ತಿರುವನಂತಪುರ: ‘ಅಮ್ಮ ಊಟ’ ಎಂದು ಪ್ರಾರಂಭಿಸಿ ಹಸಿದವರಿಗೆ 47 ವರ್ಷದ ವ್ಯಕ್ತಿ ನೆರವಾಗಿರುವ ಘಟನೆ ತಿರುವನಂತಪುರದಲ್ಲಿ ನಡೆದಿದೆ.
ರಾಜ್ಯದ ರಾಜಧಾನಿಯ ಕರಾವಳಿ ಕುಗ್ರಾಮದಿಂದ ಬಂದ ಸಾಮಾಜಿಕ ಕಾರ್ಯಕರ್ತ 47 ವರ್ಷದ ಅಜಿತ್ ಶಂಕುಮುಖಂ ಅವರಿಗೆ, ಹಸಿದವರಿಗೆ ಆಹಾರ ನೀಡಬೇಕು ಎಂಬುದು ಜೀವನದ ಧ್ಯೇಯವಾಗಿತ್ತು. ಈ ಹಿನ್ನೆಲೆ ಅವರು ಬೀಚ್ ಬಳಿ ‘ಅಮ್ಮ ಊಟ’ ಎಂಬ ಹೆಸರಿನ ವಿಶಿಷ್ಟ ಗಾಜಿನ ಪೆಟ್ಟಿಗೆಯನ್ನು ಸ್ಥಾಪಿಸಿದ್ದಾರೆ. ಈ ಪೆಟ್ಟಿಗೆಯಲ್ಲಿ ಅಗತ್ಯವಿರುವವರಿಗೆ ಉಚಿತ ಆಹಾರ ಪ್ಯಾಕೆಟ್‍ಗಳನ್ನು ಇರಿಸಲಾಗುತ್ತದೆ. ಅದನ್ನು ಯಾರು ಬೇಕಾದರೂ ತೆಗೆದುಕೊಂಡು ಹೋಗಬಹುದಾಗಿದೆ. ಇದನ್ನೂ ಓದಿ: ಕೆಬಿಸಿ ನಿರೂಪಣೆ ಒಪ್ಪಿಕೊಳ್ಳಲು ನಿಜವಾದ ಕಾರಣ ಬಿಚ್ಚಿಟ್ಟ ಬಿಗ್ ಬಿ
Advertisement
Advertisement
ಈ ಕುರಿತು ಮಾತನಾಡಿದ ಅಜಿತ್, ಕಳೆದ ವರ್ಷ ಸಾಂಕ್ರಾಮಿಕ ರೋಗದಿಂದ ಏಕಾಏಕಿ ಲಾಕ್‍ಡೌನ್ ಆಗಿತ್ತು. ಆಗ ಮೀನುಗಾರರು ಮತ್ತು ಅವರ ಕುಟುಂಬಗಳ ಜೀವನವನ್ನು ಶೋಚನೀಯಗೊಳಿಸಿವೆ. ಇಲ್ಲಿ ಕೆಲವರು ಸಹಾಯ ಕೇಳಲು ಹಿಂಜರಿಯುತ್ತಿದ್ದರು. ಈ ಹಿನ್ನೆಲೆ ಅವರಿಗಾಗಿ ‘ಅಮ್ಮಾ ಊನು'(ಅಮ್ಮ ಊಟ) ವನ್ನು ಪ್ರಾರಂಭಿಸಲಾಯಿತು. ಈ ಮೂಲಕ ಅವರಿಗೆ ಸಹಾಯ ಮಾಡುವ ನಿರೀಕ್ಷೆಯಿದೆ ಎಂದು ತಿಳಿಸಿದರು.
Advertisement
ಈ ವಿಚಾರ ನನ್ನ ಮನಸ್ಸಿನಲ್ಲಿ ಬಹಳ ದಿನಗಳಿಂದ ಇತ್ತು. ಈಗ ಈ ಯೋಜನೆ ನನಸಾಗಿರುವುದು ಸಂತಸ ತಂದಿದೆ. ನಾನು ಯಾವುದೇ ಕ್ರೆಡಿಟ್ ತೆಗೆದುಕೊಳ್ಳಲು ಬಯಸುವುದಿಲ್ಲ. ಏಕೆಂದರೆ ಇದು ಸಮುದಾಯಕ್ಕಾಗಿ ನಾನು ಮಾಡಬಹುದಾದ ಕನಿಷ್ಠ ಸಹಾಯವಾಗಿದೆ ಎಂದು ಹೇಳಿದರು.
Advertisement
ಕಳೆದ ಎರಡು ವರ್ಷಗಳಲ್ಲಿ ಮೀನುಗಾರರ ಜೀವನೋಪಾಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಜನರು ದಿನನಿತ್ಯ ಹಸಿವಿನಿಂದ ಬಳಲುತ್ತಿದ್ದಾರೆ. ಅದರಲ್ಲಿಯೂ ಮಧ್ಯಮ ವರ್ಗದ ಕುಟುಂಬಗಳು ಈ ಕಷ್ಟದಲ್ಲಿ ಹೆಚ್ಚು ಹಾನಿಗೊಳಗಾಗುತ್ತಿವೆ. ಅವರು ಸಹಾಯವನ್ನು ಕೇಳಲೂ ಬರುವುದಿಲ್ಲ. ಆದರೆ ಅಮ್ಮಾ ಊನು ಅವರು ಕೇಳದಿದ್ದರೂ ಅಗತ್ಯವಿರುವವರಿಗೆ ಸೇವೆ ಸಲ್ಲಿಸುತ್ತೆ. ಇಲ್ಲಿಯವರೆಗೆ ಈ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾವು ಶೀಘ್ರದಲ್ಲೇ ಹೆಚ್ಚಿನ ಕೌಂಟರ್‍ಗಳನ್ನು ತೆರೆಯುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ರಸ್ತೆ ಗುಂಡಿ – ಎಎಪಿಯಿಂದ ಬೃಹತ್ ಸಹಿ ಸಂಗ್ರಹ ಅಭಿಯಾನ ಆರಂಭ
ಅಜಿತ್ ಅವರು ಸ್ವತಃ ಮೀನುಗಾರರಾಗಿದ್ದು, ಕಳೆದ ಆರು ವರ್ಷಗಳಿಂದ ವಿವಿಧ ಸಾಮಾಜಿಕ ಸೇವೆಗಳನ್ನು ಮಾಡುತ್ತಿದ್ದಾರೆ. ಅಮ್ಮಾ ಊನು ಪ್ರಾರಂಭವಾದ ಮೂರೇ ದಿನಗಳಲ್ಲಿ ನೂರಾರು ಆಹಾರ ಪೊಟ್ಟಣಗಳನ್ನು ಈಗಾಗಲೇ ವಿತರಿಸಲಾಗಿದೆ. ರಾಜ್ಯಾದ್ಯಂತ ಹೆಚ್ಚಿನ ಜನರು ಈ ಉಪಯೋಗಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇನ್ನೂ ಹೆಚ್ಚು ಜನರು ಇದರ ಉಪಯೋಗ ತೆಗೆದುಕೊಳ್ಳಬೇಕು ಎಂದು ಅಜಿತ್ ಅವರು ಆಶಿಸುತ್ತಿದ್ದಾರೆ. ಬೆಳಗ್ಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಒದಗಿಸುವ ಶೆಲ್ಫ್ ಅನ್ನು ಸ್ಥಾಪಿಸಲು ಅವರು ಸುಮಾರು 15,000 ರೂ. ಅನ್ನು ಖರ್ಚು ಮಾಡಿದ್ದಾರೆ.
ಅದು ಅಲ್ಲದೇ ಅಜಿತ್ ಅವರ ನೆರವಿಗೆ ಸ್ಥಳೀಯ ಸಮುದಾಯಗಳೂ ಬಂದಿವೆ. ಕುಟುಂಬಗಳು ಅವರಿಗೆ ಬೆಂಬಲವಾಗಿ ನಿಂತಿದೆ. ಅವರು ಈ ಕುರಿತು ಪೋಸ್ಟ್ ಹಾಕಿದ ನಂತರ ಹಲವಾರು ಜನರು ವಿದೇಶದಿಂದಲೂ ಕರೆಗಳು ಬರುತ್ತಿದ್ದು, ಈ ಕಾರ್ಯಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇದರ ಜೊತೆಗೆ ಸಹಾಯವನ್ನು ನೀಡುತ್ತಿದ್ದಾರೆ.