ಬಾಲಿವುಡ್ ನಟಿ ಭಾಗ್ಯಶ್ರೀ ಮಗಳು ಆವಂತಿಕಾ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದಾರೆ. ಉಪೇಂದ್ರ ಅವರ ಸಹೋದರನ ಮಗ ನಿರಂಜನ್ ಸುಧೀಂದ್ರ ನಟನೆಯ ‘ಕ್ಯೂ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ.
Advertisement
ಹಿಂದಿಯ ‘ಮಿಥ್ಯ’ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಆವಂತಿಕಾಗೆ ಕನ್ನಡದ ಮೊದಲ ಸಿನಿಮಾ ಇದಾಗಿದೆ. ಈ ಹಿಂದೆ ತೆಲುಗಿನಲ್ಲೂ ಇವರು ನಟಿಸಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಕನ್ನಡ ಚಿತ್ರದ ಮೂಲಕ ಹಿರಿತೆರೆಗೆ ಆವಂತಿಕಾ ಪ್ರವೇಶ ಮಾಡುತ್ತಿದ್ದಾರೆ. ಇದನ್ನೂ ಓದಿ: ಶೂಟಿಂಗ್ ಮುಗಿಸಿ ಅಚ್ಚರಿ ಮೂಡಿಸಿದ ಗುರುಪ್ರಸಾದ್
Advertisement
Advertisement
1997ರಲ್ಲಿ ತೆರೆಕಂಡ ಶಿವರಾಜ್ ಕುಮಾರ್ ನಟನೆಯ ‘ಅಮ್ಮಾವ್ರ ಗಂಡ’ ಸಿನಿಮಾದ ಮೂಲಕ ಭಾಗ್ಯಶ್ರೀ ಚಂದನವನಕ್ಕೆ ಕಾಲಿಟ್ಟಿದ್ದರು. ಈ ಸಿನಿಮಾದಲ್ಲಿಯ ರಾಣಿ ಪಾತ್ರದ ಮೂಲಕ ಅವರು ಮನೆಮಾತಾದರು. 22 ವರ್ಷಗಳ ನಂತರ ಮತ್ತೆ ಭಾಗ್ಯಶ್ರೀ ಕನ್ನಡ ಚಿತ್ರ ಒಪ್ಪಿಕೊಂಡಿದ್ದು, 2019ರಲ್ಲಿ ಬಿಡುಗಡೆಯಾದ ನಿಖಿಲ್ ಕುಮಾರ್ ಸ್ವಾಮಿ ನಟನೆಯ ‘ಸೀತಾರಾಮ್ ಕಲ್ಯಾಣ’ ಚಿತ್ರ. ಈ ಸಿನಿಮಾ ರಿಲೀಸ್ ಆಗಿ ಮೂರು ವರ್ಷಗಳ ನಂತರ ಮಗಳು ಆವಂತಿಕಾರನ್ನು ‘ಕ್ಯೂ’ ಚಿತ್ರದ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಪರಿಚಯ ಮಾಡುತ್ತಿದ್ದಾರೆ ಭಾಗ್ಯಶ್ರೀ. ಇದನ್ನೂ ಓದಿ : ಸೆಟ್ಟೇರಿತು ರಾಜವರ್ಧನ್ ಮೂರನೇ ಸಿನಿಮಾ
Advertisement
ಕನ್ನಡ, ತಮಿಳು, ಹಿಂದಿ, ಭೋಜಪುರಿ, ಮರಾಠಿ, ತೆಲುಗು ಹೀಗೆ ಹಲವು ಭಾಷೆಗಳಲ್ಲಿ ಭಾಗ್ಯಶ್ರೀ ನಟಿಸಿದ್ದರೂ, ಮಗಳು ಮಾತ್ರ ಕನ್ನಡದ ಸಿನಿಮಾದ ಮೂಲಕವೇ ಚಿತ್ರರಂಗ ಪ್ರವೇಶ ಮಾಡಬೇಕು ಎನ್ನುವುದು ಆಸೆಯಾಗಿತ್ತಂತೆ. ತಮ್ಮ ಆಸೆಗೆ ತಕ್ಕಂತೆ ಕನ್ನಡ ಸಿನಿಮಾ ರಂಗದಿಂದಲೇ ಆಫರ್ ಬಂದಿದ್ದು ಖುಷಿ ತಂದಿದೆ ಎಂದಿದ್ದಾರೆ.