ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಖ್ಯಾತರಾಗಿರುವ ಸಿದ್ದಗಂಗಾ ಶ್ರೀಗಳ ಕುರಿತಾಗಿ ಸಿನಿ ಸೀರಿಸ್ ಸಿದ್ಧವಾಗುತ್ತಿದೆ. 52 ಕಂತುಗಳು ಮೆಗಾ ಸೀರಿಸ್ ಇದಾಗಿದ್ದು, ಹಂಸಲೇಖ ಅವರ ಸಾರಥ್ಯದಲ್ಲಿ ಮೂಡಿ ಬರಲಿದೆ. ಸಿದ್ದಗಂಗಾ ಶ್ರೀಗಳ 115ನೇ ಜಯಂತೋತ್ಸವದ ಪ್ರಯುಕ್ತ ಈ ಸೀರಿಸ್ ಸಿದ್ಧವಾಗುತ್ತಿದ್ದು, ಶ್ರೀಗಳ ಪಾತ್ರಕ್ಕಾಗಿ ಅಮಿತಾಭ್ ಬಚ್ಚನ್ ಅವರನ್ನು ಕೇಳಲಾಗಿದೆಯಂತೆ. ಆದರೆ ಇನ್ನೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸಂಗೀತ ಬ್ರಹ್ಮ ಹಂಸಲೇಖ ತಿಳಿಸಿದ್ದಾರೆ.
ಶ್ರೀಗಳ ಜೀವನ ಚರಿತ್ರೆಯನ್ನು ಸಾರುವ ಸೀರಿಸ್ ಇದಾಗಿದ್ದರಿಂದ ದೊಡ್ಡ ಮಟ್ಟದಲ್ಲೇ ನಿರ್ಮಾಣ ಮಾಡುವ ಯೋಜನೆ ತಂಡದ್ದು. ಹಾಗಾಗಿ ಅಮಿತಾಭ್ ಬಚ್ಚನ್ ಅವರನ್ನು ನಿರ್ಮಾಣ ತಂಡ ಈಗಾಗಲೇ ಸಂಪರ್ಕ ಮಾಡಿದೆ. ಅಮಿತಾಭ್ ಅವರ ಆರೋಗ್ಯದಲ್ಲಿ ಏರುಪೇರಾಗಿರುವ ಕಾರಣದಿಂದಾಗಿ ಅವರ ಗ್ರೀನ್ ಸಿಗ್ನಲ್ ಗೆ ತಂಡ ಕಾಯುತ್ತಿದೆ. ಇದನ್ನೂ ಓದಿ: ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು
ಅಮಿತಾಭ್ ಈ ಹಿಂದೆ ಅಮೃತಧಾರೆ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾ ಅಮಿತಾಭ್ ಕಾರಣದಿಂದಾಗಿ ಬಾಲಿವುಡ್ ಮಂದಿಗೂ ತಲುಪಿತ್ತು. ಹಾಗಾಗಿ ಅಮಿತಾಭ್ ಅವರು ಶ್ರೀಗಳ ಪಾತ್ರ ಮಾಡಿದರೆ, ಇನ್ನಷ್ಟು ಜನಕ್ಕೆ ಶ್ರೀಗಳ ಜೀವನ ತಿಳಿಸಿದ ಹಾಗೆ ಆಗುತ್ತೆ ಎನ್ನುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದಿದೆ ತಂಡ. ಇದನ್ನೂ ಓದಿ: ಅಪ್ಪ-ಮಗನ್ನ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳ ಕಾತರ : ‘ಆಚಾರ್ಯ’ದಲ್ಲಿ ಒಂದಾದ ಮಗಧೀರ ಜೋಡಿ
ಈ ಸಿನಿ ಸಿರೀಸ್ ಕನ್ನಡವೂ ಸೇರಿದಂತೆ ಏಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವುದು ಮತ್ತೊಂದು ವಿಶೇಷ. ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ ಹಾಗೂ ಸಂಸ್ಕೃತ ಭಾಷೆಯಲ್ಲೂ ಈ ಸೀರಿಸ್ ಅನ್ನು ತಯಾರಿಸಲಾಗುತ್ತಿದೆ. ಮುನ್ನೂರಕ್ಕೂ ಅಧಿಕ ತಂತ್ರಜ್ಞರು ಇದಕ್ಕಾಗಿ ಕೆಲಸ ಮಾಡಿದರೆ, ಏಳೇಳು ತಂಡಗಳಲ್ಲಿ ಈ ಕೆಲಸ ನಡೆಯಲಿದೆ.