ಕನ್ನಡತಿ, ಅಮೃತಧಾರೆ ಸೀರಿಯಲ್ ನಟಿ ಸಾರಾ ಅಣ್ಣಯ್ಯ (Sara Annaiah) ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಗ್ಲ್ಯಾಮರಸ್ ಅವತಾರ ತಾಳಿರುವ ಸಾರಾ ನಯಾ ಲುಕ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬಿಳಿ ಬಣ್ಣದ ಲೆಹೆಂಗಾ ಧರಿಸಿ ನಟಿ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ವಿವಿಧ ಭಂಗಿಯಲ್ಲಿ ನಟಿ ಮಿಂಚಿದ್ದಾರೆ. ಸಾರಾ ನಯಾ ಲುಕ್ ಈಗ ಪಡ್ಡೆಹುಡುಗರ ನಿದ್ದೆಕೆಡಿಸಿದೆ. ಇದನ್ನೂ ಓದಿ:ಸೈಫ್ ಅಲಿ ಖಾನ್ ಪುತ್ರನ ಸಿನಿಮಾಗೆ ಟೈಟಲ್ ಫಿಕ್ಸ್- ಪೋಸ್ಟರ್ ಔಟ್
ಇನ್ನೂ ಜನಪ್ರಿಯ ಸೀರಿಯಲ್ ‘ಅಮೃತಧಾರೆ’ ಪ್ರಾಜೆಕ್ಟ್‌ನಿಂದ ಸಾರಾ ಹೊರನಡೆದಿದ್ದಾರೆ. ನಾಯಕ ಗೌತಮ್ ದಿವಾನ್ ತಂಗಿಯ ಪಾತ್ರದಲ್ಲಿ ಅವರು ನಟಿಸುತ್ತಿದ್ದರು. ಆದರೆ ಅವರ ಪಾತ್ರಕ್ಕೆ ಇಶಿತಾ ವರ್ಷ ಎಂಟ್ರಿ ಕೊಟ್ಟಿದ್ದಾರೆ. ಆದರೆ ಸಾರಾ ಯಾಕೆ ಸೀರಿಯಲ್‌ನಿಂದ ಹೊರನಡೆದರು ಎಂಬುದು ತಿಳಿದುಬಂದಿಲ್ಲ.
ಈ ಹಿಂದೆ ‘ಕನ್ನಡತಿ’ ಸೀರಿಯಲ್‌ನಲ್ಲಿ ಕಿರಣ್ ರಾಜ್ ಮತ್ತು ರಂಜನಿ ರಾಘವನ್ ಜೊತೆ ಸಾರಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸೀರಿಯಲ್ ಸೂಪರ್ ಹಿಟ್ ಆಗಿತ್ತು. ಇದನ್ನೂ ಓದಿ:ಬೆಂಗಳೂರಿನ ಬೆಡಗಿ ಜೊತೆ ಆಮೀರ್ ಖಾನ್ 3ನೇ ಮದುವೆ?
2017ರಲ್ಲಿ ‘ನಮ್ಮೂರ ಹೈಕ್ಳು’ ಎಂಬ ಚಿತ್ರದಲ್ಲಿ ಸಾರಾ ನಟಿಸಿದ್ದರು. ಈ ಸಿನಿಮಾ ಮೂಲಕ ಕೊಡಗಿನ ಬೆಡಗಿ ಸದ್ದು ಮಾಡಿದ್ದರು.