ಅಹಮದಾಬಾದ್: ಜೂನ್ ಒಂದರಿಂದ ಇಂಗ್ಲೆಂಡಿನಲ್ಲಿ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾಟದಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಅಮುಲ್ ಜರ್ಸಿಯನ್ನು ತೊಟ್ಟು ಕಣಕ್ಕೆ ಇಳಿಯಲಿದೆ.
ವಾರ್ಷಿಕ 27 ಸಾವಿರ ಕೋಟಿ ರೂ. ವ್ಯವಹಾರ ನಡೆಸಿ ಏಷ್ಯಾದ ಅತಿ ದೊಡ್ಡ ಹಾಲು ಉತ್ಪಾದಕ ಬ್ರಾಂಡ್ ಕಂಪೆನಿಯಾಗಿ ಹೊರ ಹೊಮ್ಮಿರುವ ಅಮುಲ್ ಈಗ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಜರ್ಸಿ ಮತ್ತು ಕಿಟ್ ಬ್ಯಾಗಿನ ಪ್ರಾಯೋಜಕತ್ವವನ್ನು ಪಡೆದುಕೊಂಡಿದೆ.
Advertisement
ವಿಶ್ವ ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ 4ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಮೇ 28ರಂದು ಭಾರತದ ವಿರುದ್ಧ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಅಮುಲ್ ಜರ್ಸಿಯೊಂದಿಗೆ ಕಣಕ್ಕೆ ಇಳಿಯಲಿದೆ.
Advertisement
ಈ ಹಿಂದೆ ಅಮೂಲ್ ವಿಶ್ವಕಪ್ ಕ್ರಿಕೆಟ್ ನಲ್ಲಿ ಹಾಲೆಂಡ್ ಕ್ರಿಕೆಟ್ ತಂಡ, ಸ್ವಿಜರ್‍ಲ್ಯಾಂಡ್ ಗ್ರಾಂಡ್ ಪ್ರಿಕ್ಸ್, ಮತ್ತು 2011ರಲ್ಲಿ ಭಾರತದಲ್ಲಿ ನಡೆದ ಆರಂಭಿಕ ಗ್ರಾಂಡ್ ಪ್ರಿಕ್ಸ್ ನ ಪ್ರಾಯೋಜಕತ್ವವನ್ನು ವಹಿಸಿಕೊಂಡಿತ್ತು.
Advertisement
#Amul is pleased to announce its association with the #NewZealand #Cricket team as it's official sponsor. pic.twitter.com/c1Ws57iPwr
— Amul.coop (@Amul_Coop) May 13, 2017
Advertisement
ಭಾರತಕ್ಕೆ ಒಪೊ ಪ್ರಾಯೋಜಕತ್ವ:
ಚೀನಾದ ಮೊಬೈಲ್ ಒಪೊ ಕಂಪೆನಿಯ ಜರ್ಸಿಯನ್ನು ತೊಟ್ಟು ಟೀಂ ಇಂಡಿಯಾದ ಆಟಗಾರರು ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಒಪೊ ಜೊತೆಗೆ ಬಿಸಿಸಿಐ 5 ವರ್ಷದ ಅವಧಿಗೆ ಒಟ್ಟು 1,079 ಕೋಟಿ ಮೊತ್ತದ ಪ್ರಯೋಜಕತ್ವದ ಒಪ್ಪಂದ ಮಾಡಿಕೊಂಡಿದ್ದು, ಈ ಒಪ್ಪಂದ ಏ.1 ರಿಂದಲೇ ಅನ್ವಯವಾಗಲಿದೆ.
BCCI CEO @RJohri & @oppomobileindia President Mr. Sky Li launch the #OPPO #TeamIndia jersey pic.twitter.com/wpK0CV5Ldu
— BCCI (@BCCI) May 4, 2017