850 ರೈತರ ಸಾಲಮನ್ನಾ ಮಾಡಲು ಮುಂದಾದ್ರು ಬಿಗ್ ಬಿ!

Public TV
1 Min Read
dc Cover bhho0178ncidi75obfjgd29l14 20171011155708.Medi

ಮುಂಬೈ: ಬಾಲಿವುಡ್ ನಟ ಬಿಗ್ ಬಿ ಅಮಿತಾ ಬಚ್ಚನ್ ಅವರು ಉತ್ತರ ಪ್ರದೇಶದ 850 ಮಂದಿ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದಾರೆ.

ನಮ್ಮ ದೇಶಕ್ಕೆ ಅವರು ಜೀವನವನ್ನೇ ತ್ಯಾಗ ಮಾಡುತ್ತಾರೆ. ಮಹಾರಾಷ್ಟ್ರದಲ್ಲಿ 44 ಕುಟುಂಬಗಳು 112 ಘಟಕಗಳಾಗಿ ವೈವಿಧ್ಯಗೊಂಡಿದ್ದು, ಹೀಗಾಗಿ ಸಣ್ಣ ರೀತಿಯಲ್ಲಿ ಸಹಾಯ ಮಾಡಲಾಗಿದೆ. ದೇಶದ ಇನ್ನಿತರ ಭಾಗಗಳಲ್ಲಿಯೂ ಹೆಚ್ಚಿನ ಅಗತ್ಯಗಳಿದ್ದು ಅವುಗಳನ್ನು ಪೂರೈಸಬೇಕಿದೆ ಎಂದರು.

ಬಚ್ಚನ್ ಅವರು ಈ ಹಿಂದೆ ಮಹಾರಾಷ್ಟ್ರದ 350 ಕ್ಕೂ ಹೆಚ್ಚು ರೈತರ ಸಾಲವನ್ನು ಪಾವತಿ ಮಾಡುವ ಮೂಲಕ ಅವರುಗಳು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಅಮಿತಾಬ್ ತಡೆಗಟ್ಟಿದ್ದರು. ಅಷ್ಟೇ ಅಲ್ಲದೇ ಆಂಧ್ರ ಮತ್ತು ವಿದರ್ಭದ ರೈತರ ಸಾಲಮನ್ನಾ ಕೂಡ ಮಾಡಲಾಗಿತ್ತು. ಇದೀಗ ಉತ್ತರಪ್ರದೇಶದ ರೈತರ ಸಾಲಮನ್ನಾ ಮಾಡಲು ಸುಮಾರು 850 ರೈತರ ಪಟ್ಟಿಯನ್ನು ಗುರುತಿಸಲಾಗಿದೆ ಮತ್ತು 5.5 ಕೋಟಿ ರೂಪಾಯಿಗಳಷ್ಟು ಸಾಲವನ್ನು ತೀರಿಸುವುದಕ್ಕೆ ಸಂಬಂಧಿಸಿದ ಬ್ಯಾಂಕ್‍ಗಳೊಂದಿಗೆ ಮಾತನಾಡಲಿದ್ದೇನೆ ಎಂದು ತಮ್ಮ ಬ್ಲಾಗ್‍ನಲ್ಲಿ ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ.

farmer

ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಜಿತ್ ಸಿಂಗ್ ಅವರಿಗೆ ಸಹಾಯ ಮಾಡಲಾಗುವುದು ಎಂದು ಅವರು ಬರೆದುಕೊಂಡಿದ್ದಾರೆ. ಬಲವಂತದಿಂದ ವೇಶ್ಯಾವೃತ್ತಿಗೆ ತಳ್ಳಲ್ಪಟ್ಟ ಮಹಿಳೆಯರ ರಕ್ಷಣೆಗಾಗಿ ದುಡಿಯುತ್ತಿರುವ ಸಾಮಾಜಿಕ ಕಾರ್ಯಕರ್ತ ಅಜಿತ್ ಸಿಂಗ್ ಅವರಿಗೆ ನನ್ನ ಕೊಡುಗೆ ಸಲ್ಲುತ್ತದೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಬಿಗ್ ಬೀ ಮಹಾರಾಷ್ಟ್ರದ 350 ರೈತರಿಗೆ ಸಾಲಮನ್ನಾ ಮಾಡಲು ಸಹಾಯ ಮಾಡಿದ್ದರು. ಇದೀಗ ಉತ್ತರ ಪ್ರದೇಶದ 850 ರೈತರಿಗೆ ಸಹಾಯ ಮಾಡಲು ಮುಂದಾಗಿರುವುದು ಹೆಮ್ಮೆಯ ವಿಷಯವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *