BollywoodCinemaLatestMain Post

ಮುಂಬೈನಲ್ಲಿ ಮತ್ತೆ ದುಬಾರಿ ಬಂಗಲೆ ಖರೀದಿಸಿದ ಅಮಿತಾಭ್ ಬಚ್ಚನ್

ಬಾಲಿವುಡ್ ಚಿತ್ರರಂಗದ ದೊಡ್ಡಣ್ಣ ಎಂದೇ ಖ್ಯಾತಿ ಪಡೆದಿರುವ ಅಮಿತಾಭ್ ಬಚ್ಚನ್ (Amitabh bachchan) ಮತ್ತೆ ಸುದ್ದಿಯಲ್ಲಿದ್ದಾರೆ. ಮುಂಬೈನ ಜುಹುನಲ್ಲಿ ಮತ್ತೊಂದು ದುಬಾರಿ ಬಂಗಲೆಯನ್ನು ಖರೀದಿಸಿದ್ದಾರೆ.

ಹಿಂದಿ ಚಿತ್ರರಂಗಕ್ಕೆ ಬಿಗ್ ಬಿ ಕೊಡುಗೆ ಅಪಾರ, ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಟ ಬಿಗ್ ಬಿ ತಮ್ಮ 79ರ ವಯಸ್ಸಿನಲ್ಲೂ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಇನ್ನೂ ಸಾಕಷ್ಟು ಆಸ್ತಿ, ದುಬಾರಿ ಬಂಗಲೆ ಹೊಂದಿರುವ ಬಿಗ್ ಬಿ ಮತ್ತೆ ಹೊಸ ಬಂಗಲೆಯನ್ನು ಖರೀದಿಸಿ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ:ಕೆಜಿಎಫ್ ತಾತಾ ನಟನೆಯ ‘ನ್ಯಾನೋ ನಾರಾಯಣಪ್ಪ’ ಟ್ರೇಲರ್ ರಿಲೀಸ್

ಬಿಗ್ ಬಿ ಮಂಬೈನಲ್ಲಿ 12 ಸಾವಿರ ಚದರ ಅಡಿ ವಿಸ್ತೀರ್ಣದ ನಾಲ್ಕು ಬಿಚ್‌ಹೆಚ್‌ಕೆ ಅರ್ಪಾರ್ಟ್ಮೆಂಟ್(Apartment) ಕೋಟಿಗಟ್ಟಲೇ ನೀಡಿ ಖರೀದಿಸಿದ್ದಾರೆ. ಇದೀಗ ಅಮಿತಾಭ್ ಕುಟುಂಬ ಜಲ್ಸಾ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿಯೇ ಬಿಗ್ ಬಿ ಅವರದ್ದೇ ಪ್ರತೀಕ್ಷಾ ಬಂಗಲೆ ಕೂಡ ಇದೆ. ಇದೀಗ ಅದೇ ಏರಿಯಾದಲ್ಲಿ ಹೊಸ ಬಂಗಲೆಯನ್ನ ಖರೀದಿಸಿ ಸುದ್ದಿಯಲ್ಲಿದ್ದಾರೆ.

Live Tv

Leave a Reply

Your email address will not be published.

Back to top button