-ಪೊಲೀಸ್ ಠಾಣೆಗೆ ದೂರುದಾರರಿಗಿಲ್ಲ ಎಂಟ್ರಿ
ಬೆಂಗಳೂರು: ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಳ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಪೊಲೀಸ್ ಠಾಣೆಗೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಇನ್ನೂ ಠಾಣೆಗೆ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಿಲ್ಲ. ದೂರುದಾರರಿಗೂ ಪೊಲೀಸರು ನಾಳೆ ಬನ್ನಿ ಎಂದು ಹೇಳಿ ಕಳುಹಿಸುತ್ತಿದ್ದಾರೆ.
Advertisement
ಮೊಬೈಲ್, ಬೈಕ್ ಕಳ್ಳತನ ಕೌಟುಂಬಿಕ ಕಲಹ ವಿಚಾರಗಳ ಬಗ್ಗೆ ದೂರು ತೆಗೆದುಕೊಳ್ಳುಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಠಾಣೆಯ ಗೇಟ್ ಮುಂದೆಯೇ ಪೊಲೀಸರು ನಿಂತು ಸಿಬ್ಬಂದಿಗೆ ಮಾತ್ರ ಪ್ರವೇಶ ಕಲ್ಪಿಸಿದ್ದಾರೆ. ಠಾಣೆಯ ಮುಂಭಾಗವೇ ಕುಳಿತಿರುವ ಸಿಬ್ಬಂದಿ, ದಾಖಲೆಗಳು ಇದ್ರೆ ತೋರಿಸಿ. ಇಲ್ಲವಾದ್ರೆ ವಾಪಸ್ ಹೋಗಿ ಎಂದು ಹೇಳುತ್ತಿದ್ದಾರೆ. ದಾಖಲೆಗಳ ಸಮೇತ ಬಂದ ದೂರುದಾರರ ದೂರನ್ನು ಠಾಣೆಯ ಮುಂದೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
Advertisement
Advertisement
ಬುಧವಾರ ಮಧ್ಯಾಹ್ನ ಅಮೂಲ್ಯಳಿಗೆ ಊಟಕ್ಕೆ ಚಪಾತಿ, ಅನ್ನ ಸಾಂಬಾರ್ ನೀಡಲಾಗಿತ್ತು. ಆದರೆ ಊಟ ನೋಡಿದ ಅಮೂಲ್ಯ, ನನಗೆ ಇದೆಲ್ಲಾ ಬೇಡ ಚಿಕನ್ ಪಾಪ್ ಕಾರ್ನೇ ಬೇಕು ಹಠ ಹಿಡಿದಿದ್ದಾಳೆ. ನೀವು ತಂದು ಕೊಡ್ತಿರೋ ಇಲ್ಲ ಮಮ್ಮಿಗೆ ಹೇಳಿ ನಾನೇ ತರಿಸಿಕೊಳ್ಳೋಲೊ ಅಂತ ಹೇಳಿದ್ದಾಳೆ. ಕೊನೆಗೆ ಪೊಲೀಸರು ಅನಿವಾರ್ಯವಾಗಿ ಚಿಕನ್ ಪಾಪ್ ಕಾರ್ನ್ ತಂದು ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.