ಬಿಜೆಪಿಯ ಭೀಷ್ಮ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ!

Public TV
1 Min Read
LK ADVANI 1

– 5 ವರ್ಷದಲ್ಲಿ ಅಡ್ವಾಣಿ ಸಂಸತಿನಲ್ಲಿ ಆಡಿದ್ದು 365 ಪದ

ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಎಲ್ ಅಡ್ವಾಣಿ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗುಜರಾತಿನ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿಲ್ಲ. ಅವರ ಕ್ಷೇತ್ರದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕಣಕ್ಕೆ ಇಳಿಯುತ್ತಿದ್ದಾರೆ. ಇದರೊಂದಿಗೆ ರಾಜಕೀಯ ಭೀಷ್ಮ ಎಂದೇ ಕರೆಸಿಕೊಂಡಿದ್ದ ಅಡ್ವಾಣಿ ಅವರ ರಾಜಕೀಯ ಜೀವನ ಬಹುತೇಕ ಅಂತ್ಯಗೊಂಡಿದೆ.

91 ವರ್ಷದ ಅಡ್ವಾಣಿ ತಮ್ಮ ರಾಜಕೀಯ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿರುವ ನಾಯಕರಾಗಿದ್ದು, ಕಳೆದ 5 ಬಾರಿ ಗಾಂಧಿನಗರದಿಂದ ಸ್ಪರ್ಧೆ ಮಾಡಿ ಸಂಸತ್ ಪ್ರವೇಶಿಸಿದ್ದರು.

LK Advani Anand Kumar.jpg.image .784.410

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ಬಳಿಕ ಅಡ್ವಾಣಿ ಅವರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಮಾತು ಕೇಳಿ ಬಂದಿತ್ತು. ಕಳೆದ ಐದು ವರ್ಷದ ಸಂಸತ್ ಸದಸ್ಯರಾಗಿ ಅಡ್ವಾಣಿ ಅವರು ಶೇ.92 ರಷ್ಟು ಹಾಜರಾತಿಯನ್ನು ಹೊಂದಿದ್ದು, ಆದ್ರೆ ಕೇವಲ 365 ಪದಗಳನ್ನು ಮಾತ್ರವೇ ಸಂಸತ್‍ನಲ್ಲಿ ಮಾತನಾಡಿದ್ದಾರೆ. ವಯಸ್ಸಿನ ಆಧಾರದಲ್ಲಿ ಬಿಜೆಪಿ ಟಿಕೆಟ್ ನೀಡುತ್ತಿಲ್ಲವೇ ಅಥವಾ ಅಡ್ವಾಣಿ ಅವರೇ ನಾನು ಸ್ಪರ್ಧಿಸುತ್ತಿಲ್ಲ ಎಂದು ಹೇಳಿದ್ದಾರೋ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

1991ರಿಂದಲೂ ಗುಜರಾತ್‍ನ ಗಾಂಧಿನಗರದಿಂದ ಅಡ್ವಾಣಿ ಸತತ 5 ಬಾರಿ ಆಯ್ಕೆಯಾಗಿದ್ದರು. ಅಲ್ಲದೇ 2014ರ ವರೆಗೂ ಕೂಡ ಅಧಿಕ ಮತಗಳಿಂದ ಜಯಗಳಿಸಿದ ಸ್ಥಾನದಲ್ಲಿ ಅಡ್ವಾಣಿ ಮೊದಲಿಗರು. ವಿಶೇಷ ಏನೆಂದರೆ 1998ರಲ್ಲಿ 2.77 ಲಕ್ಷ ಮತಗಳಲ್ಲಿ ಗೆಲುವು ಪಡೆದಿದ್ದರು. ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ 7,73,539 ಮತ ಪಡೆದಿದ್ದರು. ಅಲ್ಲದೇ ಎದುರಾಳಿ ಕಾಂಗ್ರೆಸ್ ಪಕ್ಷದ ಈಶ್ವರಭಾಯಿ ಪಟೇಲ್ ಕೇವಲ 2,90,419 ಮತಗಳನ್ನು ಮಾತ್ರ ಪಡೆದಿದ್ದರು. ಉಳಿದಂತೆ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಅಮಿತ್ ಶಾ ಗಾಂಧೀನಗರ ಲೋಕಸಭಾ ಕ್ಷೇತ್ರದ ಸರ್ಕೇಜ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿದ್ದರು.

shah modi

Share This Article
Leave a Comment

Leave a Reply

Your email address will not be published. Required fields are marked *