ಬೆಂಗಳೂರು: ಹಳೆ ಮೈಸೂರು ಭಾಗದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಹೇಗಾದ್ರೂ ಮಾಡಿ ಪ್ರಾಬಲ್ಯ ಮೆರೆಯಬೇಕು ಎಂದು ಕೇಸರಿ ಪಡೆ ಪ್ಲಾನ್ ಮೇಲೆ ಪ್ಲಾನ್ ಮಾಡ್ತಿದೆ. ಇದ್ರ ಭಾಗವಾಗಿಯೇ ಇಂದು ಬೆಂಗಳೂರಿಗೆ ಚುನಾವಣಾ ಚಾಣಕ್ಯ ಅಮಿತ್ ಶಾ (Amit Shah) ಬಂದಿಳಿದಿದ್ದಾರೆ.
ರಾತ್ರಿ 11 ಗಂಟೆ ಸುಮಾರಿಗೆ ಅಮಿತ್ ಶಾ ಬೆಂಗಳೂರು ತಲುಪಿದರು. ಯಲಹಂಕ ವಾಯುನೆಲೆಗೆ ಬಂದಿಳಿದ ಅಮಿತ್ ಶಾರನ್ನು ಸಿಎಂ ಬೊಮ್ಮಾಯಿ ಬರಮಾಡಿಕೊಂಡರು. ನಾಳೆ ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ (Manday) ಅಮಿತ್ ಶಾ ಚುನಾವಣೆ ರಣಕಹಳೆ ಮೊಳಗಿಸಲಿದ್ದಾರೆ. ಅತ್ತ, ಅಮಿತ್ ಶಾ ಸ್ವಾಗತಕ್ಕಾಗಿ ಮಂಡ್ಯ ನಗರಿ ಸಂಪೂರ್ಣ ಕೇಸರಿಮಯವಾಗಿದೆ. ಎಲ್ಲಿ ನೋಡಿದ್ರೂ ಫ್ಲೆಕ್ಸ್ ಬ್ಯಾನರ್ ಕಾಣುತ್ತಿವೆ. ತರಾತುರಿಯಲ್ಲಿ ರಸ್ತೆಗಳು ಡಾಂಬರು ಭಾಗ್ಯ ಕಾಣುತ್ತಿವೆ. ಸಮಾವೇಶ ಸ್ಥಳದಲ್ಲಿ ಸಕಲ ತಯಾರಿಗಳು ಮುಗಿದಿವೆ. ನಾಳೆಯ ಸಮಾವೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದು, ಅಮಿತ್ ಶಾ ಭಾಷಣ ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ಅಸೆಂಬ್ಲಿ ಎಲೆಕ್ಷನ್ ಮೇಲೆ ಬಿಜೆಪಿ ಚಾಣಾಕ್ಯನ ಕಣ್ಣು- ಇಂದಿನಿಂದ ಅಮಿತ್ ಶಾ ರಾಜ್ಯ ಪ್ರವಾಸ
ಮಂಡ್ಯದಲ್ಲಿ (Mandya) ರೈತ ಪ್ರತಿಭಟನೆ ಮುಂದುವರಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಮಿತ್ ಶಾ ಕಾರ್ಯಕ್ರಮದಲ್ಲಿ ಅಲ್ಪ ಬದಲಾವಣೆ ಮಾಡಲಾಗಿದೆ. ಗೆಜ್ಜಲಗೆರೆಯಿಂದ ರಸ್ತೆ ಮಾರ್ಗದ ಬದಲು ಹೆಲಿಕಾಪ್ಟರ್ ಮೂಲಕವೇ ಮಂಡ್ಯಗೆ ಅಮಿತ್ ಶಾ ತೆರಳಲಿದ್ದಾರೆ. ಇದಕ್ಕಾಗಿ ಮಂಡ್ಯದ ಪಿಇಟಿ ಮೈದಾನದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ತಮ್ಮನ್ನು ಅಮಿತ್ ಶಾ ಭೇಟಿ ಮಾಡ್ಲೇಬೇಕು ಇಲ್ಲ ಅಂದ್ರೆ ಗೋಬ್ಯಾಕ್ ಚಳವಳಿ ನಡೆಸೋದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮೀಸಲಾತಿ ಕೇವಲ ಶಿಕ್ಷಣ ಮತ್ತು ಉದ್ಯೋಗಕ್ಕೆ ಮಾತ್ರ – ರಾಜಕೀಯವಾಗಿ ಈ ಮೀಸಲಾತಿ ಅನ್ವಯ ಆಗಲ್ಲ!
Live Tv
[brid partner=56869869 player=32851 video=960834 autoplay=true]