KarnatakaLatestLeading NewsMain Post

ಮೇ 3ಕ್ಕೆ ಕೇಂದ್ರ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ – ಕಾರ್ಯಕ್ರಮಗಳ ವಿವರ ಹೀಗಿದೆ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮೇ 3 ರಂದು ಕರ್ನಾಟಕ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಅಮಿತ್‌ ಶಾ ಅವರ ಕಾರ್ಯಕ್ರಮಗಳ ವಿವರ ಪಟ್ಟಿ ಹೀಗಿದೆ.

ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಶಾ ಮತ್ತೆ ರಾಜ್ಯ ಪ್ರವಾಸ ಮಾಡಲಿದ್ದಾರೆ. ಈ ಬಾರಿ ಅಮಿತ್ ಶಾ ಒಂದು ದಿನದ ರಾಜ್ಯ ಭೇಟಿಗಾಗಿ ಆಗಮಿಸುತ್ತಿದ್ದಾರೆ. ಕಳೆದ ಏಪ್ರಿಲ್ 1 ರಂದು ರಾಜ್ಯಕ್ಕೆ ಅಮಿತ್ ಶಾ ಆಗಮಿಸಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಮತ್ತೆ ಮೇ 3 ರಂದು ರಾಜ್ಯಕ್ಕೆ ಬರುತ್ತಿರುವ ಅಮಿತ್ ಶಾ ಸರ್ಕಾರ ಮತ್ತು ಪಕ್ಷದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಅಮಿತ್ ಶಾ, ಬೊಮ್ಮಾಯಿ ಜೊತೆ ಸಂಪುಟ ಪುನಾರಚನೆ, ಸಮಾಲೋಚನೆ

ಕಾರ್ಯಕ್ರಮದ ವಿವರ ಹೀಗಿದೆ:
* ಮೇ 3 ರ ಬೆಳಗ್ಗೆ 10ಕ್ಕೆ ಚಾಲುಕ್ಯ ವೃತ್ತದಲ್ಲಿರುವ ಬಸವಣ್ಣನ ಪ್ರತಿಮೆಗೆ ಮಾಲಾರ್ಪಣೆ

* ಬೆಳಗ್ಗೆ 10.30 ಕ್ಕೆ ಆರ್‌ಬಿಐ ಎದುರು ನೃಪತುಂಗ ವಿವಿಗೆ ಗುದ್ದಲಿಪೂಜೆ

* ಬಳ್ಳಾರಿಯಲ್ಲಿ ಫೊರೆನ್ಸಿಕ್ ಲ್ಯಾಬ್‌ನ ವರ್ಚುವಲ್ ಉದ್ಘಾಟನೆ

* ಮಧ್ಯಾಹ್ನ 12 ಕ್ಕೆ ಯಲಹಂಕದಲ್ಲಿ‌ ಕೇಂದ್ರದ ಗೃಹ ಸಚಿವಾಲಯದ ಡಿಆರ್‌ಸಿ ಕೇಂದ್ರದ ಕಾರ್ಯಕ್ರಮದಲ್ಲಿ ಭಾಗಿ

* ಮಧ್ಯಾಹ್ನ 2ಕ್ಕೆ ಸಿಎಂ ಅವರ ಸರ್ಕಾರಿ‌ ನಿವಾಸದಲ್ಲಿ ಅಮಿತ್ ಶಾ ಅವರಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ

* ಸಿಎಂ ಜೊತೆ ಅಮಿತ್ ಶಾ ಮಧ್ಯಾಹ್ನದ ಭೋಜನ

* ಸಂಜೆ 4 ಗಂಟೆಗೆ ಬಿಜೆಪಿ ಕಚೇರಿಗೆ ಭೇಟಿ

* ಸಂಜೆ 5.30ಕ್ಕೆ ಖೇಲೋ‌ ಇಂಡಿಯಾ ಸಮಾರೋಪ ಸಮಾರಂಭದಲ್ಲಿ ಭಾಗಿ

* ರಾತ್ರಿ 8.15 ಕ್ಕೆ ಎಚ್ಎಎಲ್ ಮೂಲಕ ವಿಶೇಷ ವಿಮಾನದಲ್ಲಿ ದೆಹಲಿಗೆ ವಾಪಸ್

Leave a Reply

Your email address will not be published.

Back to top button