ಹೈದರಾಬಾದ್: ಪಶುವೈದ್ಯೆ ದಿಶಾ ಅತ್ಯಾಚಾರ ಹಾಗೂ ಕೊಲೆ ಆರೋಪಿಗಳ ಎನ್‍ಕೌಂಟರ್ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು ಎಂದು ಅಮ್ನೆಸ್ಟಿ ಇಂಡಿಯಾ ಇಂಟರ್ ನ್ಯಾಷನಲ್ ಸಂಸ್ಥೆ ಆಗ್ರಹಿಸಿದೆ.
25 ವರ್ಷದ ದಿಶಾ ಅತ್ಯಾಚಾರ, ಕೊಲೆ ಪ್ರಕಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಇಂದು ಅವರನ್ನು ದಿಶಾರ ಫೋನ್ ಹಾಗೂ ಇತರೇ ವಸ್ತುಗಳನ್ನು ವಶಕ್ಕೆ ಪಡೆಯುವ ಸಲುವಾಗಿ ಕೃತ್ಯಕ್ಕೆ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಎನ್‍ಕೌಂಟರ್ ಮಾಡಲಾಗಿತ್ತು. ಈ ಘಟನೆ ಶಾಕಿಂಗ್ ಹಾಕಿದ್ದು, ತೆಲಂಗಾಣ ಸರ್ಕಾರ ಪ್ರಕರಣದ ತನಿಖೆಯನ್ನು ಸ್ವತಂತ್ರ, ನಿಷ್ಪಕ್ಷಪಾತ, ತ್ವರಿತ ಮತ್ತು ಕ್ರಿಮಿನಲ್ ತನಿಖೆಗೆ ನೀಡಬೇಕು ಎಂದು ಅಮ್ನೆಸ್ಟಿ ಸಂಸ್ಥೆ ಹೇಳಿದೆ.
Advertisement
Advertisement
ಅತ್ಯಾಚಾರಗಳನ್ನು ತಡೆಯಲು ಕಾನೂನು ಬಾಹಿರ ಹತ್ಯೆಗಳು ಒಂದೇ ಪರಿಹಾರವಲ್ಲ ಎಂದು ಅಮ್ನೆಸ್ಟಿ ಕಾರ್ಯನಿರ್ವಾಹಕ ನಿರ್ದೇಶಕ ಅವಿನಾಶ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ. ಪ್ರಕರಣದ ಕುರಿತು ಪ್ರಾಥಮಿಕ ವರದಿಯನ್ನು ಸಲ್ಲಿಕೆ ಮಾಡಲು ತಡಮಾಡಿದ್ದು ಹಾಗೂ ಕಳಪೆ ತನಿಖೆಯನ್ನು ತೆಲಂಗಾಣ ಪೊಲೀಸರು ಮಾಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ ಎಂದಿದ್ದಾರೆ.
Advertisement
ಅಂತರರಾಷ್ಟ್ರಿಯ ಕಾನೂನಿನ ಅಡಿಯಲ್ಲಿ ಕಾನೂನು ಬಾಹಿರ ಹಾಗೂ ಅನಿಯಂತ್ರಿತ ಮರಣದಂಡನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನಾಗರಿಕ ಹಾಗೂ ರಾಜಕೀಯ ಕುರಿತಾದ ಅಂತರರಾಷ್ಟ್ರೀಯ ಒಪ್ಪಂದದ ಭಾಗವಾಗಿ ಭಾರತವೂ ಇದ್ದು, ಕಾನೂನು ಬಾಹಿರ ಮರಣದಂಡನೆಯನ್ನು ನಿಷೇಧಿಸುತ್ತದೆ ಹಾಗೂ ನ್ಯಾಯಯುತ ವಿಚಾರಣೆಯ ಹಕ್ಕನ್ನು ಖಾತರಿಪಡಿಸುತ್ತದೆ ಎಂದು ಅಮ್ನೆಸ್ಟಿ ಹೇಳಿದೆ. ಇದನ್ನೂ ಓದಿ: ತೆಲಂಗಾಣ ಎನ್‍ಕೌಂಟರ್: ಕೇಜ್ರಿವಾಲ್, ಶಶಿ ತರೂರ್, ಮನೇಕಾ ಗಾಂಧಿ ಅಪಸ್ವರ
Advertisement
ವಿಶ್ವದ ಸಂಸ್ಥೆಯ ನಿಯಮಗಳು ಕೂಡ ಕಾನೂನು ಬಾಹಿರ ಮರಣದಂಡನೆ ಪ್ರಕರಣಗಳನ್ನು ಸ್ವತಂತ್ರ, ನಿಷ್ಪಕ್ಷಪಾತ, ತ್ವರಿತ ಮತ್ತು ಕ್ರಿಮಿನಲ್ ತನಿಖೆಗೆ ನಡೆಸಬೇಕು ಎಂದು ತಿಳಿಸುತ್ತದೆ. ಸದ್ಯದ ವಿಶ್ವಾಸರ್ಹ ವರದಿಗಳು ಪ್ರಕರಣದಲ್ಲಿನ ಸಾವುಗಳನ್ನು ಅಸ್ವಾಭಾವಿಕ ಎಂದು ಸೂಚಿಸುತ್ತಿವೆ ಎಂದು ತಿಳಿಸಿದ್ದಾರೆ.
