ನವದೆಹಲಿ: ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳು ಹಿಂದಿಗೆ ಪೂರಕವಾಗಿವೆ. ಹಿಂದಿ ಭಾಷೆ ಭಾರತದ ಯಾವುದೇ ಭಾಷೆ ಜತೆ ಸ್ಪರ್ಧೆ ಮಾಡ್ತಿಲ್ಲ. ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ಹಿಂದಿ ಸ್ನೇಹಿತ ಇದ್ದಂತೆ. ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಬೇಕು ಎಂದು ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಅಮಿತ್ ಶಾ ಹೇಳಿದ್ದಾರೆ.
ನವದೆಹಲಿ ವಿಜ್ಞಾನ ಭವನದಲ್ಲಿಂದು ಹಿಂದಿ ದಿವಸ್ ಸಮಾರಂಭ 2021ದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು ಪ್ರಧಾನಿಗಳು ಅಂತರಾಷ್ಟೀಯ ಮಟ್ಟದಲ್ಲಿ ಹಿಂದಿಯಲ್ಲಿ ಮಾತನಾಡಿದರೆ ಮುಜುಗರ ಪಡುವಂತಹ ದಿನಗಳು ಈಗಿಲ್ಲ. ಹಿಂದಿಯಲ್ಲಿ ಮಾತನಾಡುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಷ್ಟು ದಿನ ಅಧಿಕಾರದಲ್ಲಿರ್ತೀವಿ ಅನ್ನೋದು ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲ: ಗಡ್ಕರಿ
Advertisement
हिंदी दिवस समारोह को संबोधित किया और राजभाषा हिंदी में उत्कृष्ट कार्य करने वाले मंत्रालयों, विभागों, उपक्रमों आदि तथा राजभाषा हिंदी में उत्कृष्ट लेख और पत्रिकाएं निकालने वाले संस्थानों को पुरस्कृत भी किया। राजभाषा व सभी भारतीय भाषाओं को सशक्त करना हम सभी की सामूहिक जिम्मेदारी है। pic.twitter.com/J72YWJ7QfH
— Amit Shah (@AmitShah) September 14, 2021
Advertisement
ಜನರು ತಮ್ಮ ಮಾತೃಭಾಷೆಯೊಂದಿಗೆ ಅಧಿಕೃತ ಭಾಷೆಯಾಗಿ ಹಿಂದಿಯನ್ನು ಹಂತ ಹಂತವಾಗಿ ಬಳಸುವ ಪ್ರತಿಜ್ಞೆ ಮಾಡಬೇಕು. ಮಾತೃ ಭಾಷೆ ಹಾಗೂ ಅಧಿಕೃತ ಭಾಷೆಗಳ ಸಮನ್ವಯದಲ್ಲಿ ದೇಶದ ಅಭಿವೃದ್ಧಿ ಅಡಗಿದೆ ಎಂದರು.
Advertisement
हिंदी का किसी भी स्थानीय भाषा से कोई मतभेद या अंतर्विरोध नहीं है। राजभाषा हिंदी भारत की सभी स्थानीय भाषाओं की सखी है और इसका विकास एक दूसरे के परस्पर सहयोग से ही हो सकता है। pic.twitter.com/rovkecq6eE
— Amit Shah (@AmitShah) September 14, 2021
Advertisement
ಭಾವನೆಗಳನ್ನು ವ್ಯಕ್ತಪಡಿಸಲು ಭಾಷೆ ಅತ್ಯಂತ ಶಕ್ತಿಶಾಲಿ ಮಾಧ್ಯಮವಾಗಿದ್ದು, ಸಾಂಸ್ಕತಿಕ ಪ್ರಜ್ಞೆ ಹಾಗೂ ರಾಷ್ಟ್ರೀಯ ಏಕತೆಯ ಮೂಲ ಆಧಾರವಾಗಿರುವ ಹಿಂದಿಯು ಪ್ರಾಚೀನ ನಾಗರೀಕತೆ ಹಾಗೂ ಆಧುನಿಕ ಪ್ರಗತಿಯ ನಡುವೆ ಸೇತುವೆಯಾಗಿದೆ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಸರ್ಕಾರ ಹಿಂದಿ ಹಾಗೂ ಎಲ್ಲ ಭಾರತೀಯ ಭಾಷೆಗಳ ಸಮಾನಂತರ ಅಭಿವೃದ್ದಿಗೆ ನಿರಂತರ ಬದ್ದವಾಗಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ವಿಧಾನಸಭೆಯಲ್ಲಿ ಹಲವು ವಿಧೇಯಕಗಳ ಮಂಡನೆ
जिस प्रकार अलीगढ़ का ताला दुकानों और घरों की सुरक्षा की गारंटी रहा है, उसी प्रकार अलीगढ़ के रक्षा उपकरण अब देश की सुरक्षा को मजबूत करेंगे। pic.twitter.com/YYiA8XQ569
— Narendra Modi (@narendramodi) September 14, 2021
ಭಾರತ ಹಲವು ಭಾಷೆಗಳ ದೇಶವಾಗಿದೆ. ಪ್ರತಿಭಾಷೆಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಆದರೆ ಪ್ರಪಂಚದಲ್ಲಿ ಭಾರತದ ಗುರುತಾಗಬೇಕಿರುವ ಭಾಷೆಯನ್ನು ಹೊಂದಿರುವುದು ಬಹಳ ಮುಖ್ಯ ಎಂದು ಅವರು ಒತ್ತಿ ಹೇಳಿದರು. ಅಲ್ಲದೆ ಒಂದು ಭಾಷೆ ಒಂದು ದೇಶವನ್ನು ಒಂದುಗೂಡಿಸಲು ಸಾಧ್ಯವಾಗುವುದಾದರೆ ಅದು ಹಿಂದಿಗೆ ಮಾತ್ರ ಸಾಧ್ಯ ಎಂದೂ ನುಡಿದರು.