ನವದೆಹಲಿ: ಭಾರತ ಚಿತ್ರರಂಗದ ಮೊದಲ ಮಹಿಳಾ ಸೂಪರ್‍ಸ್ಟಾರ್ ಎನಿಸಿಕೊಂಡಿದ್ದ ಶ್ರೀದೇವಿ ಶನಿವಾರ ರಾತ್ರಿ ವಿಧಿವಶರಾದರೆಂದು ಕೇಳಿ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ನಟಿಯ ಸಾವಿನ ಸುದ್ದಿ ಕೇಳಿ ಸಾಮಾಜಿಕ ಜಾಲತಾಣದಲ್ಲಿ ಜನ ಇದು ನಂಬಲು ಸಾಧ್ಯವಿಲ್ಲದ ಸಂಗತಿ ಎಂದು ಹೇಳಿದ್ದಾರೆ. ಅದರಲ್ಲೂ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಶ್ರೀದೇವಿ ಸಾವಿಗೂ ಮುನ್ನ ಮಾಡಿದ್ದ ಒಂದು ಟ್ವೀಟ್ ಈಗ ಎಲ್ಲರ ಗಮನ ಸೆಳೆದಿದೆ. ಅಮಿತಾಬ್ ಬಚ್ಚನ್‍ಗೆ ಶ್ರೀದೇವಿ ಸಾವಿನ ಮುನ್ಸೂಚನೆ ಸಿಕ್ಕಿತ್ತಾ ಎಂಬ ಮಾತುಗಳು ಶುರುವಾಗಿವೆ.
T 2625 – न जाने क्यूँ , एक अजीब सी घबराहट हो रही है !!
— Amitabh Bachchan (@SrBachchan) February 24, 2018
ಶ್ರೀದೇವಿ ಸಾವಿನ ಸುದ್ದಿ ಹೊರಬೀಳುವುದಕ್ಕೆ ಮುನ್ನ ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿ, “ಅದ್ಯಾಕೋ ಗೊತ್ತಿಲ್ಲ, ಏನೋ ಒಂದು ರೀತಿಯ ವಿಚಿತ್ರ ಆತಂಕವಾಗ್ತಿದೆ” ಎಂದು ಬರೆದುಕೊಂಡಿದ್ದರು. ಇದಾದ ಕೆಲವೇ ನಿಮಿಷಗಳಲ್ಲಿ ಶ್ರೀದೇವಿ ಅವರ ಸಾವಿನ ಸುದ್ದಿ ಹೊರಬಿದ್ದಿದೆ. ಹೀಗಾಗಿ ಅಮಿತಾಬ್ ಬಚ್ಚನ್ ಅವರಿಗೆ ಶ್ರೀದೇವಿ ಸಾವಿನ ಬಗ್ಗೆ ಪೂರ್ವಸೂಚನೆ ಸಿಕ್ಕಿತ್ತಾ ಎಂದು ಟ್ವಿಟ್ಟರಿಗರು ಮಾತಾಡಿಕೊಳ್ತಿದ್ದಾರೆ.
Talk About Sixth Sense. ???? #Sridevi #RIPSridevi pic.twitter.com/Lc69y5Ygx0
— Sir Jadeja fan (@SirJadeja) February 24, 2018
https://www.youtube.com/watch?v=Q-TaTMBm5XM
https://www.youtube.com/watch?v=Wrxrv0oaqpk