ಬೆಂಗಳೂರು: ಚುನಾವಣೆ ಹೊಸ್ತಿಲಲ್ಲಿ ರಾಜ್ಯಕ್ಕೆ ಬಿಜೆಪಿಯ (BJP) ಎಲೆಕ್ಷನ್ ತಂತ್ರಗಾರ ಅಮಿತ್ ಶಾ (Amit Shah ಅವರು ಮೂರು ದಿನಗಳ ಪ್ರವಾಸಕ್ಕೆ ವೇದಿಕೆ ಸಜ್ಜಾಗಿದೆ.
Advertisement
ಗುರುವಾರ ರಾತ್ರಿ ಬೆಂಗಳೂರಿಗೆ (Bengaluru) ಆಗಮಿಸಲಿರುವ ಅವರು, ನಾಡಿದ್ದು ಮಧ್ಯಾಹ್ನ ಮಂಡ್ಯದಲ್ಲಿ (Mandya) ನಡೆಯಲಿರುವ ಪಕ್ಷದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಹಳೆ ಮೈಸೂರು ಭಾಗದಲ್ಲಿ ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ. ಇದಕ್ಕಾಗಿ ಮಂಡ್ಯ ಸಜ್ಜಾಗುತ್ತಿದೆ. ಆದ್ರೆ, ಅಮಿತ್ ಶಾ ಬರ್ತಿರೋ ಕಾರಣಕ್ಕೆ ಕಳೆದ 52 ದಿನಗಳಿಂದ ಶಾಂತಿಯುತವಾಗಿ ಧರಣಿ ನಡೆಸ್ತಿದ್ದ ರೈತರ ಮೇಲೆ ಪೊಲೀಸರು ದೌರ್ಜನ್ಯ ಎಸಗಿರೋದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ರೈತರು ಧರಣಿ ನಡೆಸ್ತಿದ್ದ ಪೆಂಡಾಲ್ ಧ್ವಂಸ ಮಾಡಿರುವ ಪೊಲೀಸರು, ಮಹಾತ್ಮಗಾಂಧಿ, ಅಂಬೇಡ್ಕರ್, ರೈತ ನಾಯಕರ ಫೋಟೋ ಕೆಳಗೆ ಎಸೆದು ಅಪಮಾನ ಮಾಡಿದ್ದಾರೆ. ಪೊಲೀಸರ ಕೃತ್ಯವನ್ನು ಸೆರೆ ಹಿಡಿಯುತ್ತಿದ್ದ ರೈತರನ್ನು ಬಂಧಿಸಿದ್ದಾರೆ. ಮಂಡ್ಯ ಪೊಲೀಸರ ದೌರ್ಜನ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಮೊದಲ ಬಾರಿಗೆ ಲೈಫ್ ಪಾರ್ಟ್ನರ್ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ
Advertisement
Advertisement
ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕರು, ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಮಧ್ಯೆ, ಅಮಿತ್ ಶಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಾಳೆ ಮತ್ತು ನಾಡಿದ್ದು ಮಂಡ್ಯ ವಿವಿಗೆ ರಜೆ ಘೋಷಿಸಲಾಗಿದೆ. ಅಮಿತ್ ಶಾ ಮಂಡ್ಯ ಪ್ರವಾಸದಿಂದ ಬಿಜೆಪಿ ಶಕ್ತಿ ಹೆಚ್ಚಲಿದೆ ಎಂದು ಕೇಸರಿ ನಾಯಕರು ಹೇಳ್ಕೊಂಡಿದ್ದಾರೆ. ಆದ್ರೆ, ಕಾಂಗ್ರೆಸ್ಸಿಗರು ಮಾತ್ರ, ಅವ್ರೆನಾದ್ರೂ ಮಾಡಿಕೊಳ್ಳಲಿ ಜನ ತೀರ್ಮಾನ ಮಾಡ್ತಾರೆ ಎಂದು ಹೇಳಿ ಸುಮ್ಮನಾಗಿದ್ದಾರೆ. ಇದನ್ನೂ ಓದಿ: ಈಗಿನ ಶಾಸಕರಿಗೆ ಕೋಟಿ ಅಂದ್ರೆ ಕಿಮ್ಮತ್ತಿಲ್ಲ – ಬೊಮ್ಮಾಯಿ