ಬೆಂಗಳೂರು: ಕೇಂದ್ರ ಗೃಹ ಮಂತ್ರಿ ಅಮಿತ್ ಶಾ (Amit shah) ಅವರು ಚುನಾವಣೆ ಇದ್ದಾಗ ರಾಜ್ಯಕ್ಕೆ ಬಂದೇ ಬರುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (Parameshwara) ವ್ಯಂಗ್ಯವಾಡಿದ್ದಾರೆ.
ಅಮಿತ್ ಶಾ ಅವರ ಮೈಸೂರು (Mysuru) ಪ್ರವಾಸ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಮಿತ್ ಶಾ ಚುನಾವಣೆ ಇದ್ದಾಗ ಬಂದೇ ಬರ್ತಾರೆ. ಪ್ರಧಾನಿಯದ್ದು ಇಷ್ಟರಲ್ಲೇ ಟಿಪಿ ಬರುತ್ತೆ. ಅವರು ಏನ್ ಮಾಡಬೇಕೋ ಮಾಡಲಿ, ನಾವೇನ್ ಮಾಡಬೇಕೋ ಮಾಡ್ತೀವಿ. ಸಂದರ್ಭ ಬಂದಾಗ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಮಾಡ್ತೀವಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು ಯೂ ಟರ್ನ್ ಹೊಡೆಯುವ ಗಿರಾಕಿ ಅಲ್ಲ: ನಿಖಿಲ್ ಕುಮಾರಸ್ವಾಮಿ
Advertisement
Advertisement
ನೂರು ನೋಟಿಸ್ ಕೊಟ್ಟರೂ ಹೆದರುವುದಿಲ್ಲ ಎಂಬ ಈಶ್ವರಪ್ಪ (Eshwarappa) ಹೇಳಿಕೆಗೆ ಪ್ರತಿಕ್ರಿಯಿಸಿ, ಈಶ್ವರಪ್ಪ ಅವರನ್ನು ಹೆದರಿಸಲು ಯಾರೂ ಹೋಗಿಲ್ಲ. ಕಾನೂನಿನ ಪ್ರಕಾರ, ನೋಟೀಸ್ ಕೊಟ್ಟಿದ್ದೀವಿ. ಮೊದಲು ಅದಕ್ಕೆ ಸಮಜಾಯಿಷಿ ಕೊಡಲಿ. ಈಶ್ವರಪ್ಪ ಅವರು ಬಹಳ ದೊಡ್ಡವರು, ಹೆದರಿಸೋಕೆ ಆಗುತ್ತಾ? ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಅಳಿಯ-ಮಗಳ ಜಗಳದಲ್ಲಿ ಹತ್ಯೆಯಾದ ಅತ್ತೆ
Advertisement
Advertisement
ಕಾರ್ಯಕರ್ತರಿಗೆ ನಿಗಮ ಮಂಡಳಿ ಹಂಚಿಕೆ ವಿಳಂಬ ವಿಚಾರದ ಬಗ್ಗೆ ಮಾತನಾಡಿ, ಆದಷ್ಟು ಬೇಗ ಮಾಡ್ತೀವಿ ಅಂತಾ ಹೇಳಿದ್ದಾರೆ. ನಾವು ಬೇಸರ ಪಟ್ಟಿದ್ದೆಲ್ಲ ಮುಗಿದು ಹೋಯ್ತು. ಸಿಎಂ ಮತ್ತು ಡಿಸಿಎಂ ಚರ್ಚೆ ಮಾಡಿದ್ದಾರೆ. ಅಂತಿಮಗೊಳಿಸಿದ್ದೀವಿ ಅಂತಾ ಸಹ ಹೇಳಿದ್ದಾರೆ. ನಾವು ಯಾರದ್ದೋ ಮನೆಯಲ್ಲಿ ತಿಂಡಿ ತಿನ್ನೋದೇ ತಪ್ಪಾ? ನಾವೆಲ್ಲ ಮುನಿಯಪ್ಪ ಮನೆಗೆ ಹೋಗಿ ತಿಂಡಿ ತಿಂದಿದ್ದೀವಿ. ಅವರ ಮನೆಗೆ ಹೋಗಿ ಲಗ್ನ, ಸಂಬಂಧ ಮಾಡೋಕೆ ಮಾತಾಡ್ತೀವಾ? ನಾಲ್ಕು ಜನ ಸೇರಿದ ಮೇಲೆ ರಾಜಕೀಯ ಮಾತಾಡ್ತೀವಿ. ಹೆಚ್ಚು ಸೀಟು ಗೆಲ್ಲೋಕೆ ನಾವು ಏನ್ ಮಾಡಬಹುದು ಅಂತಾ ಚರ್ಚೆ ಮಾಡಿದ್ದೀವಿ. ಅದಕ್ಕೆ ಬೇರೆ ಬಣ್ಣ ಬಳಿಯೋದು ಬೇಡ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಆಚಾರ್ಯ ಪ್ರಮೋದ್ ಕೃಷ್ಣಂ ಉಚ್ಛಾಟನೆ- ಕೈ ನಾಯಕ ಹೇಳಿದ್ದೇನು?
ಇದೇ ವೇಳೆ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ರಾಜೀನಾಮೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ರಾಜೀನಾಮೆ ಕೊಟ್ಟಿರೋದು ವೈಯಕ್ತಿಕ ಎಂದು ಅವರು ಹೇಳಿದ್ದಾರೆ. ರಾಜೀನಾಮೆಯಲ್ಲಿ ಯಾವ ಆರೋಪ ಮಾಡಿಲ್ಲ. ಹೀಗಾಗಿ ರಾಜೀನಾಮೆ ಸ್ವೀಕರಿಸಬೇಕಲ್ವಾ?. ಪ್ರತಾಪ್ ಅವರ ರಾಜೀನಾಮೆ ಸ್ವೀಕಾರ ಆಗಿದೆ ಎಂದು ತಿಳಿಸಿದ್ದಾರೆ. ಕಮಿಷನ್ ಆರೋಪಕ್ಕೆ ಸಿಬಿಐ ತನಿಖೆಗೆ ಆರ್.ಅಶೋಕ್ (R.Ashok) ಆಗ್ರಹ ವಿಚಾರಕ್ಕೆ, ಅವರು ಇದ್ದಾಗ ನಾವು ಕೇಳಿದ್ದೀವಿ, ಅವರು ಕೊಟ್ಟಿರಲಿಲ್ಲ. ಅವರ ಕಾಲದಲ್ಲಿ ಪ್ರಧಾನಿಗೇ ಪತ್ರ ಬರೆದಿದ್ರು. ಆದರೂ ಸಿಬಿಐ ತನಿಖೆಗೆ ನೀಡಲಿಲ್ಲ. ಈಗ ಆಗ್ರಹ ಮಾಡುತ್ತಿದ್ದಾರೆ ಎಂದು ಆರ್. ಆಶೋಕ್‌ಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ಅಮಿತ್ ಶಾ ಎಂಟ್ರಿ- ಮೈತ್ರಿ ನಾಯಕರ ಭೇಟಿ ಇಂದೇ ನಡೆಯುತ್ತಾ?