ಬೆಂಗಳೂರು: ಯುಬಿ ಸಿಟಿ ಬಳಿ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ಸೇರಿದ ಕಾರನ್ನು ಆರ್‌ಟಿಒ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇಂದು ಸಂಜೆ ನಗರದ ಯುಬಿ ಸಿಟಿ ಬಳಿ ಆರ್‌ಟಿಒ ಅಧಿಕಾರಿಗಳು ಪರಿಶೀಲನೆಗೆ ಇಳಿದಿದ್ದರು. ಈ ವೇಳೆ ನಟ ಅಮಿತಾಭ್ ಹೆಸರಿನಲ್ಲಿ ನೊಂದಣಿ ಆಗಿರುವ ಐಷಾರಾಮಿ ರೋಲ್ಸ್ ರಾಯ್ಸ್ ಕಾರು ಪತ್ತೆಯಾಗಿತ್ತು.
Advertisement
Advertisement
ಎರಡು ವರ್ಷದಿಂದ ಇನ್ಶುರೆನ್ಸ್ ಇಲ್ಲದೇ, ಮಹಾರಾಷ್ಟ್ರ ರಿಜಿಸ್ಟರ್ ಆಗಿರುವ ರೋಲ್ಸ್ ರಾಯ್ ಕಾರು ಇನ್ನೂ ಅಮಿತಾಭ್ ಬಚ್ಚನ್ ಹೆಸರಿನಲ್ಲೇ ಇದೆ. ಉದ್ಯಮಿ ಬಾಬು 2019 ರಲ್ಲಿ 6 ಕೋಟಿ ರೂ. ಕೊಟ್ಟು ಅಮಿತಾಭ್ ಬಚ್ಚನ್ ಬಳಿ ಈ ಖರೀದಿ ಮಾಡಿದ ವಿಚಾರ ಪರಿಶೀಲನೆ ವೇಳೆ ತಿಳಿದು ಬಂದಿದೆ. ಆದರೆ ವಾಹನದ ಎಲ್ಲಾ ದಾಖಲೆ ಗಳು ಇನ್ನೂ ಬಚ್ಚನ್ ಹೆಸರಲ್ಲೇ ಇರೋದು ಪತ್ತೆಯಾಗಿದೆ. ಇದನ್ನೂ ಓದಿ: ಕೆಜಿಎಫ್ ಟೀಂ ಅಲ್ಲ ಅದು ಫ್ಯಾಮಿಲಿ: ಶ್ರೀನಿಧಿ ಶೆಟ್ಟಿ
Advertisement
ಇದೇ ವೇಳೆ ಪರಿಷತ್ ಸದಸ್ಯ ಫಾರೂಕ್ ಅವರಿಗೆ ಸೇರಿದ ಎರಡು ಐಷಾರಾಮಿ ಕಾರುಗಳು ಕೂಡ ಪತ್ತೆಯಾಗಿವೆ. ಇನ್ಶುರೆನ್ಸ್ ಇಲ್ಲದ, ಸೂಕ್ತ ದಾಖಲೆ ಇಲ್ಲದ, ಬೇರೆ ಬೇರೆ ರಾಜ್ಯಗಳಲ್ಲಿ ನೋಂದಣಿ ಮಾಡಿ, ಒಂದೇ ನಂಬರ್ ನಲ್ಲಿ ಬೇರೆ ಬೇರೆ ಕಾರುಗಳು ಓಡಾಟ ಮಾಡುತ್ತಿರುವುದನ್ನು ಆರ್‌ಟಿಒ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಸದ್ಯ ಕಾರ್ಯಾಚರಣೆ ಮುಂದುವರಿದಿದ್ದು ಹದಿಮೂರು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
Advertisement
ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ನರೇಂದ್ರ ಹೋಳ್ಕರ್ ನೇತೃತ್ವದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ರಾಜಣ್ಣ, ಮೋಟಾರ್ ವಾಹನ ನಿರೀಕ್ಷಕರಾದ ಸುಧಾಕರ್, ತಿಪ್ಪೇಸ್ವಾಮಿ, ವಿಶ್ವನಾಥ ಶೆಟ್ಟರ್, ರಂಜಿತ್, ರಾಜೇಶ್ ಮತ್ತು ರಾಜ್ ಕುಮಾರ್ ಅವರನ್ನ ಒಳಗೊಂಡ ತಂಡ ಇಂದು ಕಾರ್ಯಾಚರಣೆ ನಡೆಸಿತು.