LatestMain PostNational

ಜನರನ್ನು ನೇರವಾಗಿ ಮಾತನಾಡಿಸಬೇಕು ಎಂದು ಬುಲೆಟ್ ಪ್ರೂಫ್ ಶೀಲ್ಡ್ ತೆಗೆದ ಶಾ

ಶ್ರೀನಗರ: ನಾನು ಜನರನ್ನು ನೇರವಾಗಿ ಮಾತನಾಡಿಸಬೇಕು ಎಂದು ಕೇಂದ್ರದ ಗೃಹ ಸಚಿವ ಅಮಿತ್ ಶಾ ಬುಲೆಟ್ ಪ್ರೂಫ್ ಶೀಲ್ಡ್ ತೆಗೆದು ಶ್ರೀನಗರದಲ್ಲಿ ಜನರನ್ನು ಮಾತನಾಡಿಸಿದ್ದಾರೆ.

amith sha srinagara 2

ಅಮಿತ್ ಶಾ ಅವರು ಇಂದು ಶ್ರೀನಗರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ಮೊದಲು ಬುಲೆಟ್ ಪ್ರೂಫ್ ಗ್ಲಾಸ್ ಶೀಲ್ಡ್ ಅನ್ನು ತೆಗೆದು ಜನರನ್ನು ನೇರವಾಗಿ ಮಾತನಾಡಿದರು. ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೊಂದಿಗೆ ಶೇರ್-ಎ-ಕಾಶ್ಮೀರ್ ಕನ್ವೆನ್ಷನ್ ಸೆಂಟರ್‍ನಲ್ಲಿ ವೇದಿಕೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಜನರನ್ನು ನೋಡಿ ಬುಲೆಟ್ ಪ್ರೂಫ್ ಶೀಲ್ಡ್ ಅನ್ನು ತೆಗೆದು ಹಾಕಲು ಆದೇಶಿಸಿದರು. ಲೆಫ್ಟಿನೆಂಟ್ ಗವರ್ನರ್ ಅವರ ಮೇಲ್ವಿಚಾರಣೆಯಲ್ಲಿ ಭದ್ರತಾ ಸಿಬ್ಬಂದಿ ಗಾಜಿನ ಹೊದಿಕೆಯನ್ನು ತೆಗೆದರು. ಈ ವೇಳೆ ಜನರೊಂದಿಗೆ ಶಾ ಮಾತನಾಡಿದರು. ಇದನ್ನೂ ಓದಿ: ತಂದೆ ಹಿಂದೂ, ತಾಯಿ ಮುಸ್ಲಿಂ, ನಾನು ಜಾತ್ಯತೀತ ಕುಟುಂಬಕ್ಕೆ ಸೇರಿದ್ದೇನೆ: ಸಮೀರ್ ವಾಂಖೆಡೆ ತೀಕ್ಷ್ಣ ಪ್ರತಿಕ್ರಿಯೆ

amith sha srinagara 1

ಬಳಿಕ ವೇದಿಕೆ ಮೇಲೆ ಬಂದು ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ನನ್ನನ್ನು ನಿಂದಿಸಲಾಯಿತು, ಖಂಡಿಸಲಾಯಿತು. ಇಂದು ನಾನು ನಿಮ್ಮೊಂದಿಗೆ ಸ್ಪಷ್ಟವಾಗಿ ಮಾತನಾಡಲು ಬಯಸುತ್ತೇನೆ, ಅದಕ್ಕಾಗಿಯೇ ಇಲ್ಲಿ ಬುಲೆಟ್ ಪ್ರೂಫ್ ಶೀಲ್ಡ್ ಅಥವಾ ಭದ್ರತೆ ಇಲ್ಲ. ನಾನು ನಿಮ್ಮ ಮುಂದೆ ಈ ರೀತಿ ನಿಂತಿದ್ದೇನೆ ಎಂದರು.

ಕಾಶ್ಮೀರ, ಜಮ್ಮು ಮತ್ತು ಹೊಸದಾಗಿ ಸೃಷ್ಟಿಯಾದ ಲಡಾಖ್ ಅನ್ನು ಅಭಿವೃದ್ಧಿಯ ಹಾದಿಯಲ್ಲಿ ಇರಿಸುವ ಉದ್ದೇಶದಿಂದ 370ನೇ ವಿಧಿಯನ್ನು ರದ್ದು ಮಾಡಲಾಯಿತು. 2024ರ ವೇಳೆಗೆ ನಮ್ಮ ಪ್ರಯತ್ನದ ಫಲವನ್ನು ನೀವು ನೋಡುತ್ತೀರಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

amith sha srinagara 3

ಕಾಶ್ಮೀರ ಕಣಿವೆಯಲ್ಲಿ 5,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಮ್ಮುವಿನ ಜನರನ್ನು ಬದಿಗೆ ಸರಿಸುವ ಸಮಯ ಕೊನೆಗೊಂಡಿದೆ. ಈಗ ಕಾಶ್ಮೀರ ಮತ್ತು ಜಮ್ಮು ಎರಡನ್ನೂ ಒಟ್ಟಿಗೆ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆಯನ್ನು ವ್ಯಕ್ತಪಡಿಸಿದರು.

ಶನಿವಾರ ಶ್ರೀನಗರಕ್ಕೆ ಬಂದ ನಂತರ, ಅವರು ಈ ವರ್ಷದ ಆರಂಭದಲ್ಲಿ ಭಯೋತ್ಪಾದಕರಿಂದ ಕೊಲ್ಲಲ್ಪಟ್ಟ ಪೊಲೀಸ್ ಅಧಿಕಾರಿಯ ಕುಟುಂಬವನ್ನು ಭೇಟಿ ಮಾಡಿದರು. ಕಾಶ್ಮೀರದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದರು. ನಂತರ ಶಾ ಅವರು ಗಂದರ್‍ಬಾಲ್‍ನಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅಮಿತ್ ಶಾ ಅವರು ಸಾಂಪ್ರದಾಯಿಕವಾಗಿ ಫೆರಾನ್ ಧರಿಸಿದ್ದರು. ಇದನ್ನೂ ಓದಿ:  ಇಂದು ಕರ್ನಾಟಕದಲ್ಲಿ 290 ಪಾಸಿಟಿವ್, 10 ಸಾವು

amith sha srinagara 4

ಜಮ್ಮು ಮತ್ತು ಕಾಶ್ಮೀರಕ್ಕೆ ಮೂರು ದಿನಗಳ ಭೇಟಿ ನೀಡಿದ ಅಮಿತ್ ಶಾ, 2019 ರ ಆಗಸ್ಟ್ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸುವುದಾಗಿ ಘೋಷಿಸಿದರು. ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಿಗೆ ಇಳಿಸಿದರು. ಅದಕ್ಕೂ ಮೊದಲು, 2019ರಲ್ಲಿ ಬಿಜೆಪಿ ಅಧಿಕಾರವನ್ನು ಸ್ವೀಕರಿಸಿದ ನಂತರ, ಕೇಂದ್ರ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಇವರು ಕಾಶ್ಮೀರಕ್ಕೆ ಭೇಟಿ ನೀಡಿದ್ದರು.

Related Articles

Leave a Reply

Your email address will not be published. Required fields are marked *