಕಿದ್ದಾರೆ.
ಎಸ್‍ಐಟಿ ಪೊಲೀಸರ ಮುಂದೆ ಹಾಜರಾಗಿದ್ದ ಅಮೂಲ್ಯ ತಾಯಿ, ಪಾಕ್ ಪರ ಘೋಷಣೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಚಿಕ್ಕಮಗಳೂರಿನ ಕೊಪ್ಪ ಬಳಿ ಪುಟ್ಟ ಗ್ರಾಮದವರು ನಾವು, ಮಗಳು ಚನ್ನಾಗಿ ಓದಿ ದೊಡ್ಡ ವ್ಯಕ್ತಿಯಾಗಲಿ ಎಂದು ಎಲ್ಲಾ ರೀತಿಯ ಸ್ವಾತಂತ್ರ್ಯ ನೀಡಿದ್ದೇವು. ಆದರೆ ಮಗಳು ಈ ರೀತಿ ಮಾಡ್ತಾಳೆ ಎಂದು ಗೊತ್ತಿರಲಿಲ್ಲ. ಈ ಹಿಂದೆಯೇ ಅವಳಿಗೆ ನಾವು ಬುದ್ಧಿ ಹೇಳಿದ್ವಿ. ಆದರೆ ಅವಳು ಅದನ್ನು ತಿದ್ದಿಕೊಳ್ಳಲಿಲ್ಲ ಎಂದರು.
ಇದೇ ವೇಳೆ ಯಾವುದೇ ಪಾಕ್ ಪರ ಘೋಷಣೆಯನ್ನು ನಾವು ಸಮರ್ಥಿಸಿಕೊಳ್ಳಲ್ಲ. ನಾವು ಭಾರತಿಯರು ಹೇಗೆ ಬೇರೆ ದೇಶದ ಪರ ಮಾತನಾಡುವುದಕ್ಕೆ ಆಗುತ್ತೆ. ಅಮೂಲ್ಯ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ ತಪ್ಪು ಅವಳಿಗೆ ಬುದ್ಧಿ ಹೇಳ್ತಿವಿ. ಮತ್ತೆ ಈ ರೀತಿ ಅವಳು ನಡೆದುಕೊಳ್ಳದಂತೆ ನೋಡಿಕೊಳ್ತೇವೆ ಅವಳ ಭವಿಷ್ಯ ಹಾಳಾಗುತ್ತೆ ಎಂದು ಅಮೂಲ್ಯ ತಾಯಿ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾರೆ.
ನಾವು ಅಮೂಲ್ಯ ತಂದೆಗೂ ನೋಟಿಸ್ ನೀಡಿದ್ದು, ಘಟನೆ ನಡೆದ ನಂತರ ಅಮೂಲ್ಯ ತಂದೆ ಮಾನಸಿಕವಾಗಿ ಕುಗ್ಗಿದ್ದಾರೆ. ಅದೇ ಕಾರಣಕ್ಕೆ ನಮ್ಮ ಮುಂದೆ ಹಾಜರಾಗಿಲ್ಲ ಎಂದು ವಿಶೇಷ ತನಿಖಾ ತಂಡ(ಎಸ್‍ಐಟಿ) ಪೊಲೀಸರು ತಿಳಿಸಿದರು.