ಬೆಂಗಳೂರು: ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಪಾಕ್ ಪ್ರೇಮಿ ಅಮೂಲ್ಯ ಲಿಯೋನ ಪರಪ್ಪನ ಅಗ್ರಹಾರ ಸೇರಿದ್ದಾಳೆ. ಈ ಪ್ರಕರಣದ ಸಂಬಂಧ ವಿಚಾರಣೆಗೆ ಹಾಜರಾಗಿದ್ದ ಪ್ರತಿಭಟನೆ ಆಯೋಜಕ, ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರಿಗೆ ಪೊಲೀಸರು ನೀರಿಳಿಸಿದ್ದಾರೆ.
ಪ್ರಕರಣದ ಸಂಬಂಧ ತನಿಖೆ ಆರಂಭಿಸಿರುವ ಉಪ್ಪಾರಪೇಟೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರಿಗೆ ನೋಟಿಸ್ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಠಾಣೆಗೆ ಹಾಜರಾದ ಇಮ್ರಾನ್ ಪಾಷಾ ಅವರಿಗೆ ಐದು ಜನ ಪೊಲೀಸ್ ಅಧಿಕಾರಿಗಳು ರೌಂಡ್ ಟೇಬಲ್ ಮಾದರಿಯಲ್ಲಿ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಇದನ್ನೂ ಓದಿ: ಅಮೂಲ್ಯಳನ್ನು ಕಾರ್ಯಕ್ರಮದಿಂದ ಕೈಬಿಟ್ಟ ಆಯೋಜಕರು- ವಿಮಾನ ಟಿಕೆಟ್ ರದ್ದು
Advertisement
Advertisement
ವಿಚಾರಣೆ ವೇಳೆ ಇಮ್ರಾನ್ ಪಾಷ, ಕಾರ್ಯ ಕ್ರಮ ಆಯೋಜನೆ ಮಾಡಿದ್ದು ನಾನೇ. ಆದರೆ ಅದಕ್ಕೆ ಅಮೂಲ್ಯಳಿಗೆ ಆಹ್ವಾನ ಕೊಟ್ಟವರು ಯಾರು? ಅವಳಿಗೆ ವಿಐಪಿ ಪಾಸ್ ಕೊಟ್ಟವರು ಯಾರು? ಬ್ಯಾಡ್ಜ್ ಕೊಟ್ಟವರು ಯಾರು? ಅವಳನ್ನು ವೇದಿಕೆ ಮೇಲೆ ಬಿಟ್ಟವರು ಯಾರು ಎನ್ನುವುದು ಪ್ರಶ್ನೆಗಳಿಗೆ ಪಾಷಾ ಅವರು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಇದನ್ನೂ ಓದಿ: ಅಮೂಲ್ಯ ಜೊತೆ ವೇದಿಕೆಯಲ್ಲಿದ್ದ ಎಲ್ಲರ ಮೇಲೆ ದೇಶದ್ರೋಹ ಕೇಸ್ ಹಾಕಿ: ಅನಂತ್ ಕುಮಾರ್ ಹೆಗ್ಡೆ
Advertisement
ಇದೇ ವಿಚಾರಕ್ಕೆ ಪೊಲೀಸರು ಬೇರೆ ಬೇರೆ ಆಯಾಮದಲ್ಲಿ ಇಮ್ರಾನ್ ಪಾಷಾ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆಗಳಿಂದ ಕಕ್ಕಾಬಿಕ್ಕಿಯಾದ ಇಮ್ರಾನ್ ಪಾಷಾ ನಂಗೇನು ಗೊತ್ತಿಲ್ಲ. ದಯವಿಟ್ಟು ನನ್ನ ಬಿಟ್ಟುಬಿಡಿ ಸರ್ ಅಂತ ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ಹೇಳಿಬಂದಿದೆ. ಅಷ್ಟೇ ಅಲ್ಲದೆ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೂ ಹತ್ತು ಜನರಿಗೆ ನೋಟಿಸ್ ನೀಡುವ ಸಾಧ್ಯತೆ ಇದ್ದು, ಇಮ್ರಾನ್ ಪಾಷಾ ಅವರನ್ನು ಪೊಲೀಸರು ಶನಿವಾರ ಸತತ ಆರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.