ಬೆಂಗಳೂರು: ಪಕ್ಷದಲ್ಲಿ ಟಿಕೆಟ್ (BJP Ticket) ಘೋಷಣೆ ಆದ ಬಳಿಕ ನಿಮ್ಮ ಅಸಮಾಧಾನದ ಹೇಳಿಕೆಗಳು ನಮ್ಮ ಗಮನಕ್ಕೆ ಬಂದಿದೆ. ಎಲ್ಲರ ಹೇಳಿಕೆಗಳನ್ನೂ ಗಮನಿಸಿದ್ದೇವೆ, ಎಲ್ಲಾ ಮಾಹಿತಿ ನಮ್ಮ ಬಳಿಯಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಪಕ್ಷದಲ್ಲಿ ಅಸಮಾಧಾನಿತ ನಾಯಕರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.
Advertisement
ಬೆಂಗಳೂರಿನ ಅರಮನೆ ಮೈದಾನದಲ್ಲಿ (Bengaluru Palace Grounds) ನಡೆದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾಜಿ ಸಚಿವ ಮಾಧುಸ್ವಾಮಿ ಸೇರಿದಂತೆ ಪ್ರಮುಖರು ಗೈರಾಗಿದ್ದರು. ಇದರಿಂದ ಕಾರ್ಯಕ್ರಮದ ಬಳಿಕ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಅಸಮಾಧಾನಿತ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ. ಇದನ್ನೂ ಓದಿ: ಹೊಸ ಮಧ್ಯ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ – ಎಎಪಿ ಸಂಸದ ಸಂಜಯ್ ಸಿಂಗ್‌ಗೆ ಸುಪ್ರೀಂ ಜಾಮೀನು
Advertisement
Advertisement
ಟಿಕೆಟ್ ಘೋಷಣೆ ಆದ ಬಳಿಕ ನಿಮ್ಮ ಅಸಮಾಧಾನದ ಹೇಳಿಕೆಗಳು ನಮ್ಮ ಗಮನಕ್ಕೆ ಬಂದಿದೆ. ಎಲ್ಲರ ಹೇಳಿಕೆಗಳನ್ನೂ ಗಮನಿಸಿದ್ದು ಎಲ್ಲಾ ಮಾಹಿತಿ ನಮ್ಮ ಬಳಿ ಇದೆ. ಟಿಕೆಟ್ ಅನ್ನು ಸಂಸದೀಯ ಮಂಡಳಿ ಸಭೆ ನಿರ್ಧಾರ ಮಾಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಸೇರಿ ಇಲ್ಲವೇ ಬಂಧನಕ್ಕೆ ಸಿದ್ಧರಾಗಿ – ಆಪ್ ಸಚಿವೆ ಅತಿಶಿ ಗಂಭೀರ ಆರೋಪ
Advertisement
ಸಂಸದೀಯ ಮಂಡಳಿಯಲ್ಲಿ ಮೋದಿ ಮತ್ತು ನಾನು ಸೇರಿದಂತೆ ಎಲ್ಲರೂ ಚರ್ಚೆ ಮಾಡಿ ತಿರ್ಮಾನ ಮಾಡಿದ್ದೇವೆ. ಟಿಕೆಟ್ ಘೋಷಣೆಯಾಗಿದೆ ಎಲ್ಲರೂ ಒಪ್ಪಿ ಅಭ್ಯರ್ಥಿ ಪರ ಪ್ರಚಾರ ಶುರು ಮಾಡಿ. ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆ ಮಾಡಬಾರದು. ನಿಮಗೆ ಮುಂದೆ ಒಳ್ಳೆ ಭವಿಷ್ಯ ಇದೆ. ಈಗ ಮೋದಿ ಮತ್ತೊಮ್ಮೆ ಪ್ರಧಾನಿ ಮಾಡುವುದೇ ನಮ್ಮ ಗುರಿಯಾಗಿರಬೇಕು ಎಂದು ಕರೆ ಕೊಟ್ಟಿದ್ದಾರೆ.