ಡಿಗ್ಲ್ಯಾಮರ್ ಲುಕ್‌ನಲ್ಲಿ ನಟಿಸಲಿದ್ದಾರೆ ಅಮೃತಾ ಅಯ್ಯಂಗಾರ್

Public TV
1 Min Read
Amrutha iyengar 1

ಸ್ಯಾಂಡಲ್ವುಡ್ ಬ್ಯೂಟಿ ಅಮೃತಾ ಅಯ್ಯಂಗಾರ್ (Amrutha Iyengar) ಸದ್ಯ ‘ಫಾದರ್’ (Father) ಚಿತ್ರದ ಮೂಲಕ 3ನೇ ಬಾರಿ ಡಾರ್ಲಿಂಗ್ ಕೃಷ್ಣಗೆ (Darling Krishna) ನಾಯಕಿಯಾಗಿದ್ದಾರೆ. ಈ ಚಿತ್ರದ ಮೂಲಕ ನಟಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಚಿತ್ರದಲ್ಲಿ ತಮ್ಮ ಪಾತ್ರ ಹೇಗಿದೆ? ಎಂಬುದನ್ನು ನಟಿ ರಿವೀಲ್ ಮಾಡಿದ್ದಾರೆ.

darling krishna 1

ಡಾರ್ಲಿಂಗ್ ಕೃಷ್ಣ, ಪ್ರಕಾಶ್ ರಾಜ್, ಸುನೀಲ್ ಜೊತೆ ಅಮೃತಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನನಗೆ ತುಂಬಾ ಕಾಡಿದ ಕತೆಯಿದು ಎಂದು ನಟಿ ಮಾತನಾಡಿದ್ದಾರೆ. ನನ್ನ ಕೆರಿಯರ್‌ಗೆ ಮೈಲಿಗಲ್ಲು ಆಗುವ ಪಾತ್ರ ನನ್ನದು. ವೈಟೇಜ್ ಇರುವ ಪಾತ್ರವಾಗಿದೆ. ನೋ ಮೇಕಪ್ ಲುಕ್‌ನಲ್ಲಿ ನಟಿಸೋದಾಗಿ ಎಂದು ನಟಿ ಹೇಳಿದ್ದಾರೆ.

Amrutha iyengar 2

ಇದುವರೆಗೂ ಕಾಣಿಸಿಕೊಳ್ಳದ ಪಾತ್ರದಲ್ಲಿ ಅಮೃತಾ ನಟಿಸಲಿದ್ದಾರೆ. ಈ ಹಿಂದೆ ‘ಲವ್ ಮಾಕ್ಟೈಲ್ ಪಾರ್ಟ್ 1 ಮತ್ತು 2ನಲ್ಲಿ ಕೃಷ್ಣ ಮತ್ತು ಜೊತೆಯಾಗಿ ನಟಿಸಿದ್ದರು. ಈಗ ಫಾದರ್‌ ಚಿತ್ರಕ್ಕೆ ನಟಿ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ತೆಲುಗಿನ ಹೊಸ ಸಿನಿಮಾ ಒಪ್ಪಿಕೊಂಡ ಪೂಜಾ ಹೆಗ್ಡೆ

ಆರ್.ಚಂದ್ರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಫಾದರ್ ಸಿನಿಮಾಗೆ ‘ಹನುಮಾನ್’ ಖ್ಯಾತಿಯ ಹರಿ ಅವರು ಸಂಗೀತ ನಿರ್ದೇಶನ ಮಾಡಲಿದ್ದಾರೆ.

Share This Article