ಸ್ಯಾಂಡಲ್‌ವುಡ್‌ನಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಸಾಲು ಸಾಲು ಸಿನಿಮಾಗಳಲ್ಲಿ ಭರವಸೆ ಹುಟ್ಟಿಸಿರುವ ಸಿನಿಮಾಗಳಲ್ಲೊಂದು ಅಮೃತ ಅಪಾರ್ಟ್‌ಮೆಂಟ್ಸ್ ಸಿನಿಮಾ. ಗುರುರಾಜ ಕುಲಕರ್ಣಿ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಈ ಸಿನಿಮಾ ನವೆಂಬರ್ 26ಕ್ಕೆ ರಾಜ್ಯಾದ್ಯಂತ ತೆರೆ ಕಾಣಲು ರೆಡಿಯಾಗಿದೆ. ಸಾಕಷ್ಟು ಭರವಸೆ ಹುಟ್ಟು ಹಾಕಿರುವ ಈ ಸಿನಿಮಾ ಮೂಲಕ ಖ್ಯಾತ ಖಳನಟ ತಾರಕ್ ಪೊನ್ನಪ್ಪ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
Advertisement
ಕೆಜಿಎಫ್, ಯುವರತ್ನ ಸಿನಿಮಾ ನೋಡಿದವರಿಗೆ ಕಿರುತೆರೆ ಅಭಿಮಾನಿಗಳಿಗೆ ತಾರಕ್ ಪೊನ್ನಪ್ಪ ಚಿರಪರಿಚಿತ. ತೆರೆ ಮೇಲೆ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದ ಪ್ರತಿಭಾವಂತ ನಟ ನಾಯಕ ನಟನಾಗಿ ತೆರೆ ಮೇಲೆ ಮಿಂಚಲು ಸಕಲ ಸಜ್ಜಾಗಿದ್ದಾರೆ. ಖಳನಟನಾಗಿ ಎಷ್ಟೇ ಸಿನಿಮಾದಲ್ಲಿ ಅಭಿನಯಿಸಿದ್ರು, ಅನುಭವವಿದ್ರೂ ನಾಯಕ ನಟನಾಗಿ ಇದೊಂದು ಅಗ್ನಿ ಪರೀಕ್ಷೆ ಎಂದು ಸಖತ್ ಎಕ್ಸೈಟ್ ಆಗಿದ್ದಾರೆ ಮಡಿಕೇರಿಯ ಕುವರ. ಇದನ್ನೂ ಓದಿ: ತಾಯಿಯಾಗ್ತಿದ್ದಾರಾ ಪ್ರಿಯಾಂಕಾ ಚೋಪ್ರಾ?
Advertisement
ಫ್ಯಾಮಿಲಿ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ ಸಿನಿಮಾದಲ್ಲಿ ಮುದ್ದಾದ ಪ್ರೀತಿ ಕಥೆಯಿದೆ. ಅದರ ನಾಯಕ ಇವರೇ. ಗುರುರಾಜ ಕುಲಕರ್ಣಿ ಮಾಡಿಕೊಂಡ ಕಥೆ ಬಹಳ ಇಷ್ಟವಾಯ್ತು. ನಟನೆ ಅಂದ್ರೆ ಪ್ರತಿ ಪಾತ್ರದಲ್ಲೂ ಸವಾಲನ್ನು ಸ್ವೀಕರಿಸೋದು, ತೆರೆ ಮೇಲೆ ಚೆಂದವಾಗಿ ಕಟ್ಟಿಕೊಡೋದು. ಅದಕ್ಕೊಂದು ಅವಕಾಶ ಮಾಡಿಕೊಟ್ಟಂತಿತ್ತು ಈ ಸಿನಿಮಾ ಕಥೆ. ರಫ್ ಅಂಡ್ ಟಫ್ ಪಾತ್ರ ಮಾಡುತ್ತಿದ್ದವನಿಗೆ ಸಾಫ್ಟ್ ರೋಲ್ ಮಾಡೋದು ಕೊಂಚ ಕಷ್ಟ ಆದ್ರೆ ನಿರ್ದೇಶಕರ ಸಹಕಾರದಿಂದ ಅದೆಲ್ಲ ಬಹಳ ಸುಲಭವಾಯ್ತು. ಖಂಡಿತ ಈ ಸಿನಿಮಾದಲ್ಲಿ ನನ್ನನ್ನು ಜನ ಇಷ್ಟ ಪಡುತ್ತಾರೆ ಎಂಬ ಭರವಸೆ ಇದೆ ಎನ್ನುತ್ತಾರೆ ತಾರಕ್ ಪೊನ್ನಪ್ಪ.
