ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿ ಜೈಲು ವಾಸ ಅನುಭವಿಸುತ್ತಿರುವ ಅಮೂಲ್ಯ ಕೊನೆಗೂ ಜಾಮೀನಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾಳೆ.
ಅಸಾವುದ್ದೀನ್ ಓವೈಸಿ ಆಗಮಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಮೂಲ್ಯ ಇಂದು ಸೆಷನ್ ಕೋರ್ಟಿನಲ್ಲಿ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾಳೆ. ಅರ್ಜಿ ಸ್ವೀಕರಿಸಿದ ನ್ಯಾಯಾಲಯ ಸರ್ಕಾರಿ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯ ತಾಯಿ ಕಣ್ಣೀರು
Advertisement
Advertisement
ಸದ್ಯ ಜೈಲಿನಲ್ಲಿಯೇ ಇರುವ ಅಮೂಲ್ಯ ಇಷ್ಟು ದಿನ ಜಾಮೀನಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿರಲಿಲ್ಲ. ಇಂದು ಅರ್ಜಿ ಸಲ್ಲಿಕೆ ಮಾಡಿದ್ದಾಳೆ. ಅಮೂಲ್ಯ ಬಂಧನದಿಂದ ಬೇಸತ್ತು ಪ್ರತಿಭಟಿಸಿದ್ದ ಆದ್ರಾ ಕೂಡ ಜೈಲಿನಲ್ಲಿಯೇ ಇದ್ದು, ಆಕೆಗೂ ಕೂಡ ಜಾಮೀನು ಮಂಜೂರಾಗಿಲ್ಲ.
Advertisement
ಮೂಲತಃ ಚಿಕ್ಕಮಗಳೂರಿನ ಕೊಪ್ಪದ ಅಮೂಲ್ಯ ಸಿಎಎ ವಿರೋಧಿ ಹೋರಾಟದಲ್ಲಿ ಗುರುತಿಸಿಕೊಂಡು ಹೋದಲ್ಲಿ ಬಂದಲ್ಲಿ ಮೈಕ್ ತಾನೇ ಕೇಳಿ ಪಡೆದುಕೊಂಡು ಮಾತನಾಡುತ್ತಿದ್ದಳು. ಅದರಂತೆ ಫ್ರೀಡಂ ಪಾರ್ಕ್ ನಲ್ಲಿ ನಡೆದಿದ್ದ ಸಿಎಎ ವಿರೋಧಿ ಹೋರಾಟದಲ್ಲಿ ಅಮೂಲ್ಯ ಇದ್ದಕ್ಕಿದ್ದಂತೆ ಕಾಣಿಸಿಕೊಂಡು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಳು.