ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಕುರಿತು ರಾಜ್ಯದಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂಬ ಚುನಾವಣಾ ಪೂರ್ವ ಸಮೀಕ್ಷೆಯ ಫಲಿತಾಂಶ ಹೊರಬಿದ್ದ ಹಿನ್ನೆಲೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೊಸ ತಂತ್ರವನ್ನು ರಚಿಸಿದ್ದಾರೆ.
ಹೌದು, ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವ ವೇಳೆ ಅಮಿತ್ ಶಾ ಬಳಗದಲ್ಲಿ ಗುರುತಿಸಿಕೊಂಡಿರುವ 11 ನಂಬಿಕಸ್ಥರು ರಾಜ್ಯಕ್ಕೆ ಬರಲಿದ್ದಾರೆ. 11 ಮಂದಿ ಬಳಗದಲ್ಲಿ ಪ್ರತಿಯೊಬ್ಬರಿಗೂ ಒಂದು ಪ್ರದೇಶ ಜವಾಬ್ದಾರಿಯನ್ನು ನೀಡಲಾಗುತ್ತದೆ. ಇದರ ಜವಾಬ್ದಾರಿ ವಹಿಸುವ ನಾಯಕರು ಆಯಾ ಪ್ರದೇಶಗಳಲ್ಲಿ ಪರಿಣಾಮಕಾರಿ ಪ್ರಚಾರ ತಂತ್ರ ರೂಪಿಸಲಿದ್ದಾರೆ ಎನ್ನಲಾಗಿದೆ. ಶಾ ಸೂಚನೆ ಮೇರೆಗೆ 11 ನಾಯಕರು ಕರ್ನಾಟಕಕ್ಕೆ ಆಗಮಿಸಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ.
Advertisement
Advertisement
ಚುನಾವಣೆ ಮುಗಿಯುವವರೆಗೂ ಅಮಿತ್ ಶಾ ಸೇರಿದಂತೆ 11 ಸದಸ್ಯರು ತಂಡವೂ ಕರ್ನಾಟಕದಲ್ಲೇ ಉಳಿಯಲಿದ್ದು, ಅಂತಿಮ ಹಂತದ ಚುನಾವಣೆ ಕಾರ್ಯತಂತ್ರ ಮತ್ತು ಪ್ರಚಾರ ಹೆಣೆಯಲು ವಿಶೇಷ ಜವಾಬ್ದಾರಿ ನೀಡುವ ಕುರಿತು ಅಮಿತ್ ಶಾ 11 ಸದಸ್ಯರ ಜೊತೆ ಸಭೆ ನಡೆಸಿ ಕ್ಷೇತ್ರವಾರು ಮಾಹಿತಿ ಪಡೆಯಲಿದ್ದಾರೆ.
Advertisement
ಯಾವ ಭಾಗಕ್ಕೆ ಯಾರು ನೇಮಕ?
1. ಮಧ್ಯ ಕರ್ನಾಟಕ ಪ್ರದೇಶಕ್ಕೆ ಬಿಹಾರ ಆರೋಗ್ಯ ಸಚಿವ ಮಂಗಲ ಪಾಂಡ್ಯೆ
2. ಹಳೇ ಮೈಸೂರು ಭಾಗಕ್ಕೆ ದೆಹಲಿ ಬಿಜೆಪಿ ಶಾಸಕ ಸತೀಶ್ ಉಪಾಧ್ಯಾಯ
3. ಮೈಸೂರು ವಿಭಾಗಕ್ಕೆ ಗುಜರಾತ್ ಸಂಸದ ಸಿ.ಆರ್. ಪಾಟೀಲ್
4. ಕರಾವಳಿ ಪ್ರದೇಶಕ್ಕೆ ರಾಜಸ್ಥಾನ ಸಂಸದ ಓಂ ಪ್ರಕಾಶ್ ಮಾಥೂರ್
5. ಕರಾವಳಿ ಪ್ರದೇಶಕ್ಕೆ ಯುಪಿ ಸಚಿವ ಮಹೇಂದ್ರ ಸಿಂಗ್
6. ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್
7. ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಯುಪಿ ಬಿಜೆಪಿ ನಾಯಕ ಸ್ವತಂತ್ರ ದೇವಸಿಂಗ್
8. ಮುಂಬಯಿ ಕರ್ನಾಟಕ ಭಾಗಕ್ಕೆ ಅಮಿತ್ ಶಾ ನಂಬಿಗಸ್ಥ ನಾಯಕ ಭೋಪೇಂದ್ರ ಯಾದವ್9. ಮುಂಬಯಿ ಕರ್ನಾಟಕ ಭಾಗಕ್ಕೆ ಮುಂಬೈ ಬಿಜೆಪಿ ಮಾಜಿ ಅಧ್ಯಕ್ಷ ಚಂದ್ರಕಾಂತ ದಾದಾ ಪಾಟೀಲ್
10. ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗಕ್ಕೆ ಮುಂಬಯಿ ಬಿಜೆಪಿ ಅಧ್ಯಕ್ಷ ಆಶೀಸ್ ಶೆಲ್ಲಾರ್
11. ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗಕ್ಕೆ ಮಹಾರಾಷ್ಟ್ರ ಶಾಸಕ ಗೋಪಾಲ ಶೆಟ್ಟಿ ಇದನ್ನೂ ಓದಿ: ಜನರನ್ನು ಬಿಜೆಪಿಯತ್ತ ಸೆಳೆಯುವುದು ಹೇಗೆ? ಯಾವ ಸಮಯದಲ್ಲಿ ಎಲ್ಲಿ ಪ್ರಚಾರ ಮಾಡಬೇಕು?- ನಾಯಕರಿಗೆ ಚಾಣಕ್ಯನಿಂದ ಸ್ಪೆಷಲ್ ಕ್ಲಾಸ್
Advertisement