ಟ್ವಿಟರ್ ಸಂಸ್ಥೆಯ ಮಾಲೀಕ ಎಲೋನ್ ಮಸ್ಕ್ (Elon Musk) ಬ್ಲೂಟಿಕ್ (BlueTick) ತೆಗೆದು ಹಾಕಿ ಸಾಕಷ್ಟು ಸೆಲೆಬ್ರಿಟಿಗಳಿಗೆ ಅಚ್ಚರಿ ಮೂಡಿಸಿದ್ದರು. ಸಬ್ ಸ್ಕ್ರೈಬ್ ಮಾಡಿಕೊಂಡವರಿಗೆ ಮಾತ್ರ ಬ್ಲೂ ಟಿಕ್ ನೀಡುವುದಾಗಿ ಈ ಹಿಂದೆಯೇ ಪ್ರಕಟಿಸಿದ್ದ ಎಲೋನ್ ಮಸ್ಕ್ ತಾವು ಕೊಟ್ಟ ಗಡುವು ಮುಗಿಯುತ್ತಿದ್ದಂತೆಯೇ ಏಕಾಏಕಿ ಬ್ಲೂ ಟಿಕ್ ತೆಗೆದು ಹಾಕಿದ್ದರು. ಇದರಿಂದಾಗಿ ಸಾಕಷ್ಟು ಜನರು ಗೊಂದಲವಾಗಿದ್ದರು.
ಭಾರತೀಯ ಸಿನಿಮಾ ರಂಗ ಅದೆಷ್ಟೋ ನಟ ನಟಿಯರಿಗೆ ಮತ್ತು ತಂತ್ರಜ್ಞರಿಗೆ ಹಾಗೂ ಕ್ರಿಕೆಟ್ ದಿಗ್ಗಜರಿಗೂ ಕೂಡ ಬ್ಲೂ ಟಿಕ್ ಯಾಕೆ ಹೋಯಿತು ಎನ್ನುವ ಕುರಿತು ಅರಿವಿರಲಿಲ್ಲ. ಹಾಗಾಗಿ ಬಹುತೇಕರು ಬ್ಲೂ ಟಿಕ್ ಎಲ್ಲಿ ಹೋಯಿತು ಎಂದು ಪ್ರಶ್ನೆ ಮಾಡಿದ್ದರು. ಈಗಾಗಲೇ ಹಣ ಕೊಟ್ಟು ಖರೀದಿ ಮಾಡಿರುವವರನ್ನು ತೋರಿಸಿ, ನಮ್ಮದು ಯಾಕೆ ಇಲ್ಲ ಎಂದು ಕೇಳಿದ್ದರು. ಆಮೇಲೆ ಅವರಿಗೆ ಮನವರಿಕೆ ಆಗಿದೆ.
ಬ್ಲೂಟಿಕ್ ತೆಗೆದು ಹಾಕಿದ ಬೆನ್ನಲ್ಲೆ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಅದೇ ಟ್ವಿಟರ್ ಮೂಲಕ ಎಲೋನ್ ಮಸ್ಕ್ ಗೆ ಪ್ರಶ್ನೆಯೊಂದನ್ನು ಮಾಡಿದ್ದಾರೆ. ಅಲ್ಲದೇ ಬೇಡಿಕೆಯನ್ನೂ ಇಟ್ಟಿದ್ದಾರೆ. ಟ್ವಿಟರ್ ಖಾತೆಯಲ್ಲಿ ಎಡಿಟ್ ಮಾಡುವಂತಹ ಅವಕಾಶವಿಲ್ಲ. ಹಾಗಾಗಿ ಎಡಿಟ್ ಮಾಡುವಂತ ಅವಕಾಶವನ್ನು ನೀಡಿ ಎಂದು ಕೇಳಿಕೊಂಡಿದ್ದಾರೆ. ಅದನ್ನು ನೇರವಾಗಿ ಮಸ್ಕ್ ಗೆ ಬರೆದು ಟ್ಯಾಗ್ ಮಾಡಿದ್ದಾರೆ. ಇದನ್ನೂ ಓದಿ:ನಯನತಾರಾ ಬಗ್ಗೆ ಕನ್ನಡದ ‘ಗೂಳಿ’ ನಟಿ ಶಾಕಿಂಗ್ ಹೇಳಿಕೆ
ಬಹುತೇಕ ಟ್ವೀಟ್ ಅನ್ನು ಹಿಂದಿಯಲ್ಲಿ ಬರೆದಿರುವ ಅಮಿತಾಭ್, ಟ್ವಿಟರ್ ಮಾಲೀಕರಿಗೆ ಹಿಂದಿ ಅರ್ಥ ಮಾಡಿಸೋರು ಯಾರು ಎನ್ನುವ ಪ್ರಶ್ನೆಯನ್ನೂ ಅಭಿಮಾನಿಗಳು ಮಾಡಿದ್ದಾರೆ. ಹಿಂದಿಯಿಂದ ಇಂಗ್ಲಿಷ್ ಗೆ ತರ್ಜುಮೆ ಮಾಡಿ ಹೇಳುವವರು ಯಾರು ಎನ್ನುವ ಪ್ರಶ್ನೆಯನ್ನೂ ಹಲವರು ಮಾಡಿದ್ದಾರೆ.