ಲಕ್ನೋ: ಎಸ್‌ಪಿ ಸರ್ಕಾರ ಇದ್ದಾಗ ಕೇವಲ ಒಂದು ಜಾತಿಯ ಅಭಿವೃದ್ಧಿಗಾಗಿ ಕೆಲಸ ಮಾಡಿತು. ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಜಾತಿಗಳ ಒಳಿತಿಗಾಗಿ ಕೆಲಸ ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದರು.
ಬರೀಲಿ ಜಿಲ್ಲೆಯ ಓಲ್ನಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಇದಕ್ಕೂ ಮೊದಲು ರಚನೆ ಆಗಿದ್ದ ಸರ್ಕಾರಗಳು ಜಾತಿವಾದಿ ಸರ್ಕಾರ ಗಳಾಗಿದ್ದವು . ಬಹುಜನ ಸಮಾಜ ಪಕ್ಷ ಸರ್ಕಾರ ರಚಿಸಿದ್ದಾಗ ಕೆಲವೇ ಜಾತಿಗಳಿಗಾಗಿ ಕೆಲಸ ಮಾಡಿತು. ಮೋದಿ ಅವರು ಎಲ್ಲರ ಜೊತೆ, ಎಲ್ಲರ ವಿಕಾಸ (ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್) ತತ್ವದಡಿ ಕೆಲಸ ಮಾಡಿದರು ಎಂದರು. ಇದನ್ನೂ ಓದಿ: 6 ವರ್ಷಗಳ ಕಾಲ ಕುತ್ತಿಗೆಯಲ್ಲಿ ಟೈರ್ ಸಿಕ್ಕಿಸಿಕೊಂಡಿದ್ದ ಮೊಸಳೆಗೆ ಕೊನೆಗೂ ಸಿಕ್ತು ಮುಕ್ತಿ!
ಉತ್ತರ ಪ್ರದೇಶದಲ್ಲಿ ಗೂಂಡಾ ರಾಜ್ಯ ಕೊನೆಗಾಣಿಸುವುದಾಗಿ 2017ರಲ್ಲಿ ಬಿಜೆಪಿಯ ಅಧ್ಯಕ್ಷ ಆಗಿದ್ದ ಸಮಯದಲ್ಲಿ ಭರವಸೆ ನೀಡಿದ್ದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಆ ಭರವಸೆಗಳನ್ನು ಈಡೇರಿಸಿದ್ದಾರೆ. ಮಾಫಿಯಾಗಳು ರಾಜ್ಯದಲ್ಲಿ ಕಾಣಿಸುತ್ತಿಲ್ಲ. ಆಜಂ ಖಾನ್, ಅತಿಕ್ ಅಹ್ಮದ್ ಮತ್ತು ಮುಕ್ತಾರ್ ಅನ್ಸಾರಿ ಈಗ ಜೈಲಿನಲ್ಲಿ ಇದ್ದಾರೆ ಎಂದು ಅವರು ಹೇಳಿದರು.