– ಪರೋಕ್ಷವಾಗಿ ದಿದಿಗೆ ಕುಟುಕಿದ ಚಾಣಾಕ್ಯ
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ರಥಯಾತ್ರೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ರಥಯಾತ್ರೆಯನ್ನು ಮಾಡಿಯೇ ತೀರುತ್ತೇವೆಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಶುಕ್ರವಾರದ ಬಿಜೆಪಿ ರಥಯಾತ್ರೆಗೆ ಕೋಲ್ಕತ್ತ ಹೈಕೋರ್ಟ್ ಅನುಮತಿ ನಿರಾಕರಿಸಿದ್ದರ ಕುರಿತು ಪ್ರತಿಕ್ರಿಯಿಸಿರುವ ಅವರು, ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಖಂಡಿತವಾಗಿಯೂ ರಥಯಾತ್ರೆ ನಡೆಸಲಿದೆ. ಈ ನಮ್ಮ ರಥಯಾತ್ರೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳ ರಾಜ್ಯದಲ್ಲಿ ಬದಲಾವಣೆ ತರುವಲ್ಲಿ ಬಿಜೆಪಿ ಸಿದ್ಧವಾಗಿದೆ. ರಥಯಾತ್ರೆಯನ್ನು ವಾಪಸ್ ಪಡೆದಿಲ್ಲ. ಆದರೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಬಂಗಾಳದಲ್ಲಿ ಭಯೋತ್ಪಾದನೆಯ ಆಳ್ವಿಕೆ ಸೃಷ್ಟಿಯಾಗಿದೆ. ಮಮತಾ ಬ್ಯಾನರ್ಜಿ ಪ್ರಜಾಪ್ರಭುತ್ವವನ್ನು ಚಲಾಯಿಸುತ್ತಿದ್ದಾರೆ. ಎನ್ನುವ ಮೂಲಕ ದೀದಿಗೆ ತಿರುಗೇಟು ನೀಡಿದ್ದಾರೆ.
Advertisement
BJP President Amit Shah: We will do everything legally and we will conduct three rallies.The rallies have not been cancelled but postponed. Yatra as scheduled will go to every part of West Bengal.I will go to West Bengal tomorrow. pic.twitter.com/SRZ9pNworg
— ANI (@ANI) December 7, 2018
Advertisement
ರಥಯಾತ್ರೆಗೆ ಅನುಮತಿ ನಿರಾಕರಿಸಿದ್ದೇಕೆ?
ಪಶ್ಚಿಮ ಬಂಗಾಳದ ಕೂಚ್‍ಬೆಹರ್ ಕೋಮುಗಲಭೆಯ ಪ್ರದೇಶವಾಗಿದೆ. ಒಂದು ವೇಳೆ ಬಿಜೆಪಿ ಈ ಪ್ರದೇಶದಲ್ಲಿ ರಥಯಾತ್ರೆ ಕೈಗೊಂಡರೆ, ಕೋಮುಗಲಭೆ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಸರ್ಕಾರ ಯಾತ್ರೆಗೆ ತಡೆ ಕೋರುವಂತೆ ಕೋಲ್ಕತ್ತ ಹೈಕೋರ್ಟ್ ಮೊರೆ ಹೋಗಿತ್ತು. ಗುರುವಾರ ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, ಕೋಮುಗಲಭೆ ಉಂಟಾಗುವ ಭೀತಿಯಿಂದ ಶುಕ್ರವಾರ ನಡೆಯಬೇಕಿದ್ದ ಬಿಜೆಪಿ ರಥಯಾತ್ರೆಗೆ ಅನುಮತಿಯನ್ನು ನಿರಾಕರಿಸಿತ್ತು.
Advertisement
Advertisement
ಮುಂಬರುವ ಲೋಕಸಭಾ ಚುನಾವಣೆಗಾಗಿ ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ರಥಯಾತ್ರೆ ನಡೆಸಲು ತೀರ್ಮಾನಿಸಿತ್ತು. ಒಟ್ಟು 42 ಕ್ಷೇತ್ರಗಳ ಪೈಕಿ 2014ರ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದ್ದು, ಈ ಬಾರಿ ಕನಿಷ್ಟ 22 ರಲ್ಲಿ ಜಯಗಳಿಸುವ ಗುರಿಯನ್ನು ಅಮಿತ್ ಶಾ ಹಾಕಿದ್ದಾರೆ.
#WATCH: BJP President Amit Shah addresses media in Delhi https://t.co/fRH0o1wPQO
— ANI (@ANI) December 7, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv