ಮನೆಕೆಲಸದಾಕೆಯಿಂದ್ಲೇ ನಟಿ ಛಾಯಾಸಿಂಗ್ ತಾಯಿ ಮನೆಯಲ್ಲಿ ಕಳ್ಳತನ

Public TV
1 Min Read
chaya singh

ಹುಭಾಷಾ ನಟಿ ಛಾಯಾ ಸಿಂಗ್ (Chaya Singh)  ಅವರ ತಾಯಿ ಮನೆಯಲ್ಲಿ ಕಳ್ಳತನ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಕಳ್ಳತನ ಮಾಡಿದ ಮನೆಕೆಲಸದಾಕೆಯ ಬಂಧನವಾಗಿದೆ. ಇದನ್ನೂ ಓದಿ:11 ವರ್ಷಗಳ ದಾಂಪತ್ಯಕ್ಕೆ ಕೊನೆ ಹಾಡುತ್ತಿದ್ದೇವೆ; ಮ್ಯೂಸಿಕ್‌ ಡೈರೆಕ್ಟರ್ ಜಿ.ವಿ ಪ್ರಕಾಶ್

chaya singh

ಛಾಯಾ ಸಿಂಗ್ ಕುಟುಂಬ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದೆ. ಇದೀಗ ನಟಿ ಛಾಯಾ ಸಿಂಗ್ ತಾಯಿ ಚಮನಲತಾ ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆಯಿಂದ ಕೃತ್ಯ ಜರುಗಿದೆ. ಕೆಲಸದ ವೇಳೆ, ಚಿನ್ನಾಭರಣ ದೋಚಿ ಏನೂ ಅರಿಯದಂತೆ ಕೆಲಸದಾಕೆ ವರ್ತಿಸಿದ್ದಾರೆ. ಮನೆಯ ಮಾಲೀಕರು ಚಿನ್ನಾಭರಣ ಪರಿಶೀಲಿಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ.

ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಯ ವೇಳೆ ಕೆಲಸದಾಕೆ ಉಷಾ ಈ ಕೃತ್ಯ ಮಾಡಿರುವುದು ಬೆಳಕಿಗೆ ಬಂದಿದ್ದು, ಅವರನ್ನು ಬಂಧಿಸಿ ಆಭರಣ ವಶಪಡಿಸಿಕೊಂಡಿದ್ದಾರೆ. ಬಂಧಿತಳಿಂದ 66 ಗ್ರಾಂ ಗೋಲ್ಡ್ ಸೇರಿ, 150 ಬೆಳ್ಳಿ ಆಭರಣ ವಶಕ್ಕೆ ಪಡೆಯಲಾಗಿದೆ.

ಅಂದಹಾಗೆ, ಛಾಯಾ ಸಿಂಗ್ ಪ್ರಸ್ತುತ ಕನ್ನಡದ ‘ಅಮೃತಧಾರೆ’ಸೀರಿಯಲ್‌ನಲ್ಲಿ ನಾಯಕಿ ಭೂಮಿಕಾ ಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ. ಶಿವರಾಜ್‌ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾದಲ್ಲಿ ಛಾಯಾ ನಟಿಸಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ತೆರೆ ಕಾಣಲಿದೆ.

Share This Article