Advertisement
Advertisement
ಆಕ್ಸಿಡೆಂಟ್, ಲಾಸ್ಟ್ ಬಸ್ ಸಿನಿಮಾಗಳಿಗೆ ನಿರ್ಮಾಪಕರಾಗಿದ್ದ ಗುರುರಾಜ ಕುಲಕರ್ಣಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೊದಲ ಸಿನಿಮಾ. ಇದೇ ಮೊದಲ ಬಾರಿಗೆ ಚಿತ್ರಕ್ಕೆ ಕಥೆ ಬರೆದು ಆಕ್ಷನ್ ಕಟ್ ಹೇಳ್ತಿರುವ ಇವರು ನಿರ್ಮಾಣದ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ನಿರ್ಮಾಪಕನಾಗಿದ್ದವರು ನಿರ್ದೇಶಕನಾಗಿ ತಮ್ಮನ್ನು ಸವಾಲಿಗೆ ಒಡ್ಡಿಕೊಂಡಿರುವ ಇವರಿಗೆ ತಾವು ಮಾಡಿಕೊಂಡ ಕಥೆ ಮೇಲೆ ಅಪಾರ ಭರವಸೆ ಇದೆ. ಇದನ್ನೂ ಓದಿ: ಇಳಕಲ್ ಸೀರೆಯುಟ್ಟು ಹಾಟ್ ಪೋಸ್ ಕೊಟ್ಟ ರಾಗಿಣಿ
ಚಿತ್ರದಲ್ಲಿ ನಾಯಕಿಯಾಗಿ ಊರ್ವಶಿ ಗೋವರ್ಧನ್ ನಟಿಸಿದ್ದು, ರಂಗಭೂಮಿ ಕಲಾವಿದೆಯಾಗಿರುವ ಇವರಿಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾ. ಖ್ಯಾತ ಪೋಷಕ ನಟ ಬಾಲಾಜಿ ಮನೋಹರ್ ಈ ಚಿತ್ರದಲ್ಲಿ ಆಟೋ ಡ್ರೈವರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪಕ್ಕಾ ಅಂಬರೀಶ್ ಅಭಿಮಾನಿಯಾಗಿ, ಬೆಂಗಳೂರಿನ ಆಟೋ ಡ್ರೈವರ್ ಹಾವಭಾವವನ್ನು ಮೈಗೂಡಿಸಿಕೊಂಡು ಚಿತ್ರದಲ್ಲಿ ಮಿಂಚಿದ್ದಾರೆ. ರಂಗಭೂಮಿ ಕಲಾವಿದೆ, ನೃತ್ಯಗಾರ್ತಿ ಮಾನಸ ಜೋಶಿ ಈ ಸಿನಿಮಾದಲ್ಲಿ ಎಸಿಪಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಎಸಿಪಿ ರತ್ನಪ್ರಭಾ ಪಾತ್ರದಲ್ಲಿ ಖಡಕ್ ಆಫೀಸರ್ ಆಗಿ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ಉಳಿದಂತೆ ಸಂಪತ್ ಮೈತ್ರೇಯ, ಸೀತಾ ಕೋಟೆ, ಮಾಲತೇಶ್, ಸಿತಾರಾ, ಜಗದೀಶ್ ಬಾಲಾ, ರಾಜು ನೀನಾಸಂ, ಅರುಣ್ ಮೂರ್ತಿ, ಶಂಕರ್ ಶೆಟ್ಟಿ ರಂಗಸ್ವಾಮಿ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ. ಅರ್ಜುನ್ ಅಜಿತ್ ಛಾಯಾಗ್ರಹಣ, ಕೆಂಪರಾಜ್ ಅರಸ್ ಸಂಕಲನ ಮತ್ತು ಎಸ್ ಡಿ ಅರವಿಂದ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಜಿ9 ಕಮ್ಯುನಿಕೇಶನ್ ಮೀಡಿಯಾ ಅಂಡ್ ಎಂಟಟೈನ್ಮೆಂಟ್ ಬ್ಯಾನರ್ ನಡಿ ನಿರ್ಮಾಣವಾದ ಈ ಚಿತ್ರ ನವೆಂಬರ್ 26ಕ್ಕೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.