-ನೀವು ಮಾತಾಡಿದ್ದು ಸಾಕು, ಸುಮ್ನಿರಿ – ಅನಂತ್‍ಕುಮಾರ್ ಹೆಗ್ಡೆಗೆ ಶಾ ವಾರ್ನಿಂಗ್
ಬೆಂಗಳೂರು: ಮಹದಾಯಿ ವಿವಾದ ತಿರುಗುಬಾಣವಾಗಿದ್ದಕ್ಕೆ ಕೇಸರಿ ನಾಯಕರು ಕಂಗಾಲಾಗಿದ್ದಾರೆ. ಪಕ್ಷದ ವಿರುದ್ಧವೇ ಟೀಕೆಗಳ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೆಂಡಾಮಂಡಲರಾಗಿದ್ದಾರೆ.
Advertisement
ಚುನಾವಣಾ ಉಸ್ತುವಾರಿಗಳಾದ ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್ ಹಾಗೂ ಪಿಯೂಷ್ ಗೋಯಲ್ ಮೇಲೆ ಅಮಿತ್ ಶಾ ಗರಂ ಆಗಿದ್ದು, ಎಲೆಕ್ಷನ್ ತಂತ್ರವಾಗಿ ಬಳಸಿದ್ದ ಮಹದಾಯಿ ಅಸ್ತ್ರ ತಿರುಗಿ ಹೊಡೆತ ಕೊಟ್ಟಿದ್ದು ಹೇಗೆ? ಮಹದಾಯಿ ವಿಚಾರದಲ್ಲಿ ನಮ್ಮ ವಿರುದ್ಧವೇಕೆ ಜನ ಸಿಟ್ಟಾಗಿದ್ದಾರೆ. ಈ ಬಗ್ಗೆ ವರದಿ ಕೊಡಿ ಎಂದು ಇಬ್ಬರಿಗೂ ಸೂಚನೆ ನೀಡಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
Advertisement
Advertisement
ಈ ನಡುವೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗಳ ವಿರುದ್ಧವೂ ಅಮಿತ್ ಶಾ ಗರಂ ಆಗಿದ್ದಾರೆ. ಅನಂತ್ ಕುಮಾರ್ ಹೆಗ್ಡೆಗೂ ಸುಮ್ಮನಿರುವಂತೆ ಹೇಳಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
Advertisement
ಮಂಗಳವಾರ ನಡೆಯುವ ಕೋರ್ ಕಮೀಟಿ ಸಭೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಖಡಕ್ ಸೂಚನೆ ನೀಡಲಾಗಿದೆ. ಕೆಲ ಸಲಹೆಗಳನ್ನು ನೀಡಿರುವ ಶಾ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರಗಳನ್ನು ತಿಳಿಸುವಂತೆ ಸೂಚಿಸಿದ್ದಾರೆ. ಕೂಡಲೇ ರೈತರ ಪ್ರತಿಭಟನೆ ಹಿಂತೆಗೆದುಕೊಳ್ಳಲು ಮನವೊಲಿಸುವಂತೆ ಶಾ ತಾಕೀತು ಮಾಡಿದ್ದಾರೆ. ಶಾ ಬೀಸಿರುವ ಚಾಟಿ ಹಿನ್ನೆಲೆಯಲ್ಲಿ ಕೋರ್ ಕಮಿಟಿ ಬಳಿಕ ರಾಜ್ಯ ನಾಯಕರು ರೈತರ ಮನವೊಲಿಸಲಿಸಲಿದ್ದಾರೆ ಎಂದು ಹೇಳಲಾಗಿದೆ.