ಚಿಕ್ಕೋಡಿ: ಕಾಂಗ್ರೆಸ್ (Congress) ನೆರವಿನಿಂದ ಅಧಿಕಾರ ಮಾಡಿದ ಜೆಡಿಎಸ್ (JDS) ಪಕ್ಷವನ್ನು ದೂರವಿಡಬೇಕಿದೆ ಎಂದು ವಿರೋಧ ಪಕ್ಷಗಳ ವಿರುದ್ಧ ಅಮಿತ್ ಶಾ (Amit Shah) ಕಿಡಿಕಾರಿದರು.
ಬೆಳಗಾವಿ (Belagavi) ಜಿಲ್ಲೆಯಲ್ಲಿ ಬಿಜೆಪಿ (BJP) ಸಂಘಟನೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಜನ ಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ದೆಹಲಿಯ (NewDelhi) ಅನೇಕರ ಎಟಿಎಂ ಆಗಿ ಕೆಲಸ ಮಾಡಿದೆ. ಜೆಡಿಎಸ್‌ಗೆ (JDS) ಹಾಕುವ ಮತ ಕಾಂಗ್ರೆಸ್ ಹಾಕಿದ ಹಾಗೆ ಆಗಿದೆ. ಅನೇಕ ಭರವಸೆಯನ್ನು ಕಾಂಗ್ರೆಸ್, ಜೆಡಿಎಸ್ ಕೊಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Advertisement
ಕಾಂಗ್ರೆಸ್ ಪಕ್ಷ ಮಹಾದಾಯಿಗೆ ಸಂಬಂಧಿಸಿದಂತೆ ಗೋವಾ ಮತ್ತು ಕರ್ನಾಟಕದ ನಡುವಣ ವಿವಾದವನ್ನು ಹಾಗೆಯೇ ಉಳಿಸಿತ್ತು. ಆದರೆ ಬಿಜೆಪಿ ಗೋವಾ ಮತ್ತು ಕರ್ನಾಟಕದ ಎರಡೂ ರಾಜ್ಯಗಳೊಂದಿಗೆ ಮಾತುಕತೆ ನಡೆಸಿ ವಿವಾದವನ್ನು ಪರಿಹರಿಸುವ ಕಾರ್ಯ ಮಾಡಿತು. pic.twitter.com/Wc0CgVVZRF
— Amit Shah (@AmitShah) January 28, 2023
Advertisement
ವಿಧಾನಸಭೆಯಲ್ಲಿ ಸಾವರ್ಕರ್ ಫೋಟೋ ಹಾಕಿದ ಸಿಎಂ ಬೊಮ್ಮಾಯಿಗೆ (Basavaraj Bommai) ಅಭಿನಂದನೆ ಸಲ್ಲಿಸಿದರು. ಕರ್ನಾಟಕದ (Karnataka) ಜನ ಏಪ್ರಿಲ್, ಮೇನಲ್ಲಿ ರಾಜ್ಯದ ಚುಕ್ಕಾಣಿ ಯಾರ ಕೈಯಲ್ಲಿ ಇರಬೇಕು ಎಂದು ತೀರ್ಮಾನ ಮಾಡಬೇಕಿದೆ ಎಂದ ಅವರು, ದೇಶದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಮೋದಿ ಸರ್ಕಾರ ಯೋಜನೆ ಕೊಂಡಾಡಿದರು.
Advertisement
Advertisement
ಕಾಂಗ್ರೆಸ್, ಜೆಡಿಎಸ್ ಬಡವರಿಗಾಗಿ ಏನು ಮಾಡಿದೆ ಎಂದು ಪ್ರಶ್ನೆ ಮಾಡಿದ ಅವರು, 2 ಡೋಸ್ ಲಸಿಕೆಯನ್ನು ಉಚಿತವಾಗಿ ಬಿಜೆಪಿ ಸರ್ಕಾರ ನೀಡಿದೆ. ಕೊರೊನಾದಿಂದ ದೇಶವನ್ನು ಸುರಕ್ಷಿತಗೊಳಿಸುವ ಕೆಲಸ ಮಾಡಿದೆ. ದಲಿತ ಮಗನನ್ನು ರಾಷ್ಟ್ರಪತಿ ಮಾಡಿದ್ವಿ. ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಬಿಬಿಸಿ ಸಾಕ್ಷ್ಯಚಿತ್ರದ ಹಿಂದೆ ಅಂತಾರಾಷ್ಟ್ರೀಯ ಪಿತೂರಿ – ಕಾಂಗ್ರೆಸ್‌ನವರು ಸಹ ಶಾಮೀಲು: ಸಿ.ಟಿ ರವಿ ಆರೋಪ
ಕಳಸಾ-ಬಂಡೂರಿ ಯೋಜನೆಗೆ ಸಿಎಂ ದೊಡ್ಡ ಕೆಲಸ ಮಾಡಿದ್ದಾರೆ. ಸೋನಿಯಾ ಗಾಂಧಿ ಹನಿ ನೀರು ಕರ್ನಾಟಕಕ್ಕೆ ಕೊಡಲ್ಲ ಎಂದಿದ್ದರು. ಆದರೆ, ಕೇಂದ್ರ ಸರ್ಕಾರ 2 ರಾಜ್ಯಗಳ ಜಗಳ ಇತ್ಯರ್ಥ ಮಾಡಿದೆ ಎಂದ ಅವರು. ಮೋದಿ ಮೇಲೆ ಭರವಸೆ ಇಟ್ಟು, ಬೆಳಗಾವಿ ಜಿಲ್ಲೆಯಲ್ಲಿ 16 ಸ್ಥಾನ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: Sukhoi, Mirage Fighter Jets Crash: ವಿಮಾನ ಅಪಘಾತದಲ್ಲಿ ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹುತಾತ್ಮ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k