ಆಧುನಿಕ ಮತ್ತು ಹಕ್ಕುಗಳನ್ನು ಗೌರವಿಸುವ ಸಮಾಜದಲ್ಲಿ ಅತ್ಯಾಚಾರಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಲು ಕಾನೂನು ಬಾಹಿರ ಮರಣದಂಡನೆಯನ್ನು ವಿಧಿಸುವುದು ಅಸಂವಿಧಾನಿಕ. ಅಲ್ಲದೇ ಭಾರತೀಯ ಕಾನೂನಿನ ವ್ಯವಸ್ಥೆಯನ್ನು ಇದು ಹಾದಿ ತಪ್ಪಿಸುತ್ತಿದೆ ಹಾಗೂ ಸಂಪೂರ್ಣವಾಗಿ ಪೂರ್ವ ನಿದೇರ್ಶನವನ್ನು ಹೊಂದಿದೆ. ಪ್ರಕರಣ ಕುರಿತು ಸ್ವತಂತ್ರಯ ತನಿಖೆ ಅಗತ್ಯ ಎಂದು ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: 2008 ವಾರಂಗಲ್ ಎನ್‌ಕೌಂಟರ್‌ನಂತೆ ದಿಶಾ ‘ಹತ್ಯಾಚಾರಿ’ಗಳ ಹುಟ್ಟಡಗಿಸಿದ ವಿ.ಸಿ ಸಜ್ಜನರ್
ಇಂದು ಬೆಳಗ್ಗೆ ದಿಶಾರ ಮೃತದೇಹವನ್ನು ಸುಟ್ಟು ಹಾಕಿದ್ದ ಸ್ಥಳಕ್ಕೆ ಆರೋಪಿಗಳನ್ನು ಕರೆದ್ಯೊದ್ದ ಸಂದರ್ಭದಲ್ಲಿ ಎನ್‍ಕೌಂಟರ್ ನಡೆದಿದ್ದು, ಪೊಲೀಸರ ಮೇಲೆ ಸ್ಥಳದಲ್ಲಿದ್ದ ಕಲ್ಲು, ದೊಣ್ಣೆಗಳಿಂದ ದಾಳಿ ನಡೆಸಿದ್ದ ಆರೋಪಿಗಳು ಪಿಸ್ತೂಲ್ ಕಸಿದುಕೊಂಡು ಶೂಟ್ ಮಾಡಿದ್ದರು. ಈ ವೇಳೆ ಪೊಲೀಸರು ಹೆಚ್ಚರಿಕೆ ನೀಡಿದ್ದರು ಕೂಡ ಆರೋಪಿಗಳು ಗುಂಡಿನ ದಾಳಿ ಮುಂದುವರಿಸಿದ ಸಂದರ್ಭದಲ್ಲಿ ಪೊಲೀಸರು ಪ್ರತಿದಾಳಿ ನಡೆಸಿದ್ದರು. ಈ ವೇಳೆ ನಾಲ್ವರು ಆರೋಪಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇದನ್ನೂ ಓದಿ: ಪಿಸ್ತೂಲ್ ಕಸಿದುಕೊಂಡು ಪೊಲೀಸರ ಮೇಲೆ ಹಲ್ಲೆ ಎಸಗಿದ್ದಕ್ಕೆ ಗುಂಡೇಟು – ಕನ್ನಡದಲ್ಲಿ ವಿವರಿಸಿದ ಸಜ್ಜನರ್