ಮಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮುಹೂರ್ತ ನಿಗದಿ ಮಾಡಲು ಮುಂದಾಗಿದ್ದಾರೆ ಎಂಬ ಚರ್ಚೆಗಳು ಆರಂಭವಾಗಿವೆ.
ಗುರುವಾರ ಸಂಘನಿಕೇತನದಲ್ಲಿ ನಡೆಯುತ್ತಿರುವ ಆರ್‍ಎಸ್‍ಎಸ್ ಅಖಿಲ ಭಾರತ ಬೈಠಕ್‍ನಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ. ಈ ವೇಳೆ ದೇಶದ ವಿವಿಧ ಪ್ರದೇಶಗಳಿಂದ 400ಕ್ಕೂ ಹೆಚ್ಚು ಪ್ರತಿನಿಧಿಗಳು ಆಗಮಿಸಿಲಿದ್ದಾರೆ. ಕಾರ್ಯಕ್ರಮದ ಪೂರ್ವ ಸಿದ್ಧತೆ ಉದ್ದೇಶದಿಂದ ಅಮಿತ್ ಶಾ ಮಂಗಳವಾರ ಸಂಜೆಯೇ ನಗರಕ್ಕೆ ಭೇಟಿ ನೀಡಿ ವಾಸ್ತವ್ಯ ಹೂಡಿದ್ದಾರೆ.
Advertisement
ಅಮಿತಾ ಶಾ ನೇತೃತ್ವದ ಬೈಠಕ್‍ನಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಲೋಕಸಭಾ ಚುನಾವಣೆ ಕುರಿತು ಚರ್ಚೆ ನಡೆಯಲಿದೆ. ಹೀಗಾಗಿ ರಾಮ ಮಂದಿರದ ನಿರ್ಮಾಣದ ಕೂಗಿಗೆ ಮಂಗಳೂರಿನಿಂದಲೇ ಮುಹೂರ್ತ ನಿಗದಿ ಮಾಡಲಾಗುತ್ತಿದೆಯಂತೆ. ಮಂಗಳೂರು ಅಷ್ಟೇ ಅಲ್ಲದೆ ವಾರಣಾಸಿಯಲ್ಲಿಯೂ ಏಕಾಲದಲ್ಲಿ ಬೈಠಕ್ ಆಯೋಜಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Advertisement
Advertisement
ಅಖಿಲ ಭಾರತ ಬೈಠಕ್ ನವೆಂಬರ್ 8ರಂದು ಆರಂಭವಾಗಿದ್ದು, 16ರವರೆಗೆ ನಡೆಯಲಿದೆ. ಅತ್ಯಂತ ಗೌಪ್ಯವಾಗಿ ಬೈಠಕ್ ಕಾರ್ಯಕ್ರಮ ಸಂಘ ಪರಿವಾರದ ನಾಯಕರು ನಡೆಸುತ್ತಿದ್ದಾರೆ. ಹೀಗಾಗಿ ಅಮಿತ್ ಶಾ ಅವರು ಗುರುವಾರ ಬೈಠೆಕ್ ಕಾರ್ಯಕ್ರಮದ ಭಾಗವಹಿಸಿ, ಲೋಕಸಭಾ ಚುನಾವಣಾ ಸಿದ್ಧತೆ, ರಾಮ ಮಂದಿರ ನಿರ್ಮಾಣದ ಕುರಿತಾಗಿ ಚರ್ಚೆ ನಡೆಸಲಿದ್ದಾರೆ. ಸಂಘಟನೆಯ ಸ್ಥಳೀಯ ಮುಂಖಡರ ನಿಲುವು ತಿಳಿದು ದೆಹಲಿಗೆ ಮರಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews