ಸಾಮಾಜಿಕ ಜಾಲತಾಣದಲ್ಲಿ ಅಮೀರ್ ಖಾನ್‍ಗೆ ಮತ್ತೆ ಶಾಕಿಂಗ್ ನ್ಯೂಸ್

Public TV
1 Min Read
Amir khan 3

ಮುಂಬೈ: ಕೆಲವು ದಿನಗಳ ಹಿಂದೆ ‘ಥಗ್ಸ್ ಆಫ್ ಹಿಂದೊಸ್ತಾನ್’ ಚಿತ್ರದ ಅಮಿರ್ ಖಾನ್ ಲುಕ್ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿ ವೈರಲ್ ಆಗಿತ್ತು. ಆದರೆ ಈಗ ಬಿಗ್ ಬಿ ಅಮಿತಾಬ್ ಬಚ್ಚನ್ ಕಾಣಿಸಿಕೊಳ್ಳುವ ಪಾತ್ರದ ಲುಕ್ ಕೂಡ ಲೀಕ್ ಆಗಿದೆ.

ಅಮಿತಾಬ್ ಬಚ್ಚನ್ ಸಿನಿಮಾ ಸೆಟ್‍ನಿಂದ ಹೊರ ಬರುವಾಗ ಫೋಟೋವನ್ನು ತೆಗೆಯಲಾಗಿದೆ. ಫೋಟೋದಲ್ಲಿ ಅಮಿತಾಬ್ ರಗಡ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ತೀವ್ರವಾಗಿ ಹೆದರಿಸುವ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಅಮಿರ್ ಅವರ ಫಸ್ಟ್ ಲುಕ್ ‘ಗೇಮ್ ಆಫ್ ಥ್ರೋನ್ಸ್’ ಚಿತ್ರದ ಥರ ಇದ್ದರೆ, ಅಮಿತಾಬ್ ಫೋಟೋದಲ್ಲಿ ಕಬ್ಬಿಣದ ರಕ್ಷಾ ಕವಚ, ಕತ್ತಿ, ತಲೆ ಮೇಲೆ ಕಪ್ಪು ಬಣ್ಣದ ಬಟ್ಟೆಯನ್ನು ಸುತ್ತಿಕೊಂಡು ವಾರಿಯರ್ ರೀತಿ ಕಾಣುತ್ತಿದ್ದಾರೆ.

Amithab Bachchan

‘ಥಗ್ಸ್ ಆಫ್ ಹಿಂದೊಸ್ತಾನ್’ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ಅಮಿರ್ ಖಾನ್ ಮೊದಲನೇ ಬಾರಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಕತ್ರಿನಾ ಕೈಫ್, ಫಾತಿಮಾ ಶೇಕ್ ತೆರೆಯನ್ನು ಹಂಚಿಕೊಂಡಿದ್ದಾರೆ. ತಾವು ಅಮಿತಾಬ್ ಬಚ್ಚನ್ ಅವರ ಜೊತೆ ನಟಿಸುತ್ತಿರುವುದರ ಬಗ್ಗೆ ನಟಿ ಫಾತಿಮಾ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಅಮಿರ್ ಮತ್ತು ಅಮಿತಾಬ್ ಅವರ ಫಸ್ಟ್ ಲುಕ್ ನೋಡಿ ಮೆಚ್ಚುಗೆ ನೀಡಿದ ಜನರು ನಾಯಕಿಯರ ಫಸ್ಟ್ ಲುಕ್‍ಗಾಗಿ ಕಾಯುತ್ತಿದ್ದಾರೆ.

ಯಶ್ ರಾಜ್ ಫಿಲ್ಸ್‍ಂ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ವಿಜಯ್ ಕೃಷ್ಣ ಆಚಾರ್ಯ ಆಕ್ಷನ್-ಕಟ್ ಹೇಳಲಿದ್ದಾರೆ. ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರ 2018 ರಲ್ಲಿನವೆಂಬರ್ 7, 2018 ರಂದು ಬಿಡುಗಡೆಯಾಗಲಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಲೀಕ್ ಆಗುತ್ತಿರುವ ಹಿನ್ನೆಲೆಯಲ್ಲಿ ಅಮೀರ್ ಖಾನ್ ಶೂಟಿಂಗ್ ನಲ್ಲಿ ಮತ್ತಷ್ಟು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಎಂದು ಹೇಳಿದ್ದರು. ಆದರೆ ಈಗ ಮತ್ತೆ ಶೂಟಿಂಗ್ ಚಿತ್ರಗಳು ಲೀಕ್ ಆಗಿದೆ.

Amir Khan 2

Amir Khan

Share This Article
Leave a Comment

Leave a Reply

Your email address will not be published. Required fields are marked *