ನವದೆಹಲಿ: ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರಿಂದು ಹಿಂಸಾಚಾರ ಪೀಡಿತ ಮಣಿಪುರದ (Manipur violence) ಪರಿಸ್ಥಿತಿ, ಭದ್ರತಾ ವ್ಯವಸ್ಥೆಗಳ ಕುರಿತು ಸಭೆ ನಡೆಸಿದ್ದಾರೆ.
ಮಹಾರಾಷ್ಟ್ರ ಚುನಾವಣಾ ರ‍್ಯಾಲಿಯನ್ನು ರದ್ದುಗೊಳಿಸಿ ಭಾನುವಾರವೇ ದೆಹಲಿಗೆ ವಾಪಸ್ಸಾದ ಅಮಿತ್ ಶಾ ಉನ್ನತ ಅಧಿಕಾರಿಗಳಿಂದ ವಸ್ತುಸ್ಥಿತಿ ವಿವರ ಪಡೆದುಕೊಂಡಿದ್ದಾರೆ. ಅಲ್ಲದೇ ಈಶಾನ್ಯ ರಾಜ್ಯದಲ್ಲಿ ಶಾಂತಿಯುತ ವಾತಾವರಣ ಸ್ಥಾಪಿಸಲು ಕೈಗೊಳ್ಳಬೇಕಿರುವ ಕ್ರಮಗಳನ್ನು ಕುರಿತು ಚರ್ಚಿಸಿದ್ದಾರೆ. ಅಲ್ಲದೇ ಸೋಮವಾರ (ನ.18) ಗೃಹ ಸಚಿವಾಲಯದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮತ್ತೊಂದು ಉನ್ನತಮಟ್ಟದ ಸಭೆಯನ್ನು ನಿಗದಿಪಡಿಸಲಾಗಿದೆ. ಇದನ್ನೂ ಓದಿ: ‘ದಿ ಸಾಬರಮತಿ ರಿಪೋರ್ಟ್’ | ಗೋಧ್ರಾ ದುರಂತದ ಹಿಂದಿನ ಸತ್ಯ ಬಹಿರಂಗ – ಮೋದಿ ಶ್ಲಾಘನೆ
Advertisement
Advertisement
ಹಿಂಸಾಚಾರ ಭುಗಿಲೆದ್ದಿದ್ದೇಗೆ?
ಜಿರಿಬಾಮ್ ಜಿಲ್ಲೆಯಲ್ಲಿ ಉಗ್ರಗಾಮಿಗಳು ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳನ್ನು ಹತ್ಯೆ ಮಾಡಿರುವುದಕ್ಕೆ ಆಕ್ರೋಶಗೊಂಡ ಜನರು ಮೂವರು ರಾಜ್ಯ ಸಚಿವರು ಮತ್ತು ಆರು ಶಾಸಕರ ನಿವಾಸಗಳ ಮೇಲೆ ದಾಳಿ ಮಾಡಿದ್ದರು. ಇದಾದ ಬಳಿಕ ರಾಜ್ಯದಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ಜಾರಿಗೊಳಿಸಲಾಯಿತು. ಇದನ್ನೂ ಓದಿ: ರೈಲು ವಿಳಂಬ – ಸರಿಯಾದ ಸಮಯಕ್ಕೆ ವರನನ್ನು ಮದುವೆಗೆ ಕರೆದೊಯ್ದ ರೈಲ್ವೇ ಇಲಾಖೆ
Advertisement
Advertisement
