ನವದೆಹಲಿ: ದಿವಂಗತ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು 14 ವರ್ಷಗಳ ಕಾಲ ವಾಸವಿದ್ದ ದೆಹಲಿಯ ಕೃಷ್ಣ ಮೆನನ್ ರಸ್ತೆಯಲ್ಲಿರುವ ಬಂಗಲೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನೀಡಲಾಗಿದೆ.
ವಾಜಪೇಯಿ ಅವರು ಈ ಬಂಗಲೆಯಲ್ಲಿ 2004ರ ವರೆಗೆ ಸುಮಾರು 14 ವರ್ಷ ತನ್ನ ಕುಟುಂಬದ ಜೊತೆ ವಾಸವಿದ್ದರು. 2018 ಆಗಸ್ಟ್ ತಿಂಗಳಿನಲ್ಲಿ ವಾಜಪೇಯಿ ಅವರ ನಿಧನದ ನಂತರ ಅವರ ಕುಟುಂಬ ನವೆಂಬರ್‍ನಲ್ಲಿ ಮನೆಯನ್ನು ಖಾಲಿ ಮಾಡಿತ್ತು.
Advertisement
ಬಿಜೆಪಿಯ ಅಧ್ಯಕ್ಷರಾಗಿರುವ ಅಮಿತ್ ಶಾ ಅವರು ಇತ್ತೀಚಿಗೆ ಈ ಬಂಗಲೆಗೆ ಭೇಟಿ ನೀಡಿ ಕೆಲವು ಬದಲಾವಣೆ ಮಾಡುವಂತೆ ಸಲಹೆ ನೀಡಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.
Advertisement
Advertisement
ಪ್ರಥಮ ಬಾರಿಗೆ ಕೇಂದ್ರ ಗೃಹ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಅಮಿತ್ ಶಾ ಅವರು ಪ್ರಸ್ತುತ 11 ಅಕ್ಬರ್ ರಸ್ತೆಯಲ್ಲಿರುವ ಮನೆಯಲ್ಲಿ ವಾಸವಾಗಿದ್ದಾರೆ. ಇನ್ನು ಒಂದು ಅಥವಾ ಎರಡು ತಿಂಗಳಲ್ಲಿ ಬಂಗಲೆಯ ನವೀಕರಣದ ಕಾರ್ಯ ಮುಗಿಯಲಿದ್ದು ನಂತರ ಅಟಲ್ ಬಂಗಲೆಗೆ ಬರಲಿದ್ದಾರೆ.
Advertisement
2014ರಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೆಹಲಿಯಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ವಾಸವಿದ್ದ ನಾಯಕರು ಮರಣದ ನಂತರ ಆ ಮನೆಯನ್ನು ಸ್ಮಾರಕ ಮಾಡದೇ ಇರುವ ನಿರ್ಧಾರವನ್ನು ಕೈಗೊಂಡಿತ್ತು. ಈ ಕಾರಣಕ್ಕಾಗಿ ಸರ್ಕಾರ ಸ್ಮøತಿ ಸ್ಥಳದ ಸಮೀಪ ವಾಜಪೇಯೆ ಅವರ ನೆನಪಿಗಾಗಿ ‘ಸದೈವ್ ಅಟಲ್’ ಎಂಬ ಹೆಸರಿನಲ್ಲಿ ಸಮಾಧಿ ನಿರ್ಮಾಣ ಮಾಡಲಾಗಿದೆ.
ಅಮಿತ್ ಶಾ ಸದ್ಯ ಇರುವ ಮನೆ 2.3 ಎಕರೆ ವಿಸ್ತೀರ್ಣದಲ್ಲಿದೆ. 2004ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾದ ಬಳಿಕ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಕೊನೆಯುಸಿರೆಳೆಯುವವರೆಗೂ ಕೃಷ್ಣ ಮೆನನ್ ರಸ್ತೆಯಲ್ಲಿರುವ 3 ಎಕರೆ ವಿಸ್ತೀರ್ಣದಲ್ಲಿದ್ದ ಬಂಗಲೆಯಲ್ಲಿ ವಾಸವಾಗಿದ್ದರು. ಈ ನಿವಾಸದಲ್ಲಿ 7 ಮಲಗುವ ಕೊಠಡಿಗಳಿದ್ದು 2 ಡ್ರಾಯಿಂಗ್ ರೂಂಗಳಿವೆ. ಗೃಹ ಸಚಿವರಾಗಿರುವ ಅಮಿತ್ ಶಾ ಅವರಿಗೆ ಅವರಿಗೆ ಹೆಚ್ಚಿನ ಭದ್ರತೆಯ ಅಗತ್ಯ ನೀಡಬೇಕಾಗಿರುವ ಕಾರಣ ವಾಜಪೇಯಿ ಅವರಿದ್ದ ಮನೆಗೆ ಸ್ಥಳಾಂತರಿಸಲು ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ನಿರ್ಧರಿಸಿದೆ.
ವಾಜಪೇಯಿ ಅವರಿಗಿಂತ ಮೊದಲು ಈ ಮನೆಯಲ್ಲಿ ಡಿಎಂಕೆಯ ಮುರಸೋಳಿ ಮಾರನ್ ವಾಸವಾಗಿದ್ದರು. ಆಗ ಇದು 8, ಕೃಷ್ಣ ಮೆನನ್ ಮಾರ್ಗ ಎಂಬ ವಿಳಾಸ ಹೊಂದಿತ್ತು. ಆದರೆ, ವಾಜಪೇಯಿ ಅವರು ಈ ಮನೆಗೆ ಸ್ಥಳಾಂತರಗೊಂಡ ನಂತರದಲ್ಲಿ ಈ ಮನೆಯ ವಿಳಾಸವನ್ನು 6ಎ, ಕೃಷ್ಣ ಮೆನನ್ ಎಂದು ಬದಲಿಸಲಾಗಿತ್ತು.