ಟರ್ಬನ್ ಬಿಚ್ಚಿಟ್ಟು, ಸನ್‌ಗ್ಲಾಸ್, ಜಾಕೆಟ್ ತೊಟ್ಟು ದೆಹಲಿ ಬೀದಿಯಲ್ಲಿ ಕಂಡುಬಂದ ಅಮೃತ್‌ಪಾಲ್ ಸಿಂಗ್

Public TV
2 Min Read
Amritpal Singh 6

– ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸುತ್ತಿರೋ ಖಲಿಸ್ತಾನ್ ಹೋರಾಟಗಾರ

ನವದೆಹಲಿ: ಪಂಜಾಬ್‌ನಿಂದ (Punjab) ಪರಾರಿಯಾಗಿ ಒಂದು ವಾರಕ್ಕೂ ಹೆಚ್ಚು ಕಾಲ ತಲೆಮರೆಸಿಕೊಂಡಿರುವ ಮೂಲಭೂತವಾದಿ ಸಿಖ್ ಧರ್ಮ ಪ್ರಚಾರಕ ಅಮೃತ್‌ಪಾಲ್ ಸಿಂಗ್ (Amritpal Singh) ಇದೀಗ ದೆಹಲಿಯಲ್ಲಿ (Delhi) ಓಡಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಪತ್ತೆಯಾಗಿದೆ.

ಅಮೃತ್‌ಪಾಲ್ ಸಿಂಗ್ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸುತ್ತಿದ್ದು, ತಮ್ಮ ಗುರುತು ಯಾರಿಗೂ ಸಿಗದಂತೆ ವೇಷವನ್ನು ಬದಲಿಸಿ ತಪ್ಪಿಸಿಕೊಳ್ಳುತ್ತಿದ್ದಾನೆ. ಇದೀಗ ದೆಹಲಿ ಬೀದಿಯಲ್ಲಿ ಕಂಡುಬಂದಿರುವ ಸಿಂಗ್ ಟರ್ಬನ್ (Turban) ಅನ್ನು ತೆಗೆದು, ಸನ್‌ಗ್ಲಾಸ್ ಹಾಗೂ ಜಾಕೆಟ್ ಧರಿಸಿ ಓಡಾಡಿದ್ದಾನೆ. ಸಿಸಿಟಿವಿ ದೃಶ್ಯದಲ್ಲಿ ಅಮೃತ್‌ಪಾಲ್ ಸಿಂಗ್ ಜೊತೆಗೆ ಆತನ ಸಹಾಯಕ ಪಾಪಲ್‌ಪ್ರೀತ್ ಸಿಂಗ್ ಕೂಡಾ ಕಾಣಿಸಿಕೊಂಡಿದ್ದಾನೆ. ಇಬ್ಬರೂ ತಮ್ಮ ಗುರುತುಗಳನ್ನು ಮರೆಮಾಚಲು ಮಾಸ್ಕ್‌ಗಳನ್ನು ಧರಿಸಿದ್ದಾರೆ.

ವರದಿಗಳ ಪ್ರಕಾರ ಈ ಸಿಸಿಟಿವಿ ದೃಶ್ಯ ಮಾರ್ಚ್ 21ನೇ ತಾರೀಖಿನದ್ದಾಗಿದೆ. ಪಂಜಾಬ್‌ನಲ್ಲಿ ಪೊಲೀಸರು ಆತನನ್ನು ಬಂಧಿಸಲು ಕಾರ್ಯಾಚರಣೆ ಪ್ರಾರಂಭಿಸಿರುವ 3 ದಿನಗಳ ಬಳಿಕದ ದೃಶ್ಯಗಳಾಗಿವೆ. ಇದನ್ನೂ ಓದಿ: ರಾಜ್ಯ ವಿಧಾನಸಭೆ ಚುನಾವಣೆಗೆ ಇಂದೇ ಮುಹೂರ್ತ ಫಿಕ್ಸ್

ಅಮೃತ್‌ಪಾಲ್ ಸಿಂಗ್ ಹಾಗೂ ಪಾಪಲ್‌ಪ್ರೀತ್ ಸಿಂಗ್ ಇಬ್ಬರೂ ಹರಿಯಾಣದ ಕುರುಕ್ಷೇತ್ರದ ಮೂಲಕ ದೆಹಲಿಗೆ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆತ ಇನ್ನು ಕೂಡಾ ದೆಹಲಿಯಲ್ಲಿಯೇ ತಲೆಮರೆಸಿಕೊಂಡಿದ್ದಾನೆಯೇ ಅಥವಾ ಅಲ್ಲಿಂದ ಬೇರೆಡೆಗೆ ಓಡಿಹೋಗಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ.

Amritpal Singh

ಇದೀಗ ನೆರೆಯ ನೇಪಾಳದಲ್ಲಿ ಅಮೃತ್‌ಪಾಲ್ ಸಿಂಗ್‌ನನ್ನು ತನ್ನ ಕಣ್ಗಾವಲು ಪಟ್ಟಿಗೆ ಸೇರಿಸಿದೆ. ಏಕೆಂದರೆ ಆತ ನಕಲಿ ಪಾಸ್‌ಪೋರ್ಟ್ ಬಳಸಿ ಗಡಿ ದಾಟಲು ಯತ್ನಿಸುವ ಸಾಧ್ಯತೆಯಿದೆ. ಕಳೆದ ವಾರದಿಂದ ಆತ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಹೋಗಿ ಮನೆಯೊಂದರಲ್ಲಿ ಆಶ್ರಯ ಪಡೆದಿರುವುದು ಹಲವು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಸಿಕ್ಕಿವೆ. ಇದನ್ನೂ ಓದಿ: ನೀವು ಮಾಡಿದ್ದೆಲ್ಲಾ ಸಹಿಸಿಕೊಂಡು ಬಿರಿಯಾನಿ ಹಾಕುವ 47ರ ಕಾಲವಲ್ಲ- SDPI ಮುಖಂಡನಿಗೆ ಸಿ.ಟಿ ರವಿ ವಾರ್ನಿಂಗ್

Share This Article