ನಿಂಗ್‌ತೊಕೊಂಗ್‌ನಲ್ಲಿ ಲೋಕೋಪಯೋಗಿ ಸಚಿವ ಗೋವಿಂದಾಸ್ ಕೊಂತುಜಮ್, ಲಾಂಗ್‌ಮೇಡಾಂಗ್ ಬಜಾರ್‌ನಲ್ಲಿನ ಬಿಜೆಪಿ ಶಾಸಕ ವೈ ರಾಧೇಶ್ಯಾಮ್, ತೌಬಲ್ ಜಿಲ್ಲೆಯ ವಾಂಗ್‌ಜಿಂಗ್ ತೆಂತಾದ ಬಿಜೆಪಿ ಶಾಸಕ ಪಿ. ಬ್ರೋಜೆನ್ ಮತ್ತು ಇಂಫಾಲ್ ಪೂರ್ವ ಜಿಲ್ಲೆಯ ಖುಂಡ್ರಕ್‌ಪಾಮ್‌ನ ಕಾಂಗ್ರೆಸ್ ಶಾಸಕ ತೊಕ್ಚೋಮ್ ಲೋಕೇಶ್ವರ್ ಅವರ ಮನೆಗಳಿಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿತ್ತು. ಇದರಿಂದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿತು. ಇದನ್ನೂ ಓದಿ: ಮಸ್ಕ್ ಜೊತೆ ಒಪ್ಪಂದ – ಫಸ್ಟ್ ಟೈಂ ಸ್ಪೇಸ್ ಎಕ್ಸ್ ರಾಕೆಟ್‌ನಲ್ಲಿ ಹಾರಲಿದೆ ಇಸ್ರೋ ಉಪಗ್ರಹ
ರುಂಡವಿಲ್ಲದ ಮಹಿಳೆಯ ಮೃತದೇಹ ಪತ್ತೆ:
ಇತ್ತೀಚೆಗೆ ಮಣಿಪುರದ ಜಿರಿಬಾಮ್‌ನಿಂದ (Manipur Jiribam) ನಾಪತ್ತೆಯಾಗಿದ್ದ 6 ಮಂದಿ ನಾಪತ್ತೆಯಾಗಿದ್ದರು. ಈ ಪೈಕಿ ಓರ್ವ ಮಹಿಳೆ ಮತ್ತು ಇಬ್ಬರು ಮಕ್ಕಳ ಮೃತದೇಹ ಜಿರಿಬಾಮ್ ಜಿಲ್ಲೆಯ ಬೊರೊಬೆಕ್ರಾದಿಂದ 16 ಕಿಮೀ ದೂರದ ನದಿಯಲ್ಲಿ (River) ಪತ್ತೆಯಾಗಿತ್ತು. ಈ ಬೆನ್ನಲ್ಲೇ ಭಾನುವಾರ (ಇಂದು) ಬೆಳಗ್ಗೆ ರುಂಡವಿಲ್ಲದ ಮತ್ತೊಂದು ಮಹಿಳೆಯ ಮೃತದೇಹ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ, ಜೊತೆಗೆ ಉಗ್ರರು ಒತ್ತೆಯಾಳಾಗಿ ಇರಿಸಿದ್ದರು ಎನ್ನಲಾದ 2 ವರ್ಷದ ಮಗುವಿನ ದೇಹವು ಪತ್ತೆಯಾಗಿದೆ ಎಂದು ವರದಿಯಾಗಿದೆ. ಜಿರಿಬಾಮ್ ಜಿಲ್ಲೆಯ ಗಡಿಯಲ್ಲಿರುವ ಬರಾಕ್ ನದಿಯಲ್ಲಿ ತೇಲಿಬರುತ್ತಿದ್ದ ಮೃತದೇಹವನ್ನು ಅಸ್ಸಾಂನ ಕ್ಯಾಚರ್ ಜಿಲ್ಲೆಯ ಪೊಲೀಸರು ಪತ್ತೆಹಚ್ಚಿದ್ದಾರೆ. ಆದ್ರೆ ಮೃತದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ. ಒಟ್ಟಿನಲ್ಲಿ ನಾಪತ್ತೆಯಾದ 6 ಮಂದಿಯಲ್ಲಿ ಇವರೂ ಒಬ್ಬರೆಂದು ಶಂಕಿಸಲಾಗಿದೆ. 4ನೇ ಮೃತದೇಹ ಪತ್ತೆಯಾದ ಬೆನ್ನಲ್ಲೇ ಮಣಿಪುರದಲ್ಲಿ ಉದ್ವಿಗ್ನತೆ ಮತ್ತೆ ಹೆಚ್ಚಾಗಿದೆ.