ತಮ್ಮ ಮೊದಲ ಕಾರನ್ನು ಮರಳಿ ಪಡೆದು ಭಾವುಕರಾದ ಬಿಗ್‍ಬಿ

Public TV
1 Min Read
amithab bachchan new

ಮುಂಬೈ: ಮೊದಲು ಸಿಕ್ಕ ಕೆಲಸ, ಸಂಬಳ, ಕಾರು ಹೀಗೆ ಜೀವನದ ಸಾಕಷ್ಟು ಮೊದಲುಗಳ ನೆನಪು ಸದಾ ಹಸನಾಗಿರುತ್ತದೆ, ಅದನ್ನು ಮರೆಯಲು ಸಾಧ್ಯವಿಲ್ಲ. ಸದ್ಯ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ತಮ್ಮ ಮೊದಲ ಕಾರಿನ ನೆನಪನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಭಾವುಕರಾಗಿದ್ದಾರೆ.

amitabh bachchan

ಅಭಿಮಾನಿಗಳಿಗೆ ಅಮಿತಾಬ್ ಅವರು ತಾವು ಮೊದಲು ಖರೀದಿಸಿದ ಫ್ಯಾಮಿಲಿ ಕಾರ್ ಅನ್ನು ಪರಿಚಯಿಸಿದ್ದಾರೆ. ಸೋಮವಾರ ಬಿಗ್ ಬಿ ಹಳದಿ ಬಣ್ಣದ ಫೋರ್ಡ್ ಪ್ರಿಫೆಕ್ಟ್ ಕಾರಿನ ಫೋಟೋವನ್ನು ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ. ಕೆಲವು ಕ್ಷಣಗಳು ನಿಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತೆ. ನನಗೂ ಈಗ ಹಾಗೆ ಆಗಿದೆ. ಏನೊ ವ್ಯಕ್ತಪಡಿಸಲು ಪ್ರಯತ್ನಿಸುತ್ತಿದ್ದೇನೆ. ಆದ್ರೆ ಸಾಧ್ಯವಾಗುತ್ತಿಲ್ಲ ಎಂದು ಬರೆದುಕೊಂಡು ಕಾರಿನ ಜೊತೆ ತಾವು ನಿಂತಿರುವ ಫೋಟೋವನ್ನು ಪೋಸ್ಟ್ ಮಾಡಿಕೊಂಡಿದ್ದಾರೆ.

https://www.facebook.com/AmitabhBachchan/photos/rpp.449082841792177/3192251197475314

1950ರಲ್ಲಿ ಅಲಹಾಬಾದ್‍ನಲ್ಲಿದ್ದ ಸಮಯದಲ್ಲಿ ಹಳದಿ ಬಣ್ಣದ ಫೋರ್ಡ್ ಪ್ರಿಫೆಕ್ಟ್ ಕಾರನ್ನು ಅಮಿತಾಬ್ ಖರೀದಿಸಿದ್ದರು. ಆದರೆ ಬಾಲಿವುಡ್‍ನಲ್ಲಿ ಅಮಿತಾಬ್ ಹೆಸರು ಮಾಡುತ್ತಿದ್ದಂತೆ ಈ ಕಾರನ್ನು ಮಾರಾಟ ಮಾಡಿದ್ದರು. ಆದರೆ ಅಮಿತಾಬ್ ಅವರಿಗೆ ಈ ಕಾರು ಅಚ್ಚುಮೆಚ್ಚಾಗಿತ್ತು. ಹೀಗಾಗಿ ಉತ್ತರ ಪ್ರದೇಶದ ನಂಬರ್ ಇರುವ ಕಾರಿಗಾಗಿ ಬಿಗ್‍ಬಿ ಗೆಳೆಯ ಅನಂತ್ ಅವರು ಸಾಕಷ್ಟು ಹುಡುಕುತ್ತಿದ್ದರು. ಕೊನೆಗೂ ಗೆಳೆಯನ ಪ್ರೀತಿಯ ಕಾರನ್ನು ತಂದು, ಅದನ್ನು ಮಾಡಿಫೈ ಮಾಡಿ ಅನಂತ್ ಬಿಗ್‍ಬಿ ಅವರಿಗೆ ಗಿಫ್ಟ್ ನೀಡಿದ್ದಾರೆ. ಗೆಳೆಯನ ವಿಶೇಷ ಉಡುಗೊರೆಗೆ ಫಿದಾ ಆಗಿ ಅಮಿತಾಬ್ ಭಾವುಕರಾಗಿದ್ದಾರೆ.

amitabh car21

ತಮ್ಮ ಪ್ರೀತಿಯ ಕಾರಿನ ಬಗ್ಗೆ, ಗೆಳೆಯನ ಬಗ್ಗೆ ಸಂತಸದಿಂದ ಬಿಗ್‍ಬಿ ಹಂಚಿಕೊಂಡಿದ್ದಾರೆ. ನನಗೆ ಈ ಗಿಫ್ಟ್ ನೀಡಿದ್ದಕ್ಕೆ ಧನ್ಯವಾದ ಅನಂತ್. ನೀನು ಕೊಟ್ಟ ಸರ್ಪ್ರೈಸ್ ನೋಡಿ ಕಣ್ತುಂಬಿ ಬಂತು ಎಂದು ಬರೆದು, ತಮ್ಮ ಹಾಗೂ ಅನಂತ್ ಸ್ನೇಹದ ಬಗ್ಗೆ ಬಿಗ್‍ಬಿ ಹೇಳಿಕೊಂಡಿದ್ದಾರೆ. ಸದ್ಯ ಅಮಿತಾಬ್ ಬಳಿ ಸಾಕಷ್ಟು ದುಬಾರಿ ಕಾರುಗಳಿವೆ. ಆದರೆ ಮೊದಲು ಪಡೆದ ಕಾರಿನ ಮೇಲೆ ಅವರಿಗೆ ವಿಶೇಷ ಪ್ರೀತಿಯಿತ್ತು.

amitabh car31

Share This Article
Leave a Comment

Leave a Reply

Your email address will not be published. Required fields are marked *