ಬೆಂಗಳೂರು: ಪೋಷಕರು ಹಾಕಿಕೊಟ್ಟ ಹಾದಿಯಲ್ಲಿ ಮಕ್ಕಳು ನಡೆಯುವುದು ಕಾಮನ್. ಆದರೆ ತಂದೆ ಕ್ರಿಕೆಟ್ ಲೋಕದ ದಂತ ಕಥೆಯಾಗಿದ್ದರೂ ಸಹ ಮಗಳಿಗೆ ಮಾತ್ರ ಬಣ್ಣದ ಲೋಕದ ಮೇಲೆ ಸೆಳೆತ. ಹೌದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರ ಪುತ್ರಿ ಅಮಿಯಾ ದೇವ್ ಬಾಲಿವುಡ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ವಿಶೇಷ ಏನಂದ್ರೆ ಚಿತ್ರದಲ್ಲಿ ಅಮಿಯಾ ನಾಯಕಿಯಾಗಿರದೇ, ಸಿನಿಮಾಕ್ಕೆ ಸಹಾಯಕ ನಿರ್ದೇಶಕಿಯಾಗಿ ತಮ್ಮ ಸಿನಿ ಕೆರಿಯರ್ ಸ್ಟಾರ್ಟ್ ಮಾಡಲಿದ್ದಾರೆ.
Advertisement
ಹೊಸ ಸಿನಿಮಾ 83 ಎಂಬ ಟೈಟಲ್ಲಿನ ಚಿತ್ರಕ್ಕೆ ಅಮಿಯಾ ಸಹಾಯಕ ನಿರ್ದೇಶಕಿಯಾಗಿದ್ದು, ರಣಬೀರ್ ಸಿಂಗ್ ನಾಯಕನಾಗಿ ನಟಿಸಲಿದ್ದಾರೆ. ಭಾರತ ಕ್ರಿಕೆಟ್ ತಂಡ 1983ರಲ್ಲಿ ವಿಶ್ವಕಪ್ ಗಳಿಸಿದ ಐತಿಹಾಸಿಕ ಗೆಲುವಿನ ಬಗೆಗಿನ ಸಿನಿಮಾ ಇದಾಗಿರಲಿದ್ದು, ರಣ್ವೀರ್ ಕಪಿಲ್ ದೇವ್ ಪಾತ್ರವನ್ನು ಮಾಡುತ್ತಿದ್ದಾರೆ. ಈಗಾಗಲೇ ರಣ್ವೀರ್ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದು, ಸಾಕಷ್ಟು ತರಬೇತಿಯನ್ನು ಪಡೆಯುತ್ತಿದ್ದಾರೆ.
Advertisement
83ಕ್ಕೆ ಭಜರಂಗಿ ಭಾಯಿಜಾನ್ ಖ್ಯಾತಿಯ ಕಬೀರ್ ಖಾನ್ ಆಕ್ಷನ್ ಕಟ್ ಹೇಳುತ್ತಿರುವುದು ವಿಶೇಷ. ಡೈರೆಕ್ಷನ್ ಟೀಮ್ ನಲ್ಲಿ ಆಮಿಯಾ ಕಾರ್ಯನಿರ್ವಹಿಸುತ್ತಿದ್ದು, ನಟರಿಗೆ ತರಬೇತಿ ಹಾಗೂ ಕಾಸ್ಟ್ಯೂಮ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಸಿನಿಮಾದ ಕ್ಲ್ಯೈಮ್ಯಾಕ್ಸ್ ಕ್ರಿಕೆಟ್ ಕಾಶಿ ಲಾಡ್ರ್ಸ್ ನಲ್ಲಿ ನಡೆಯಲಿದ್ದು, 83 ಚಿತ್ರವು 2020 ಏಪ್ರಿಲ್ 10ಕ್ಕೆ ರಿಲೀಸ್ ಆಗಲಿದೆ.