`ಕಿರಿಕ್ ಪಾರ್ಟಿ’ ಬ್ಯೂಟಿ ರಶ್ಮಿಕಾ ಮಂದಣ್ಣ ಸದ್ಯ ದಕ್ಷಿಣದ ಸಿನಿಮಾಗಳ ಜತೆ ಬಾಲಿವುಡ್ನಲ್ಲೂ ಮಿಂಚ್ತಿದ್ದಾರೆ. ಇದೀಗ ರಶ್ಮಿಕಾ ಮತ್ತು ಬಿಗ್ಬಿ ನಟನೆಯ ʻಗುಡ್ ಬೈʼ ಚಿತ್ರದ ಫಸ್ಟ್ ಲುಕ್ ಮೂಲಕ ರಶ್ಮಿಕಾ ಸೌಂಡ್ ಮಾಡ್ತಿದ್ದಾರೆ.
ಲಕ್ಕಿ ನಟಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಬಿಗ್ ಬಿ ಜೊತೆಗಿನ ʻಗುಡ್ ಬೈʼ ಚಿತ್ರದ ಮೂಲಕ ಗಮನ ಸೆಲೆಯುತ್ತಿದ್ದಾರೆ. ಸದ್ಯ ಈ ಚಿತ್ರದ ಫಸ್ಟ್ ಲುಕ್ ಜೊತೆ ರಿಲೀಸ್ ಡೇಟ್ ಕೂಡ ಚಿತ್ರದ ಅನೌನ್ಸ್ ಮಾಡಿದ್ದಾರೆ. ಇದನ್ನೂ ಓದಿ:ಹಳೆ ಗರ್ಲ್ ಫ್ರೆಂಡ್ಗಾಗಿ ಹಂಬಲಿಸುತ್ತಿರುವ ಜಶ್ವಂತ್..!
ವಿಕಾಸ್ ನಿರ್ದೇಶನದ ಗುಡ್ ಬೈ ಚಿತ್ರದ ಫಸ್ಟ್ ಲುಕ್ ಇದೀಗ ಪ್ರೇಕ್ಷಕರ ಗಮನ ಸೆಲೆಯುತ್ತಿದೆ. ಇನ್ನು ಚಿತ್ರ ಅಕ್ಟೋಬರ್ 7ಕ್ಕೆ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅಮಿತಾಭ್ ಮಗಳ ಪಾತ್ರದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಇವರಿಬ್ಬರ ಈ ಕಾಂಬಿನೇಷನ್ ಚಿತ್ರ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.
View this post on Instagram
ಸೌತ್ ಸಿನಿಮಾಗಳಲ್ಲಿ ಮೋಡಿ ಮಾಡಿರುವ ರಶ್ಮಿಕಾ, ಇದೀಗ ಬಾಲಿವುಡ್ ಅಂಗಳದಲ್ಲೂ ಗೆಲ್ಲುತ್ತಾರಾ ಹಿಂದಿ ಸಿನಿಪ್ರೇಕ್ಷಕ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.