ನವದೆಹಲಿ: ನನಗೆ ಸಿಟ್ಟು ಬರುವುದಿಲ್ಲ, ನನ್ನ ಗಟ್ಟಿ ಧ್ವನಿ ಮ್ಯಾನುಫ್ಯಾಕ್ಚರಿಂಗ್ ಡಿಫೆಕ್ಟ್ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅವರು, ಕ್ರಿಮಿನಲ್ ಪ್ರೊಸೀಜರ್ ಮಸೂದೆ 2022(Criminal Procedure (Identification) Bill 2022)ಅನ್ನು ಇಂದು ಸದನದಲ್ಲಿ ಪರಿಗಣನೆಗೆ ಮತ್ತು ಅಂಗೀಕಾರಕ್ಕಾಗಿ ಅಮಿತ್ ಶಾ ಮಂಡಿಸಿದ್ದಾರೆ. ಅಪರಾಧದ ತನಿಖೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ತ್ವರಿತವಾಗಿ ಮಾಡಲು ಮತ್ತು ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವ ಗುರಿಯನ್ನು ಈ ಮಸೂದೆ ಹೊಂದಿದೆ ಎಂದು ಹೇಳಿದರು. ಖಾಸಗಿತನದ ಹಕ್ಕು ಸೇರಿದಂತೆ ಮಸೂದೆಯ ಬಗ್ಗೆ ವಿರೋಧ ಪಕ್ಷದ ಸದಸ್ಯರ ಆತಂಕವನ್ನು ನಿವಾರಿಸಲು ಅವರು ಪ್ರಯತ್ನಿಸಿದರು.
Advertisement
Advertisement
ಪ್ರತಿಪಕ್ಷ ಸದಸ್ಯರು ಟೀಕೆ ಮಾಡಿದಾಗ, ದಾದಾಗೆ ಸಚಿವರು ಕೋಪದ ಸ್ವರದಲ್ಲಿ ಪ್ರತಿಕ್ರಿಯಿಸುತ್ತಾರೆ ಎಂದು ತೃಣಮೂಲ ಕಾಂಗ್ರೆಸ್ ಸದಸ್ಯರೊಬ್ಬರು ಲಘು ಧಾಟಿಯಲ್ಲಿ ವ್ಯಂಗ್ಯವಾಡಿದಾಗ, ಸಚಿವರು ತಮ್ಮ ಉತ್ತರದಿಂದ ಎಲ್ಲರನ್ನೂ ನಗುವಂತೆ ಮಾಡಿದರು. ನಾನು ಯಾವತ್ತೂ ಯಾರನ್ನೂ ಬೈಯುವುದಿಲ್ಲ. ನನ್ನ ಧ್ವನಿ ಸ್ವಲ್ಪ ಗಟ್ಟಿಯಾಗಿದೆ. ಇದು ನನ್ನ ತಯಾರಿಕೆಯ ದೋಷವಾಗಿದೆ. ನಾನು ಕೋಪಗೊಳ್ಳುವುದಿಲ್ಲ, ಕಾಶ್ಮೀರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ ಎಂದು ಅವರು ಹೇಳಿದರು. ಇದನ್ನೂ ಓದಿ: ಬೆಲೆ ಏರಿಕೆ ಪ್ರಧಾನ ಮಂತ್ರಿ ಜನ್ ಧನ್ ಲೂಟ್ ಯೋಜನೆಯ ಭಾಗ: ರಾಹುಲ್ ಗಾಂಧಿ
Advertisement
ಸಂಸತ್ ಆಗಸ್ಟ್ 2019 ರಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ರದ್ದುಗೊಳಿಸುವ ಮಸೂದೆಯನ್ನು ಅಂಗೀಕರಿಸಿತು. ಮಸೂದೆ ಅಂಗೀಕಾರದ ವೇಳೆ ಅಮಿತ್ ಶಾ ಮತ್ತು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಚೌಧರಿ ಅವರಿಗೆ ಪ್ರತಿಕ್ರಿಯಿಸಿದ ಅಮಿತ್ ಶಾ, ನಾವು ಏನು ಮಾಡುತ್ತಿದ್ದೇವೆ ಎಂದು ನೀವು ಭಾವಿಸುತ್ತೀರಿ. ನಾವು ದೇಶಕ್ಕಾಗಿ ನಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.