ನಾಮ್ ಪೆನ್: ಕಾಂಬೋಡಿಯಾ (Cambodia) ದೇಶದ ಪಶ್ಚಿಮ ಭಾಗದಲ್ಲಿರುವ ಸೇನಾ ನೆಲೆಯಲ್ಲಿ ಮದ್ದುಗುಂಡುಗಳು ಸ್ಫೋಟಗೊಂಡ (Ammunition Explosion) ಪರಿಣಾಮ ಇಪ್ಪತ್ತು ಸೈನಿಕರು (Soldiers) ಮೃತಪಟ್ಟಿದ್ದಾರೆ ಎಂದು ಕಾಂಬೋಡಿಯಾ ಪ್ರಧಾನಿ ಹನ್ ಮಾನೆಟ್ (Hun Manet) ಶನಿವಾರ ತಿಳಿಸಿದ್ದಾರೆ.
ಘಟನೆ ಕುರಿತು ಪ್ರಧಾನಿ ಹನ್ ಮಾನೆಟ್ ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದು, ಸೈನಿಕರ ಸಾವಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಏಪ್ರಿಲ್ 27, 2024ರ ಶನಿವಾರ ಮಧ್ಯಾಹ್ನ ಕಂಪಾಂಗ್ ಸ್ಪ್ಯೂ ಪ್ರಾಂತ್ಯದ 3ನೇ ಮಿಲಿಟರಿ ಗ್ರಾಮದಲ್ಲಿ ಸ್ಫೋಟದ ಸುದ್ದಿಯನ್ನು ಕೇಳಿ ಆಘಾತವಾಯಿತು. ಘಟನೆಯಲ್ಲಿ 20 ಸೈನಿಕರು ಮೃತಪಟ್ಟಿದ್ದು, ಹಲವು ಸೈನಿಕರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಸೈನಿಕರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಾಳು ಸೈನಿಕರು ಶೀಘ್ರವೇ ಗುಣಮುಖರಾಗಲಿ ಎಂದು ಹನ್ ಮಾನೆಟ್ ಪ್ರಾರ್ಥಿಸಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಒಬ್ಬ ನಾಡದ್ರೋಹಿ: ಡಿಕೆಶಿ ವಾಗ್ದಾಳಿ
ಅಲ್ಲದೇ ಈ ದುರಂತದಲ್ಲಿ ಮೃತಪಟ್ಟ ಸೈನಿಕರ ಅಂತ್ಯಕ್ರಿಯೆಯ ವೆಚ್ಚದ ಸಂಪೂರ್ಣ ಹೊಣೆಯನ್ನು ಸರ್ಕಾರವೇ ಹೊತ್ತುಕೊಳ್ಳಲಿದೆ. ಮೃತ ಸೈನಿಕರ ಕುಟುಂಬಕ್ಕೆ ತಲಾ 20 ಮಿಲಿಯನ್ ಯುಎಸ್ ಡಾಲರ್ ಮತ್ತು ಘಟನೆಯಲ್ಲಿ ಗಾಯಗೊಂಡ ಸೈನಿಕರಿಗೆ ತಲಾ 20 ಮಿಲಿಯನ್ ರಿಯೆಲ್ ಆರ್ಥಿಕ ನೆರವು ನೀಡುತ್ತೇನೆ ಎಂದು ಹನ್ ಮಾನೆಟ್ ತಿಳಿಸಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್ ಆರೋಗ್ಯವಾಗಿದ್ದಾರೆ, ಇನ್ಸುಲಿನ್ ಡೋಸ್ ಮುಂದುವರಿಸಲು ಏಮ್ಸ್ ಮೆಡಿಕಲ್ ಬೋರ್ಡ್ ಸಲಹೆ