ಗೋಲ್ಡನ್‌ಕ್ವೀನ್ ಅಮೂಲ್ಯ (Amulya) ಬರೋಬ್ಬರಿ 8 ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಪೀಕಬೂ (Peekaboo Movie) ಚಿತ್ರವನ್ನ ಒಪ್ಪಿಕೊಳ್ಳುವ ಮೂಲಕ ಮತ್ತೆ ಬಣ್ಣದ ಬದುಕಿಗೆ ನಟಿ ಅಮೂಲ್ಯ ಹಿಂದಿರುಗಿದ್ದಾರೆ. ಮಂಜು ಸ್ವರಾಜ್ ನಿರ್ದೇಶನದ ಪೀಕಬೂ ಚಿತ್ರದಲ್ಲಿ ಅಮೂಲ್ಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ.
ನಟಿ ಅಮೂಲ್ಯ ಅವರಿಗೆ ಇಂದು (ಸೆ.14) ಹುಟ್ಟುಹಬ್ಬದ ಸಂಭ್ರಮ. ಈ ವೇಳೆ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆ ಆಗಿದೆ. ಮಂಜು ಸ್ವರಾಜ್ ಅಮೂಲ್ಯಗೆ ನಿರ್ದೇಶಿಸುತ್ತಿರುವ ಎರಡನೇ ಸಿನಿಮಾ. ಇದಕ್ಕೂ ಮುಂಚೆ `ಗೋಲ್ಡನ್ ಸ್ಟಾರ್’ ಗಣೇಶ ಮತ್ತು `ಗೋಲ್ಡನ್ ಕ್ವೀನ್’ ಅಮೂಲ್ಯ ಅವರೊಟ್ಟಿಗೆ ಶ್ರಾವಣಿ ಸುಬ್ರಮಣ್ಯ ಸಿನಿಮಾ ಮಾಡಿದ್ದು, ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಈಗ ಮಾಡುತ್ತಿರುವ ಸಿನಿಮಾ ಪೀಕಬೂ ಎನ್ನುವ ಶೀರ್ಷಿಕೆಯಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಇದನ್ನೂ ಓದಿ: ಅದೊಂದು ಹಾಡಿನಿಂದ ದಿಢೀರ್ ಫೇಮಸ್ ಆದ ಯುವತಿ – ಇನ್ಸ್ಟಾದಲ್ಲಿ 150 ಇದ್ದ ಫಾಲೋವರ್ಸ್ ಈಗ 40,000
ಸದ್ಯಕ್ಕೆ ಈ ಚಿತ್ರದ ತಾಂತ್ರಿಕ ವರ್ಗ ಅಂತಿಮವಾಗಿದ್ದು, ಕಲಾವಿದರು ಇನ್ನ ಕೆಲವೇ ದಿನಗಳಲ್ಲಿ ಅಂತಿಮಗೊಳ್ಳಲಿದೆ. ಸುರೇಶ್ ಬಾಬು ಬಿ ಚಿತ್ರದ ಛಾಯಾಗ್ರಾಹಕರಾದರೆ, ವೀರ್ ಸಮರ್ಥ್ ಮತ್ತು ಶ್ರೀಧರ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಶ್ರೀ ಕೆಂಚಾಂಬಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ಗಣೇಶ್ ಕೆಂಚಾಂಬಾ ನಿರ್ಮಿಸುತ್ತಿರುವ ಸಿನಿಮಾ ಇದಾಗಿದೆ. ಅಮೂಲ್ಯ ಅವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ಟೈಟಲ್ ಟೀಸರ್ ಬಿಡುಗಡೆಯಾಗಿದೆ.