ನವದೆಹಲಿ: ನೆಹರೂ ಅವರ ಪ್ರಮಾದವೇ ಕಾಶ್ಮೀರ-ಪಿಓಕೆ ಸಮಸ್ಯೆಯ ಮೂಲ ಬೇರು ಅಂತ ಲೋಕಸಭೆ (Loksabha), ರಾಜ್ಯಸಭೆಯಲ್ಲಿ (Rajya Sabha) ಕೇಂದ್ರ ಸಚಿವ ಅಮಿತ್ ಶಾ ಗುಡುಗಿದ್ದರು. ಅಮಿತ್ ಶಾ ಹೇಳಿಕೆಗೆ ರಾಹುಲ್ ಗಾಂಧಿ (Rahul Gandhi) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಂಸತ್ ಭವನದ ಬಳಿ ವಾಗ್ದಾಳಿ ನಡೆಸಿದ ಅವರು, ಪಂಡಿತ್ ನೆಹರೂ ಅವರು ಭಾರತಕ್ಕಾಗಿ ಪ್ರಾಣ ಅರ್ಪಿಸಿದ್ದಾರೆ. ಹಲವಾರು ವರ್ಷಗಳ ಕಾಲ ಜೈಲಿನಲ್ಲಿದ್ದರು. ಅಮಿತ್ ಶಾಗೆ (Amitshah) ಇತಿಹಾಸದ ಅರಿವೇ ಇಲ್ಲ. ಅವರು ಇತಿಹಾಸ ತಿಳಿದುಕೊಳ್ತಾರೆ ಅಂತ ನಾನು ನಿರೀಕ್ಷಿಸಲ್ಲ. ಯಾಕೆಂದರೆ ಅಮಿತ್ ಶಾಗೆ ಇತಿಹಾಸವನ್ನು ತಿರುಚೋದೇ ಅವರ ಕಾಯಕ ಎಂದು ಕಿಡಿಕಾರಿದ್ದಾರೆ.
Advertisement
Advertisement
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕೂಡ ಅಮಿತ್ ಶಾ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ. ಅಮಿತ್ ಶಾ ಅವರಷ್ಟು ನೆಹರೂ ಅವರು ಜ್ಞಾನಿಯಾಗಿರಲಿಲ್ಲ ಅನ್ನಿಸುತ್ತೆ. ನೀವು ಏನೇ ಮಾಡಿದರೂ ಅದು ಸರಿಯೇ ಬಿಡಿ. ಹಾಗಾದರೆ ನೀವು ಪಿಓಕೆಯನ್ನು ಯಾವಾಗ ವಾಪಸ್ ತಗೋತೀರಾ..? ಅಂತ ಅಧೀರ್ ರಂಜನ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: Article 370 Verdict – ಇಂದಿನ ತೀರ್ಪು ಕೇವಲ ತೀರ್ಪಲ್ಲ, ಭರವಸೆಯ ದಾರಿದೀಪ: ಮೋದಿ ಸಂತಸ
Advertisement
ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಕೂಡ ಅಮಿತ್ ಶಾ ಟೀಕೆಗೆ ಖಂಡಿಸಿದ್ದಾರೆ. ಜಮ್ಮು-ಕಾಶ್ಮೀರ ನರಕಕ್ಕೆ ಹೋಗಲಿ, ಬಿಜೆಪಿಗರು ಜನತೆಗೆ ಮೋಸ ಮಾಡಿದರು. ನೆಹರೂ ಅಂದರೆ ಯಾಕೆ ಬಿಜೆಪಿಗರು ಇಷ್ಟೊಂದು ವಿಷಕಾರುತ್ತಿದ್ದಾರೆ ಅಂತ ನನಗೆ ಗೊತ್ತಾಗ್ತಿಲ್ಲ. ನೆಹರೂ ಒಬ್ಬರೇ ಕಾರಣ ಅಲ್ಲ. ಆರ್ಟಿಕಲ್ 370 ಜಾರಿಗೆ ತರುವಾಗ ಸರ್ದಾರ್ ಪಟೇಲ್ ಇಲ್ಲಿದ್ದರು. ನೆಹರೂ ಅಮೆರಿಕದಲ್ಲಿದ್ದರು ಅಂದಿದ್ದಾರೆ.